ಆಧುನಿಕ ಭಾರತದ ನಿರ್ಮಾಣದಲ್ಲಿ ರಾಜೀವ ಗಾಂಧಿ ಕೊಡುಗೆ ಅಪಾರ: ಭೀಮಸಿ ಮಗದುಮ್‌

| Published : May 22 2025, 12:52 AM IST

ಆಧುನಿಕ ಭಾರತದ ನಿರ್ಮಾಣದಲ್ಲಿ ರಾಜೀವ ಗಾಂಧಿ ಕೊಡುಗೆ ಅಪಾರ: ಭೀಮಸಿ ಮಗದುಮ್‌
Share this Article
  • FB
  • TW
  • Linkdin
  • Email

ಸಾರಾಂಶ

ಬನಹಟ್ಟಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ರಾಜೀವ ಗಾಂಧಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ

ಆಧುನಿಕ ಭಾರತದ ನಿರ್ಮಾಣದಲ್ಲಿ ರಾಜೀವ ಗಾಂಧಿ ಅವರ ಕೊಡುಗೆ ಅಪಾರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಭೀಮಸಿ ಮಗದುಮ್‌ ಹೇಳಿದರು.

ಬನಹಟ್ಟಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ರಾಜೀವ ಗಾಂಧಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ದೇಶದಲ್ಲಿ ಐಟಿ ಉದ್ಯಮ, ದೂರಸಂಪರ್ಕ ಕ್ರಾಂತಿ ಮಾಡಿದ ಖ್ಯಾತಿ ರಾಜೀವ ಗಾಂಧಿಯವರಿಗೆ ಸಲ್ಲುತ್ತದೆ. ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡ ಅವರ ಯೋಜನೆಗಳು ಇಂದಿಗೂ ಪ್ರಸ್ತೂತವಾಗಿವೆ. ಅವರ ಆಡಳಿತ ಶೈಲಿ, ಬಡವರ ಪರ ಕಾಳಜಿ ನಮಗೆಲ್ಲ ಮಾರ್ಗದರ್ಶನವಾಗಿವೆ ಎಂದು ಹೇಳಿದರು.

ರಬಕವಿ-ಬನಹಟ್ಟಿ, ಮಹಾಲಿಂಗಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ ಹಾಗೂ ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ ಮಾತನಾಡಿ, ದೇಶದಲ್ಲಿ ಪಂಚಾಯತ್ ರಾಜ್ಯ ವ್ಯವಸ್ಥೆ ಬಲವರ್ಧನೆ, ೧೮ ವಯಸ್ಸಿನವರಿಗೆ ಮತದಾನದ ಹಕ್ಕು, ನವೋದಯ ಶಾಲೆಗಳ ನಿರ್ಮಾಣ, ಕಂಪ್ಯೂಟರೀಕರಣ, ಟೆಲಿಕಮ್ಯೂನಿಕೇಷನ್‌ನಲ್ಲಿ ಕ್ರಾಂತಿ ಮಾಡಿದ್ದರು. ಅವರ ಕೊಡುಗೆಯನ್ನು ಯುವ ಜನತೆ ಇಂದಿಗೆ ನೆನೆಯುತ್ತಾರೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಜೇಂದ್ರ ಭದ್ರನ್ನವರ, ಶೇಖರ ಹಕಲದಡ್ಡಿ, ರವೀಂದ್ರ ಬಾಡಗಿ, ಹೇಮಲತಾ ಪಟ್ಟಣ, ರೇಣುಕಾ ಮಡ್ಡಿಮನಿ, ವಿದ್ಯಾ ಬಿಳ್ಳೂರ, ಆಯಿಷಾ ಪಣಿಬಂದ, ಬಸವರಾಜ ಶಿರೋಳ, ನಾಗಪ್ಪ ಪಾಟೀಲ, ದೇವೇಂದ್ರ ಮಹಿಷವಾಡಗಿ, ಬಸಯ್ಯ ಉಳವಿಮಠ ಸೇರಿದಂತೆ ಅನೇಕರು ಇದ್ದರು.