ಸಾರಾಂಶ
ವಿಜಯಪುರ: ಹೋಬಳಿಯಾದ್ಯಂತ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬಿಜ್ಜವರ ಗ್ರಾಪಂ ವ್ಯಾಪ್ತಿಯ ಗೋಣೂರು ಗ್ರಾಮದ ಕೆರೆ ಕೋಡಿ ಬಿದ್ದ ಪರಿಣಾಮ ರಾಜಕಾಲುವೆಯಲ್ಲಿ ಹರಿಯಬೇಕಾಗಿರುವ ನೀರು, ಗ್ರಾಮದೊಳಗೆ ನುಗ್ಗಿ ಹಾನಿಯುಂಟಾಗಿದೆ.
ಮನೆಗಳಿಗೆ ನುಗ್ಗಿದ ನೀರನ್ನು ರಾತ್ರಿಯಿಡಿ ಬಕೆಟ್‌ಗಳಲ್ಲಿ ತುಂಬಿ ಹೊರ ಹಾಕಬೇಕಾಯಿತು. ಕೆರೆ ಕೋಡಿಯಿಂದ ಹರಿಯುವ ನೀರು ಹರಿಯಬೇಕಾಗಿರುವ ರಾಜಕಾಲುವೆಯನ್ನು ಸಂಪೂರ್ಣ ಒತ್ತುವರಿ ಮಾಡಿಕೊಂಡಿರುವ ಕಾರಣ, ರೈತರ ದ್ರಾಕ್ಷಿ, ದಾಳಿಂಬೆ, ಹೂವು, ರಾಗಿ, ಹಿಪ್ಪುನೇರಳೆ ತೋಟಗಳಿಗೆ ನೀರು ನುಗ್ಗಿ, ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ.ರೈತ ಮಂಜುನಾಥ್ ಮಾತನಾಡಿ, ಎರಡು ವರ್ಷಗಳ ಹಿಂದೆ ಮಳೆ ಜಾಸ್ತಿಯಾಗಿ ಬೆಳೆಗಳು ನೀರಿನಲ್ಲಿ ಮುಳುಗಿದ್ದ ಕಾರಣ, ನಾವು ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದೆವು. ಅವರೂ ತಹಸೀಲ್ದಾರರಿಗೂ ಒತ್ತುವರಿಯಾಗಿರುವ ರಾಜಕಾಲುವೆಯನ್ನು ತೆರವುಗೊಳಿಸುವಂತೆ ಮನವಿ ಮಾಡಿಕೊಂಡಿದ್ದೆವು. ಆದರೆ ಯಾರೂ ಇತ್ತ ಗಮನ ಹರಿಸದ ಪರಿಣಾಮ ನಾವಿಂದು ಲಕ್ಷಾಂತರ ರು. ವೆಚ್ಚ ಮಾಡಿದಿದ್ದ ಬೆಳೆದಿದ್ದ ಬೆಳೆಗಳು ನಾಶವಾಗಿ ಸಂಕಷ್ಟಕ್ಕೆ ಒಳಗಾಗಿಗದ್ದೇವೆಂದು ಅಳಲು ತೋಡಿಕೊಂಡಿದ್ದಾರೆ.
ಕೋಟ್.........ಗ್ರಾಪಂನಿಂದ ಕಾಲುವೆ ಮಾಡಲು ಮುಂದಾಗಿದ್ದೆವು. ಆದರೆ, ಕೆಲ ರೈತರು ನಮ್ಮ ಜಮೀನಿನಲ್ಲಿ ಕಾಲುವೆ ತೆಗೆಯದಂತೆ ಅಡ್ಡಿಪಡಿಸಿದರು. ಜಿಲ್ಲಾಧಿಕಾರಿಗಳು ರಾಜಕಾಲುವೆ ಅಳತೆಗೆ ಆದೇಶಿಸಿ ಕ್ರಮ ಕೈಗೊಳ್ಳಬೇಕು. ನಷ್ಟ ಸಂಭವಿಸಿರುವ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು.
-ಎಸ್.ಮಹದೇವಪ್ಪ, ಅಧ್ಯಕ್ಷರು, ಬಿಜ್ಜವರ ಗ್ರಾಪಂ(ಫೋಟೋ ಕ್ಯಾಫ್ಷನ್)
ವಿಜಯಪುರ ಹೋಬಳಿ ಗೋಣೂರು ಗ್ರಾಮದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮುಚ್ಚಿರುವ ಕಾರಣ, ಕೆರೆ ಕೋಡಿ ನೀರು ರೈತರ ತೋಟಗಳಿಗೆ ನುಗ್ಗಿರುವುದು.