ಧಾರವಾಡ ರಂಗಾಯಣಕ್ಕೆ ರಾಜು ತಾಳಿಕೋಟೆ ನಿರ್ದೇಶಕ

| Published : Aug 13 2024, 12:52 AM IST

ಸಾರಾಂಶ

ಮೂಲತಃ ರಾಜು ತಾಳಿಕೋಟೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಿಗಿ ಗ್ರಾಮದವರು. ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿ ಪ್ರಸಿದ್ಧ ಕಲಾವಿದರು ಹೌದು. ಇವರ ಮೂಲ ಹೆಸರು ರಾಜೇಸಾಬ ಮುಕ್ತುಮಸಾಬ್ ತಾಳಿಕೋಟಿ.

ಧಾರವಾಡ: ಕಳೆದ ಒಂದುವರೆ ವರ್ಷದಿಂದ ಖಾಲಿ ಉಳಿದ ಧಾರವಾಡ ರಂಗಾಯಣಕ್ಕೆ ಕಲಿಯುಗದ ಕುಡುಕು ಖ್ಯಾತಿಯ ರಾಜು ತಾಳಿಕೋಟೆ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿ, ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಕಳೆದ 2023ರ ಮಾರ್ಚ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಸಮಯದಲ್ಲಿ ನಿರ್ದೇಶಕರಾಗಿದ್ದ ರಮೇಶ ಪರವಿನಾಯ್ಕರ ಅಧಿಕಾರವಧಿ ಪೂರ್ಣಗೊಂಡಿತ್ತು. ನಂತರ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ದೇಶಕರ ನೇಮಕ ಮಾಡುವಲ್ಲಿ ಸಾಕಷ್ಟು ವಿಳಂಬ ಧೋರಣೆ ಅನುಸಿತು. ಧಾರವಾಡ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಜಾನಪದ ಕಲಾವಿದೆ ವಿಶ್ವೇಶ್ವರಿ ಹಿರೇಮಠ, ನಾಟಕ ಕಲಾವಿದ ರಾಜು ತಾಳಿಕೋಟೆ, ಮಹಾದೇವ ಹಡಪದ ಅನೇಕರು ಅರ್ಜಿ ಸಲ್ಲಿಸಿದ್ದರು. ಕಡೆಗೂ ಸರ್ಕಾರ ನಿರ್ದೇಶಕರನ್ನು ನೇಮಕ ಮಾಡಿದೆ.

ರಂಗಭೂಮಿಯ ಹಿನ್ನೆಲೆ:ಮೂಲತಃ ರಾಜು ತಾಳಿಕೋಟೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಿಗಿ ಗ್ರಾಮದವರು. ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿ ಪ್ರಸಿದ್ಧ ಕಲಾವಿದರು ಹೌದು. ಇವರ ಮೂಲ ಹೆಸರು ರಾಜೇಸಾಬ ಮುಕ್ತುಮಸಾಬ್ ತಾಳಿಕೋಟಿ.ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾದ ನಟ. ಪ್ರಸ್ತುತ ತಾಳಿಕೋಟಿ ಗ್ರಾಮದಲ್ಲಿ ಕುಟುಂಬದೊಡನೆ ವಾಸವಾಗಿ ದ್ರಾಕ್ಷಿ ಕೃಷಿಯಲ್ಲಿ ತೊಡಗಿದ್ದಾರೆ. ಇವರ ತಂದೆ-ತಾಯಿಗಳು ಖಾಸ್ಗತೇಶ್ವರ ನಾಟ್ಯ ಸಂಘ'''' ಸ್ಥಾಪಿಸಿ ರಾಜ್ಯಾದ್ಯಂತ ಪ್ರದರ್ಶನ ನೀಡಿದ್ದಾರೆ.ನಾಲ್ಕನೇ ತರಗತಿಗೆ ಶಾಲೆಗೆ ವಿದಾಯ ಹೇಳಿದ ರಾಜು, ತಂದೆಯ ನಂತರ ಅಣ್ಣ ಜತೆ ಸೇರಿ ನಾಟಕ ಕಂಪನಿ ನೆಡೆಸುತ್ತಾರೆ. ರಸ್ತೆಯಲ್ಲಿ ಚಕ್ಕಲಿ ಮಾರಾಟ, ಹೋಟೆಲ್ ಕ್ಲೀನರ್, ಗೇಟ್ ಕೀಪರ್ ಹೀಗೆ ಹೊಟ್ಟೆಪಾಡಿಗೆ ಹತ್ತಾರು ಕೆಲಸ ಮಾಡಿದ್ದಾರೆ. ನಿರ್ದೇಶಕ ಆನಂದ್ ರಾಜು ಅವರ `ಹೆಂಡ್ತಿ ಅಂದ್ರೆ ಹೆಂಡ್ತಿ'''' ಚಿತ್ರದ ಮೂಲಕ ಸಿನಿರಂಗಕ್ಕೂ ಕಾಲಿಟ್ಟರು. ಕೆಲ ಪಾತ್ರಗಳಲ್ಲಿ ಮಾಡಿದ್ದರು ಹೆಸರು ಬರಲಿಲ್ಲ. ಆದರೆ, ಯೋಗರಾಜ್ ಭಟ್ಟರ ಮನಸಾರೆ ಚಿತ್ರದ ಮೂಲಕ ತುಂಬಾ ಪ್ರಸಿದ್ಧಿ ಪಡೆದರು. `ಕಲಿಯುಗದ ಕುಡುಕ'''' ನಾಟಕದ ಮುಖಾಂತರ ತುಂಬಾ ಪ್ರಸಿದ್ಧಿಗೆ ಬಂದರು.