ಸಾರಾಂಶ
ಶಿರಾ ತಾಲೂಕಿನಲ್ಲಿ ಮಳೆಯ ಆಗಮನಕ್ಕಾಗಿ ತುಪ್ಪದಕೋಣ ಗೊಲ್ಲರಹಟ್ಟಿಯಲ್ಲಿ ಮಳೆಗಾಗಿ ಕತ್ತೆಗಳ ಮದುವೆ ಮಾಡಲಾಗಿದ್ದು ರಾತ್ರಿಯೇ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ
ಕನ್ನಡಪ್ರಭ ವಾರ್ತೆ ಶಿರಾ
ಶಿರಾ ತಾಲೂಕಿನಲ್ಲಿ ಮಳೆಯ ಆಗಮನಕ್ಕಾಗಿ ತುಪ್ಪದಕೋಣ ಗೊಲ್ಲರಹಟ್ಟಿಯಲ್ಲಿ ಮಳೆಗಾಗಿ ಕತ್ತೆಗಳ ಮದುವೆ ಮಾಡಲಾಗಿದ್ದು ರಾತ್ರಿಯೇ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ವರುಣನ ಕೃಪೆಗಾಗಿ ಗ್ರಾಮದ ಕತ್ತೆಗಳನ್ನು ವಧುವರಂತೆ ಸಿಂಗರಿಸಿ ಮನುಷ್ಯರ ಮದುವೆಯಲ್ಲಿ ಪಾಲಿಸಲಾಗುವ ಎಲ್ಲಾ ನಿಯಮಗಳನ್ನು ಮತ್ತು ಸಂಪ್ರದಾಯಗಳನ್ನು ಪಾಲಿಸಿ ಕತ್ತೆಗಳ ಮದುವೆಯನ್ನು ಮಾಡಿಸಲಾಯಿತು. ಆ ಮೂಲಕ ದೇವರ ಕೃಪೆಯಿಂದ ಮಳೆಯಾಗಲಿ ಎಂದು ಆಶಿಸಿದರು. ಕಾರ್ಯಕ್ರಮದ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಎಲ್ಲಾ ಜನರು ಶ್ರದ್ಧಾ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಆಶ್ಚರ್ಯವೆಂಬಂತೆ ಗುರುವಾರ ರಾತ್ರಿ ಬುಕ್ಕಾಪಟ್ಟಣ ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದೆ.ಕಾರ್ಯಕ್ರಮದಲ್ಲಿ ಗಜೇಂದ್ರ ಸುಬ್ಬಣ್ಣ ಮಾರಗೊಂಡನ ಹಳ್ಳಿ ತುಪ್ಪದ ಕೋಣ ಗೊಲ್ಲರಹಟ್ಟಿ ಕರಿಯಣ್ಣ , ಮಹಾಲಿಂಗೇಗೌಡ್ರು, ಕುಂಬಾರಹಳ್ಳಿ ಶಾಂತಕುಮಾರ್ ಮಂಜುನಾಥ, ಗೊಲ್ಲರಹಟ್ಟಿಯ ಸಮಸ್ತ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಗಳ ಗ್ರಾಮಸ್ಥರು ಮೂಖಂಡರು ಗ್ರಾಮ ಪಂಚಾಯಿತಿ ಸದಸ್ಯರು ವಿ ಎಸ್ ಎಸ್ ಏನ್ ನಿರ್ದೇಶಕರು ಸರ್ವ ಪಕ್ಷಗಳ ಮುಖಂಡರು ಧಾರ್ಮಿಕ ಮುಖಂಡರು ತೋಟಿ ತಳವಾರದವರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.