ಸಾರಾಂಶ
ದಾಬಸ್‍ಪೇಟೆ: ಸೋಂಪುರ ಹೋಬಳಿಯ ದೇವರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ತೆರವಾದ ಸ್ಥಾನಗಳಿಗೆ ಅಧ್ಯಕ್ಷರಾಗಿ ಡಿ.ಜಿ.ರಾಜಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಡಿ.ವಿ.ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಭಾಸ್ಕರ್ ಘೋಷಿಸಿದರು. ನೂತನ ಅಧ್ಯಕ್ಷ ಡಿ.ಜಿ.ರಾಜಕುಮಾರ್ ಮಾತನಾಡಿ, ನನ್ನನ್ನು ಅವಿರೋಧ ಅಧ್ಯಕ್ಷರಾಗಿ ಆಯ್ಕೆಮಾಡಿದ ನಿರ್ದೇಶಕರಿಗೆ, ವಿಶೇಷವಾಗಿ ವಿಎಸ್ ಎಸ್ ಎನ್ ಸಂಘದ ಅಧ್ಯಕ್ಷರಾದ ಜಗಜ್ಯೋತಿ ಬಸವೇಶ್ವರ ಹಾಗೂ ಗ್ರಾಪಂ ಸದಸ್ಯರಾದ ಸತೀಶ್ ಪಟೇಲ್ ಅವರ ಸಹಕಾರದಿಂದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು, ಎಲ್ಲಾ ನಿರ್ದೇಶಕರನ್ನು ಒಮ್ಮತಕ್ಕೆ ತೆಗೆದುಕೊಂಡು ಡೈರಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ವಿಎಸ್‍ಎಸ್‍ಎನ್ ಸಂಘದ ಅಧ್ಯಕ್ಷ ಜಗಜ್ಯೋತಿ ಬಸವೇಶ್ವರ, ಗ್ರಾಪಂ ಸದಸ್ಯ ಸತೀಶ್ ಪಟೇಲ್, ಕಾರ್ಯದರ್ಶಿ ವೆಂಕಟೇಶ್, ನಿರ್ದೇಶಕರಾದ ಶಂಕರರಾಜು, ನಾಗರಾಜು, ಈಶ್ವರಪ್ಪ, ಗಂಗಾಧರ್ ಸ್ವಾಮಿ, ನಿರಂಜನಮೂರ್ತಿ, ಬೇಬಿಕಲಾ, ಶಾರದಮ್ಮ, ಪುಷ್ಪಲತಾ, ರುದ್ರಯ್ಯ, ಚಂದ್ರಶೇಖರಯ್ಯ ಮತ್ತಿತರರಿದ್ದರು.
--------- ಸೋಂಪುರ ಹೋಬಳಿಯ ದೇವರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಜಿ.ರಾಜಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಡಿ.ವಿ.ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಕ್ಕೆ ನಿರ್ದೇಶಕರು ಅಭಿನಂದಿಸಿ ಸನ್ಮಾನಿಸಿದರು.;Resize=(128,128))
;Resize=(128,128))
;Resize=(128,128))