ಸ್ಥಳೀಯ ಪಟ್ಟಣ ಸೇರಿದಂತೆ ಸುತ್ತಮುತ್ತಲುಗಳಲ್ಲಿ ಬುಧವಾರ ಮಳೆ ಸುರಿಯಿತು.
ನಾಪೋಕ್ಲು: ಸ್ಥಳೀಯ ಪಟ್ಟಣ ಸೇರಿದಂತೆ ಸುತ್ತಮುತ್ತಲುಗಳಲ್ಲಿ ಬುಧವಾರ ಮಳೆ ಸುರಿಯಿತು.ಪಟ್ಟಣದಲ್ಲಿ ಸುಮಾರು 45 ಸೆಂಟ್ ಮಳೆಯಾಗಿದ್ದು ಬೇತು, ಹಳೆ ತಾಲೂಕು, ಅಜ್ಜಿ ಮುಟ್ಟ ಕೊಟ್ಟ ಮುಡಿ , ಹೊದ್ದೂರು , ಬಲಮುರಿ ವ್ಯಾಪ್ತಿಗಳಲ್ಲಿ ಸಾಧಾರಣ ಸುರಿದ ಮಳೆಯಿಂದ ಬೆಳೆಗಾರರು ಆತಂಕಕ್ಕೀಡಾದರು..ಜಿಲ್ಲೆಯಲ್ಲಿ ಕಾಫಿ ಕೊಯ್ಲು ಭರದಿಂದ ಸಾಗುತ್ತಿರುವ ಈ ದಿನಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಮಳೆ ರೈತರಲ್ಲೇ ಆತಂಕ ತಂದೊಡ್ಡಿದೆ. ಬತ್ತದ ಬೆಳೆ ಕೊಯ್ಲು ಪೂರ್ಣಗೊಳ್ಳುವ ಹಂತದಲ್ಲಿದೆ. ಕಾಫಿ ಕೊಯ್ಲು ಇದೀಗ ಭರದಿಂದ ಸಾಗುತ್ತಿದೆ. ಕೊಯ್ಲು ಮಾಡಿದ ಕಾಫಿಯನ್ನು ಕಣದಲ್ಲಿ ಹರವಿ ಒಣಗಿಸಲಾಗುತ್ತಿದೆ ಮೋಡ ಕವಿದ ವಾತಾವರಣದಿಂದ ಕಾಫಿ ಒಣಗಿಸಲು ತೊಡಕಾಗಿ ಬೆಳಗಾರರು ಆತಂಕಕ್ಕೆ ಒಳಗಾಗಿದ್ದಾರೆ.ನಾಪೋಕ್ಲು ವ್ಯಾಪ್ತಿಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿದ್ದು ಮಂಗಳವಾರ ರಾತ್ರಿ ನಾಪೋಕ್ಳು ಚೈಯಂಡಾಣೆ, ಕಕ್ಕಬೆ, ಬಲ್ಲಮಾವಟ್ಟಿ, ಅಯ್ಯಂಗೇರಿ, ಎಮ್ಮೆಮಾಡು, ಹೊದ್ದೂರು, ಕೊಟ್ಟಮುಡಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಲ್ಲಲ್ಲಿ ವರ್ಷದ ಪ್ರಥಮ ವರ್ಷಧಾರೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣದಿಂದಾಗಿ ರೈತರಿಗೆ ಕಾಫಿ ಒಣಗಿಸಲು ಸಮಸ್ಯೆಯಾಗಿದೆ. ಈಗ ಮಳೆಯಾದಲ್ಲಿ ಕೊಯ್ದು ಮಾಡಿದ ಕಾಫಿಗೂ ಹಾನಿಯಾಗುವುದಲ್ಲದೆ ಮುಂದಿನ ವರ್ಷದ ಫಸಲಿಕ್ಕೂ ಧಕ್ಕೆ ಆಗಲಿದೆ ಎಂದು ರೈತರು ಅಭಿಪ್ರಾಯಪಟ್ಟರು.