ಮಳೆ,ಗಾಳಿ: ಮುಂದುವರಿದ ಮನೆ ಕುಸಿತ, ವಿದ್ಯುತ್‌ ತಂತಿ ಮೇಲೆ ಉರುಳಿದ ಮರ

| Published : Jul 25 2024, 01:18 AM IST

ಸಾರಾಂಶ

ನರಸಿಂಹರಾಜಪುರ, ತಾಲೂಕಿನಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಯ ನಂತರ ಮಳೆ ಬಿಡುವು ನೀಡಿದ್ದು ಅಲ್ಲಲ್ಲಿ ಮನೆಯ ಗೋಡೆ ಕುಸಿತ ಪ್ರಕರಣಗಳು ಮಾತ್ರ ಮುಂದುವರಿದಿದೆ.

ಲವು ಗ್ರಾಮಗಳಲ್ಲಿ ದಿನಕ್ಕೆ 1-2 ಗಂಟೆ ಮಾತ್ರ ವಿದ್ಯುತ್

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಯ ನಂತರ ಮಳೆ ಬಿಡುವು ನೀಡಿದ್ದು ಅಲ್ಲಲ್ಲಿ ಮನೆಯ ಗೋಡೆ ಕುಸಿತ ಪ್ರಕರಣಗಳು ಮಾತ್ರ ಮುಂದುವರಿದಿದೆ.

ಗಾಳಿಗೆ ಹಲವು ಗ್ರಾಮಗಳಲ್ಲಿ ವಿದ್ಯುತ್‌ ತಂತಿಯ ಮೇಲೆ ಮರಗಳು ಉರುಳುತ್ತಿದೆ. ಇದರಿಂದ ಮೆಸ್ಕಾಂ ಇಲಾಖೆಗೆ ವಿದ್ಯುತ್ ನೀಡುವುದು ಸವಾಲಾಗಿದೆ. ವಿದ್ಯುತ್ ಕಣ್ಣು ಮುಚ್ಚಾಲೆ ಮುಂದುವರಿದಿದೆ. ಕೆಲವು ಗ್ರಾಮಗಳಲ್ಲಿ ದಿನಕ್ಕೆ 1-2 ಗಂಟೆ ವಿದ್ಯುತ್ ಬಂದು ಹೋಗುತ್ತಿದೆ. ವಿದ್ಯುತ್‌ ಬಂದ ತಕ್ಷಣ ತಮ್ಮ ಓವರ್ ಟ್ಯಾಂಕುಗಳಿಗೆ ಕುಡಿಯವ ನೀರನ್ನು ತುಂಬಿಸಿಕೊಳ್ಳುತ್ತಿದ್ದಾರೆ.

ಬುಧವಾರ ಸುರಿದ ಭಾರೀ ಮಳೆ ಗಾಳಿಗೆ ತಾಲೂಕಿನ ಕಾನೂರು ಗ್ರಾಮ ಪಂಚಾಯ್ತಿಯ ದಾವಣ ಗ್ರಾಮದ ಶೇಷಮ್ಮ ಅವರ ಮನೆ ಮೇಲೆ ಮತ್ತಿ ಮರ ಬಿದ್ದು ಹಾನಿಯಾಗಿದೆ. ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಕೊಪ್ಪ ವಾಸಿ ಲಲಿತಾ ಅವರ ಮನೆ ಹಿಂಬದಿ ಗೋಡೆ ಸಂಪೂರ್ಣ ಬಿರುಕು ಬಿಟ್ಟು ಹಾನಿಯಾಗಿದೆ.

ಬಾಳೆ ಗ್ರಾಮ ಪಂಚಾಯಿತಿ ಅಳೇಹಳ್ಳಿಯ ಹೆಗಲುವಾನಿ ರಮೇಶ ಎಂಬುವವರ ದನದ ಕೊಟ್ಟಿಗೆ ಸಂಪೂರ್ಣ ನೆಲಕ್ಕುರುಳಿದೆ. ಜಾನುವಾರುಗಳು ಕೊಟ್ಟಿಗೆಯಲ್ಲಿ ಇಲ್ಲದೇ ಇರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಳಿಕೊಪ್ಪ ಗ್ರಾಮದ ಸಿದ್ದನಕೊಡಿಗೆಯ ಸರೋಜಮ್ಮ ಎಂಬುವರ ಮನೆಯ ಮೇಲೆ ಮರ ಬಿದ್ದು ಮೇಲ್ಚಾವಣಿಗೆ ಹಾನಿಯಾಗಿದೆ.ಪಟ್ಟಣದ ವಾರ್ಡ 7 ರಲ್ಲಿ ಶ್ರೀಕಾಂತ್‌ ಎಂಬುವರ ಮನೆಗೆ ಪಕ್ಕದ ಮನೆಯ ಸೆಡ್‌ ರುಳಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ.