ಕನ್ನಡಪ್ರಭ ವಾರ್ತೆ ಶಿರಾ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿ ಸಾಲ ಸೌಲಭ್ಯ ಹಾಗೂ ರಸಗೊಬ್ಬರ ಕೊಡಿಸುವಂತಹ ಪ್ರಾಮಾಣಿಕ ಪ್ರಯತ್ನ ಮತ್ತು ಸೇವೆ ಮಾಡುವ ಸಂಕಲ್ಪ ನನ್ನದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಕೆ.ಬಿ.ರಾಜಣ್ಣ ಹೇಳಿದರು. ಅವರು ಶಿರಾ ತಾಲೂಕಿನ ಯಂಜಲಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಬಿ.ರಾಜಣ್ಣ, ಉಪಾಧ್ಯಕ್ಷರಾಗಿ ಹನುಮಂತರಾಯಪ್ಪ ಅವಿರೋಧವಾಗಿ ಆಯ್ಕೆಯಾದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಎಲ್ಲರೂ ಒಗ್ಗೂಡಿ ಸಂಘವನ್ನು ಮುನ್ನಡೆಸಿದಾಗ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ ಎಂದರು. ಹುಲಿಕುಂಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ವೈ.ಕೆ. ತಿಪ್ಪೇಸ್ವಾಮಿ ರೈತರ ಕೃಷಿಗೆ ಸಹಕಾರವಾಗುವ ರೀತಿ ಸಾಲ ಸೌಲಭ್ಯವನ್ನು ನಿಗದಿತ ಸಮಯದಲ್ಲಿ ನೀಡುವ ನಿಟ್ಟಿನಲ್ಲಿ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕು. ರೈತರಿಗೆ ರಸಗೊಬ್ಬರ, ಚಿನ್ನದ ಮೇಲೆ ಸಾಲ ನೀಡುವತ್ತ ಹೆಚ್ಚು ಆಸಕ್ತಿ ವಹಿಸಿದರೆ ಸಂಘದ ಆರ್ಥಿಕ ಸುಭದ್ರತೆ ಸಾಧಿಸಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಅಂಬಿಕಾ, ನರಸಿಂಹಯ್ಯ, ಶಿವಲಿಂಗಪ್ಪ, ಕೆ. ತಿಪ್ಪೇಸ್ವಾಮಿ, ಸುರೇಶ್ ಕಾರ್ತಿಕ, ಎಂ.ಸಿದ್ದೇಶ್ವರ, ಓಬಣ್ಣ, ರಾಮಣ್ಣ, ಸುವರ್ಣಮ್ಮ, ಸಚಿನ್, ಹಟ್ಟಿ ಚಿನ್ನದ ಗಣಿ ಮಾಜಿ ನಿರ್ದೇಶಕ ಕೊಟ್ಟಿ ಆಶೋಕ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಸುಧ ತಿಪ್ಪೇಶ್ ಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೊಡ್ಡೇಗೌಡ, ವಿ ಎಸ್ ಎಸ್ ಎನ್ ಮಾಜಿ ನಿರ್ದೇಶಕ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ಈರಣ್ಣ, ಮುಖಂಡರಾದ ಶಿವಣ್ಣ, ನರಸಿಂಹಮೂರ್ತಿ, ಶಾಂತರಾಜು, ಮೇಲ್ವಿಚಾರಕ ಎನ್. ಸಿ. ವಿಠಲ್, ಕಾರ್ಯದರ್ಶಿ ಹೆಚ್. ನಾಗರಾಜು ಸೇರಿದಂತೆ ಹಲವಾರು ಮುಖಂಡರು ಇದ್ದರು, ಚುನಾವಣಾ ಅಧಿಕಾರಿಯಾಗಿ ಶ್ರೀನಿವಾಸ್ ಕಾರ್ಯನಿರ್ವಹಿಸಿದರು.
ಯಂಜಲಗೆರೆ ಸೊಸೈಟಿ ಅಧ್ಯಕ್ಷರಾಗಿ ರಾಜಣ್ಣ ಆಯ್ಕೆ
ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿ ಸಾಲ ಸೌಲಭ್ಯ ಹಾಗೂ ರಸಗೊಬ್ಬರ ಕೊಡಿಸುವಂತಹ ಪ್ರಾಮಾಣಿಕ ಪ್ರಯತ್ನ ಮತ್ತು ಸೇವೆ ಮಾಡುವ ಸಂಕಲ್ಪ ನನ್ನದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಕೆ.ಬಿ.ರಾಜಣ್ಣ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.