ಬೈಲಹೊಂಗಲ : 10ಕ್ಕೂ ಅಧಿಕ ಮನೆಗಳಿಗೆ ಹಳ್ಳದ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ

| Published : Oct 20 2024, 02:10 AM IST / Updated: Oct 20 2024, 10:05 AM IST

ಸಾರಾಂಶ

ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದಲ್ಲಿನ 10ಕ್ಕೂ ಅಧಿಕ ಮನೆಗಳಿಗೆ ಹಳ್ಳದ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದ್ದು, ಜನರು ಪರದಾಡುವಂತಾಗಿದೆ.

 ಬೈಲಹೊಂಗಲ :  ತಾಲೂಕಿನ ಮರಕುಂಬಿ ಗ್ರಾಮದಲ್ಲಿನ 10ಕ್ಕೂ ಅಧಿಕ ಮನೆಗಳಿಗೆ ಹಳ್ಳದ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದ್ದು, ಜನರು ಪರದಾಡುವಂತಾಗಿದೆ.

ಕಳೆದ 3-4 ದಿನದಿಂದ ಸುರಿಯಿತ್ತಿರುವ ಮಳೆಗೆ ಗ್ರಾಮದ ಕೋಲಕಾರ ಓಣಿಯಲ್ಲಿ 10ಕ್ಕೂ ಅಧಿಕ ಮನೆಗಳಿಗೆ ಭಾರಿ ಪ್ರಮಾಣದ ಹಳ್ಳದ ನೀರು ಮತ್ತು ಚರಂಡಿ ನೀರು ನುಗ್ಗುತ್ತಿದ್ದು, ನೀರನ್ನು ಹೊರಹಾಕಲು ಸ್ಥಳೀಯರು ಪರದಾಡುತ್ತಿದ್ದಾರೆ, ವೃದ್ಧರು ಮತ್ತು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

 ಹಳ್ಳಕ್ಕೆ ಸಮರ್ಪಕ ತಡೆಗೋಡೆ ಇಲ್ಲದಿರುವುದು ಹಾಗೂ ಅಗಲವಾದ ಚರಂಡಿಗಳು ಇದ್ದರಿಂದ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರು ದಾಟಿ ಹೋಗಲು ದೊಡ್ಡ ಚರಂಡಿ ನಿರ್ಮಿಸಬೇಕು. ಹಳ್ಳವನ್ನು ಸ್ವಚ್ಛಗೊಳಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.