ವಿಛಿದ್ರಕಾರಿ ಶಕ್ತಿಗಳ ವಿರುದ್ಧ ಧ್ವನಿ ಎತ್ತಿ: ಹರೀಶ್‌ ಕುಮಾರ್‌

| Published : Aug 17 2025, 04:02 AM IST

ವಿಛಿದ್ರಕಾರಿ ಶಕ್ತಿಗಳ ವಿರುದ್ಧ ಧ್ವನಿ ಎತ್ತಿ: ಹರೀಶ್‌ ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

79ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಸಮಾಜದಲ್ಲಿ ವಿಛಿದ್ರಕಾರಿ ಶಕ್ತಿಗಳು ಸಾಮರಸ್ಯವನ್ನು ಕದಡುವ ಮೂಲಕ ದ್ವೇಷವನ್ನು ಹರಡಿ ರಾಜಕೀಯ ಶಕ್ತಿ ಪಡೆದು ಅಧಿಕಾರ ಪಡೆಯಲು ಹೆಚ್ಚು ಒತ್ತು ನೀಡುತ್ತಿವೆ. ಇದು ದೇಶದ ಭವಿಷ್ಯಕ್ಕೆ ಗಂಡಾತರವಾಗಿದ್ದು, ಇದರ ವಿರುದ್ಧ ಸಂಘಟಿತರಾಗಿ ಧ್ವನಿ ಎತ್ತಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಕರೆ ನೀಡಿದ್ದಾರೆ.

79ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕ ಜೆ.ಆರ್.ಲೋಬೊ, ಮಾಜಿ ಮೇಯರ್ ಸುರೇಶ್ ಬಳ್ಳಾಲ್, ಡಿಸಿಸಿ ಉಪಾಧ್ಯಕ್ಷರಾದ ಟಿ.ಹೊನ್ನಯ್ಯ, ನೀರಜ್ ಚಂದ್ರ ಪಾಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಸ್.ಅಪ್ಪಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಬ್ಲಾಕ್ ಅಧ್ಯಕ್ಷ ಜೆ.ಅಬ್ದುಲ್ ಸಲೀಂ, ನವೀನ್ ಡಿ ಸೌಝ, ಕೆ.ಪಿ. ಥೋಮಸ್, ಮುಖಂಡರಾದ ವಿಶ್ವನಾಥ್ ಬಜಾಲ್, ಲುಕ್ಮಾನ್ ಬಂಟ್ವಾಳ್, ಜಯಶೀಲ ಅಡ್ಯಂತಾಯ, ಹಯಾತುಲ್ಲಾ ಖಾಮಿಲ್, .ಟಿ.ಕೆ.ಸುಧೀರ್, ಟಿ.ಡಿ.ವಿಕಾಸ್ ಶೆಟ್ಟಿ, ಶಬ್ಬೀರ್.ಎಸ್, ಭಾಸ್ಕರ್ ರಾವ್, ಗಿರೀಶ್ ಶೆಟ್ಟಿ ಕದ್ರಿ, ಸಬಿತಾ ಮಿಸ್ಕಿತ್, ಚಂದ್ರಕಲಾ ಜೋಗಿ, ಗೀತಾ ಅತ್ತಾವರ, ಡೇನಿಸ್ ಡಿ ಸೌಝ ಮತ್ತಿತರರು ಇದ್ದರು.

ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕಿಂ ಡಿಸೋಜಾ ಧ್ವಜ ಪ್ರಭಾರಿಯಾಗಿ ನಿರ್ವಹಿಸಿದರು.

-------------