ಸಾಹಿತಿ ರಹಮತ್‌ ತರೀಕೆರೆಗೆ ರಾಜ್ಯೋತ್ಸವ ಪ್ರಶಸ್ತಿ

| Published : Oct 31 2025, 01:15 AM IST

ಸಾರಾಂಶ

ಚಿಕ್ಕಮಗಳೂರು, 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ರಹಮತ್‌ ತರೀಕೆರೆ ಭಾಜನರಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಸಮತಳದಲ್ಲಿ 1959ರಲ್ಲಿ ಜನಿಸಿದ ರಹಮತ್‌ ತರೀಕೆರೆ ಅವರು ಸಮತಳದಲ್ಲಿ , ತರೀಕೆರೆ, ಶಿವಮೊಗ್ಗ, ಮೈಸೂರುಗಳಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ರಹಮತ್‌ ತರೀಕೆರೆ ಭಾಜನರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಸಮತಳದಲ್ಲಿ 1959ರಲ್ಲಿ ಜನಿಸಿದ ರಹಮತ್‌ ತರೀಕೆರೆ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಮತಳದಲ್ಲಿ ಪೂರೈಸಿ ನಂತರ ತರೀಕೆರೆ, ಶಿವಮೊಗ್ಗ, ಮೈಸೂರುಗಳಲ್ಲಿ ಮಾಡಿದ್ದರು.

ಬಿಎನಲ್ಲಿ ಪ್ರಥಮ ಸ್ಥಾನಪಡೆದು ತೀನಂಶ್ರೀ ಚಿನ್ನದ ಪದಕ, ಎಂ.ಎ. ಪ್ರಥಮ ರ್‍ಯಾಂಕ್ ಗಳಿಸಿ 7 ಚಿನ್ನದ ಪದಕ ಪಡೆದಿದ್ದ ಅವರು ಅಧ್ಯಾಪಕ ವೃತ್ತಿಆರಿಸಿಕೊಂಡು ಶಿವಮೊಗ್ಗದ ಸಹ್ಯಾದ್ರಿ ಹಾಗೂ ಡಿವಿಎಸ್ ಕಾಲೇಜು, ಹಂಪಿಯ ಕನ್ನಡ ವಿಶ್ವವಿದ್ಯಾಲಯಗಳಲ್ಲಿ ಸುಮಾರು 1984 ರಿಂದ 2021 ಕಾರ್ಯನಿರ್ವಹಸಿದ್ದರು.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ (2023); ಮೈಸೂರು ವಿಶ್ವವಿದ್ಯಾನಿಲಯ ಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.

ಪ್ರತಿಸಂಸ್ಕೃತಿ, ಕತ್ತಿಯಂಚಿನ ದಾರಿ, ನೆತ್ತರ ಸೂತಕ, ಬಾಗಿಲಮಾತು, ಚಿಂತನೆಯ ಪಾಡು ಎಂಬ ಹಲವಾರು ಪ್ರಕಟಣೆಗಳನ್ನು ಹೊರತಂದಿದ್ದಾರೆ.

ಕರ್ನಾಟಕ ಸೂಫಿಗಳು, ಕರ್ನಾಟಕ ನಾಥಪಂಥ, ಕರ್ನಾಟಕ ಶಾಕ್ತಪಂಥ, ಕರ್ನಾಟಕ ಮೊಹರಂ, ರಾಜಧರ್ಮ, ಕರ್ನಾಟಕ ಗುರುಪಂಥದಂತಹ ಸಾಹಿತ್ಯ ವಿಮರ್ಶೆಗಳನ್ನು ಸಂಶೋಧನ ಮೀಮಾಂಸೆ, ಸಾಂಸ್ಕೃತಿಕ ಅಧ್ಯಯನ ಸಂಶೋಧನಾ ಕೃತಿಗಳನ್ನು ಬರೆದಿದ್ದಾರೆ.

ಇದಲ್ಲದೆ ಅನುವಾ, ಪ್ರವಾಸಕಥನದಂತಹ ಸಾಕಷ್ಟು ಪ್ರಕಾರಗಳಲ್ಲಿ ಸಿದ್ಧ ಹಸ್ತರಾದ ರೆಹಮತ್‌ ತರೀಕೆರೆ ಅವರ ಮರದೊಳಗಣ ಕಿಚ್ಚು, ಧರ್ಮಪರೀಕ್ಷೆ, ಬಹುತ್ವ ಕರ್ನಾಟಕ (ಚಿಂತನೆ); ಅಂಡಮಾನ್ ಕನಸು, ಕದಳಿ ಹೊಕ್ಕು ಬಂದೆ, ಜೆರುಸಲೆಂ (ಪ್ರವಾಸಕಥನ); ನಡೆದಷ್ಟೂ ನಾಡು, ಸಣ್ಣಸಂಗತಿ, ಹಾಸುಹೊಕ್ಕು (ಅಂಕಣ); ಲೋಕವಿರೋಧಿಗಳ ಜತೆಯಲ್ಲಿ, ನ್ಯಾಯನಿಷ್ಠುರಿಗಳ ಜತೆಯಲ್ಲಿ (ಸಂದರ್ಶನ); ಹಿತ್ತಲಜಗತ್ತು (ಲಲಿತಪ್ರಬಂಧ); ಕುಲುಮೆ (ಆತ್ಮಕಥೆ); ಅಮೀರ್‌ಬಾಯಿ ಕರ್ನಾಟಕಿ (ಜೀವನಚರಿತ್ರೆ): ವಸಾಹತುಪ್ರಜ್ಞೆ ಮತ್ತು ವಿಮೋಚನೆ (ಗೂಗಿ ತಿಯಾಂಗೊ ಅವರ ''''''''ಡಿಕಲೊನೈಜಿಂಗ್ ದ ಮೈಂಡ್'''''''' (ಅನುವಾದ) ಗಮನಾರ್ಹ ಸಾಹಿತ್ಯ ಕೃತಿಗಳು.

ಇವರ ಸಾಹಿತ್ಯ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ, ಕೇಂದ್ರ ಸಾಹಿತ್ಯ ಅಕಾಡೆಮಿ( 2010), ಜಿಎಸ್‌ ಶಿವರುದ್ರಪ್ಪ, ಹಾಮಾ ನಾಯಕ, ಪಿ.ಲಂಕೇಶ್, ವಸುದೇವ ಭೂಪಾಳಂ, ಸುನೀತಿಶೆಟ್ಟಿ, ವೀಚಿಕ್ಕವೀರಯ್ಯ, ಎಸ್.ಜಿ.ಸಣ್ಣಗುಡ್ಡಯ್ಯ, ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿ, ಪ್ರದೀಪ್, ಸಂದೇಶ, ಪಾಟೀಲ ಪುಟ್ಟಪ್ಪ, ಪ್ರೊ. ಕರೀಮುದ್ದೀನ್ ಸ್ಮಾರಕ ಪ್ರಶಸ್ತಿಗಳು ಸಂದಿವೆ.

ಹಲವಾರು ಕಡೆಗಳಲ್ಲಿ ಪ್ರವಾಸ ಕೈಗೋಮಡು ಉತ್ತಮ ಕೃತಗಳನ್ನು ರಚಿಸಿದ್ದಾರೆ.ಅವುಗಳಲ್ಲಿ ಪ್ಯಾಲೆಸ್ಟೈನ್ ಟರ್ಕಿ ಜೋರ್ಡಾನ್ ಇಸ್ರೇಲ್ ಈಜಿಪ್ಟ್ ಜರ್ಮನಿ ಕ್ರೋಶಿಯಾ ಸ್ಟೋವೇನಿಯಾ ನೆದರ್‌ಲ್ಯಾಂಡ್ಸ್ ಇಟಲಿ ಭೂತಾನ ನೇಪಾಳ ಅಮೆರಿಕಾ ಇರಾಕ್ ಇರಾನ್ ಸೌದಿ ಅರೇಬಿಯಾ ಪ್ರವಾಸ ಗಮನಾರ್ಹ.

-- ಬಾಕ್ಸ್--

ಪ್ರಶಸ್ತಿ ಬಂದಿರುವುದು ಬಹಳ ಖುಷಿಯಾಗುತ್ತಿದೆ. ಎಲ್ಲರ ಸಹಕಾರದಿಂದ ಈ ಪ್ರಶಸ್ತಿ ಬಂದಿದ್ದು, ಈ ಗೌರವ ತರೀಕೆರೆಗೆ ಸಲ್ಲುತ್ತದೆ- ರಹಮತ್‌ ತರೀಕೆರೆ

-- 30 ಕೆಸಿಕೆಎಂ 5