ಯಾವುದೇ ಕಲಾಪ್ರಕಾರವು ಯಾವುದೇ ವ್ಯಕ್ತಿಯನ್ನಾಗಲಿ, ಜಾತಿಯನ್ನಾಗಲಿ, ಮತ ಧರ್ಮವನ್ನಾಗಲಿ, ವ್ಯಕ್ತಿಯಲ್ಲಿನ ನಿಜವಾದ ಶ್ರದ್ಧೆ ಮತ್ತು ಪ್ರತಿಭೆಯನ್ನು ಮಾತ್ರ ಹೊರಹೊಮ್ಮುತ್ತದೆ. ಹೀಗೆ ಪಾರಿಜಾತ ದೇವಕಲೆಯನ್ನು ಮುಂದುವರಿಸಿಕೊಂಡು ಬಂದಿದ್ದು ಅದನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಬಿ.ಕೃಷ್ಣಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಮೀಪದ ದಾದನಟ್ಟಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಕುರಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಅಂತರಂಗದಲ್ಲಿ ಅಡಗಿರುವ ಕಲೆ ಕಲಾವಿದನ ಸ್ವತ್ತಾದರೆ ಅದನ್ನು ಪ್ರೋತ್ಸಾಹಿಸಿ, ಬೆಳೆಸಿ ಕಲಾವಿದನನ್ನು ಸಮಾಜದಲ್ಲಿ ಸ್ಥಾನಮಾನಗಳನ್ನು ದೊರಕಿಸುವ ಹಕ್ಕು ಮತ್ತು ಸ್ವತ್ತು ಕಲಾಪ್ರೇಕ್ಷಕರದ್ದಾಗಿದೆ ಎಂದರು. ದಾದನಟ್ಟಿಯ ಶಿವಾನಂದ ಮಠದ ನಿಜಾನಂದ ಮಹಾಸ್ವಾಮಿಗಳು ಮಾತನಾಡಿ, ಕಲೆ ಎಲ್ಲರಲ್ಲಿ ಅಡಗಿರುತ್ತದೆ. ಅದನ್ನು ಅಳವಡಿಸಿಕೊಂಡು, ಆರಾಧಿಸಿ, ಸಂಗೀತ ಶಾರದೆಯನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ. ಗ್ರಾಮೀಣ ಕಲೆಗಳಾದ ಭಜನೆ, ಲಾವಣಿ, ಗೀಗೀ, ಸಣ್ಣಾಟ, ದೊಡ್ಡಾಟ, ಡಪ್ಪು ಪದಗಳು ವಿಶೇಷವಾಗಿ ಜನಪದೀಯ ಕಲೆಗಳು, ಎಲ್ಲ ಕಲೆಗಳಿಗೂ ಮೂಲ ತಾಯಿ ಬೇರು ಎಂದು ವಿಶ್ಲೇಷಿಸಿದ ಸಿದ್ದಪ್ಪ ಕುರಿ ಅವರು ಕಲಾವಿದರಿಗೆ ಕಲಾಭಿಮಾನಿಗಳ ಪ್ರೋತ್ಸಾಹವೇ ಬಹುದೊಡ್ಡ ಶಕ್ತಿಯಾಗುತ್ತದೆ ಎಂದು ತಿಳಿಸಿದರು.ಈ ವೇಳೆ ಮುಕುಂದ ತುಬಾಕಿ, ಭೀಮರಾವ ತುಬಾಕಿ, ಭೀಮರಾವ ಕೃಷ್ಣಗೌಡರ, ಹಣಮಂತ ಕನಕಪ್ಪನವರ, ರಾಜು ಸೋನಾರ, ಸತ್ಯಪ್ಪ ಕೃಷ್ಣಗೌಡರ, ಮುರಳಿಧರ ತುಬಾಕಿ, ಯಲ್ಲಪ್ಪ ಬಿರಾದಾರ, ಸೈಯದ ಚಿತ್ರಭಾನುಕೋಟಿ, ಆನಂದ ಘೋರ್ಪಡೆ, ದಾದನಟ್ಟಿ-ಹೊಸಕೊಟಿ ಗ್ರಾಮಸ್ಥರು ಇದ್ದರು.