ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ತಾಲೂಕಿನಲ್ಲಿ ಗಾಳಿ, ಮಳೆಗೆ ಒಂದೆರಡು ಕಡೆಗಳಲ್ಲಿ ಮರಗಳು ನೆಲಕ್ಕೆರುಳಿಬಿದ್ದ ಪರಿಣಾಮ ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿ ಬಿದ್ದಿದ್ದರೆ, ಬೇತಮಂಗಲದಲ್ಲಿ ಅಲಿಕಲ್ಲು ಮಳೆ ಮತ್ತು ಗಾಳಿಗೆ ತೆಂಗಿನ ಮರ ಬಿದ್ದಿದೆ.ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ಪ್ರಾರಂಭವಾದ ಮಳೆ ತಾಲೂಕಿನ್ಯಾದ್ಯಂತ ೧೦ ಮೀಲಿ ಮೀಟರ್ ಮಳೆಯಾಗಿದೆ, ಇದರಿಂದ ತಾಲೂಕಿನಲ್ಲಿ ಮಧ್ಯಾಹ್ನದ ನಂತರ ತಂಪಿನ ವಾತವಾರಣ ಕಂಡು ಬಂತು.ಕೆಜಿಎಫ್‌ನಲ್ಲಿ ಉತ್ತಮ ಮಳೆಮಳೆ ಇಲ್ಲದೆ ನರಳಾಡುತ್ತಿದ್ದ ಕೆಜಿಎಫ್ ಜನರಿಗೆ ಗುರುವಾರ, ಶುಕ್ರವಾರ ಭರ್ಜರಿ ಮಳೆ ಸಂತಸ ತಂದಿದೆ. ಜನರು ಮಳೆಯಲ್ಲೇ ನೆನೆದುಕೊಂಡು ಹೋಗುತ್ತಿರುವ ದಶ್ಯ ಸಾಮಾನ್ಯವಾಗಿತ್ತು. ಒಮ್ಮೊಮ್ಮೆ ಜೋರಾಗಿ, ಮತ್ತೊಮ್ಮೆ ನಿಧಾನವಾಗಿ ಮಳೆ ಸುರಿದು ಭೂಮಿಯನ್ನು ತಂಪು ಮಾಡಿದೆ. ಬೇತಮಂಗಲದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರಂಭವಾದ ಮಳೆ ಒಂದು ಗಂಟೆಯ ಬಿಟ್ಟು ಬಿಡದೆ ಮಳೆ ಸುರಿಯಿತು, ಮಳೆಯಿಂದ ಹಳ್ಳಕೊಳ್ಳಗಳಲ್ಲಿ ಮಳೆನೀರು ಹರಿಯುತ್ತಿತ್ತು. ಕಳೆದ ಒಂದು ವಾರದಿಂದ ೩೭ ರಿಂದ ೪೧ ಡಿಗ್ರಿ ಉಷ್ಟಾಂಶ ನಗರದಲ್ಲಿ ದಾಖಲಾಗಿತ್ತು, ಜನರು ಮಳೆ ಬರುತ್ತೋ ಇಲ್ಲವೋ ಎಂದು ಪ್ರತಿ ದಿನ ಆಕಾಶ ಎದುರು ನೋಡುತ್ತಿದ್ದರು.
ಆಲಿಕಲ್ಲು ಮಳೆಯಿಂದ ಮಾವು ಬೆಳೆಗೆ ಹಾನಿಶುಕ್ರವಾರ ಮದ್ನಾಹ ಸುರಿದು ಗಾಳಿ ಮತ್ತು ಆಲಿಕಲ್ಲು ಮಳೆಗೆ ಬಹುತೇಕ ಮಾವಿನ ತೋಟಗಳಲ್ಲಿ ಇದ್ದ ಮಾವಿನ ಕಾಯಿ ನೆಲಕ್ಕೆ ಉರುಳಿದೆ, ಇದರಿಂದ ರೈತರ ಬಳಿ ವ್ಯಾಪಾರ ಮಾಡಿದ್ದ ಮಾವಿನ ತೋಟದ ವ್ಯಾಪರಿಗಳಿಗೆ ಅಪಾರ ನಷ್ಟ ಉಂಟಾಗಿದೆ, ಆಲಿಕಲ್ಲು ಮಳೆ ಬಂದಲ್ಲಿ ತೋಟಗಳಲ್ಲಿರುವ ಅಲ್ಪಸ್ವಲ್ಪ ಮಾವಿನ ಕಾಯಿಗೆ ಕಪ್ಪು ಚುಕ್ಕೆ ರೋಗ ಭಾದಿಸಲಿದೆ ಎಂದು ರೈತ ಹನುಮಂತಪ್ಪ ತಿಳಿಸಿದರು. ಮಳೆ ಸುರಿದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ನೀಗುವ ಸಾಧ್ಯತೆ ಇದೆ. ಇನ್ನು ಪ್ರತಿ ದಿನ ಉಪಯೋಗಿಸುತ್ತಿದ್ದ ಸೊಪ್ಪುಗಳ ಬೆಲೆ ಕೂಡ ದುಪಟ್ಟು ಆಗಿತ್ತು, ಕಾರಣ ಮಳೆ ಇಲ್ಲದೆ ತಾಜಾ ತರಕಾರಿಗಳ ಬೆಲೆ ಕೂಡ ಗಗನಕ್ಕೆ ಏರಿತ್ತು, ಮಳೆ ಬಂದ ಹಿನ್ನಲೆಯಲ್ಲಿ ರೈತರಿಗೆ ವರದಾನವಾಗಿದೆ.ಕೆಜಿಎಫ್ ತಾಲೂಕಿನ ವಿವಿಧೆಡೆ ತಂಪೆರೆದ ಮಳೆರಾಯ
ಮಳೆ ಇಲ್ಲದೆ ನರಳಾಡುತ್ತಿದ್ದ ಕೆಜಿಎಫ್ ಜನರಿಗೆ ಗುರುವಾರ, ಶುಕ್ರವಾರ ಭರ್ಜರಿ ಮಳೆ ಸಂತಸ ತಂದಿದೆ. ಜನರು ಮಳೆಯಲ್ಲೇ ನೆನೆದುಕೊಂಡು ಹೋಗುತ್ತಿರುವ ದಶ್ಯ ಸಾಮಾನ್ಯವಾಗಿತ್ತು. ಒಮ್ಮೊಮ್ಮೆ ಜೋರಾಗಿ, ಮತ್ತೊಮ್ಮೆ ನಿಧಾನವಾಗಿ ಮಳೆ ಸುರಿ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.