ಕನ್ನಡಪ್ರಭ ಪಟ್ಟಣಶೆಟ್ಟಿಗೆ ರಾಜ್ಯೋತ್ಸವ ಗೌರವ

| Published : Nov 01 2025, 03:15 AM IST

ಕನ್ನಡಪ್ರಭ ಪಟ್ಟಣಶೆಟ್ಟಿಗೆ ರಾಜ್ಯೋತ್ಸವ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ರಣ ಮಾಧ್ಯಮ ರಂಗದಲ್ಲಿ ಕಳೆದ 08 ವರ್ಷಗಳಿಂದ ಸಲ್ಲಿಸಿದ ಸೇವೆ ಪರಿಗಣಿಸಿ ಕನ್ನಡಪ್ರಭ ದಿನಪತ್ರಿಕೆಯ ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಗೌರವಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮುದ್ರಣ ಮಾಧ್ಯಮ ರಂಗದಲ್ಲಿ ಕಳೆದ 08 ವರ್ಷಗಳಿಂದ ಸಲ್ಲಿಸಿದ ಸೇವೆ ಪರಿಗಣಿಸಿ ಕನ್ನಡಪ್ರಭ ದಿನಪತ್ರಿಕೆಯ ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಗೌರವಕ್ಕೆ ಆಯ್ಕೆಯಾಗಿದ್ದಾರೆ. ನ.1ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ಇತರ ಗಣ್ಯರು ಗೌರವ ಸನ್ಮಾನ ನೀಡಲಿದ್ದಾರೆ. ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಮಟ್ಟದಲ್ಲಿ ಇರುವ ಸಮಸ್ಯೆಗಳ ಕುರಿತು ಸಾಕಷ್ಟು ಬಾರಿ ಪತ್ರಿಕೆಯ ಮೂಲಕ ಗಮನ ಸೆಳೆಯುವುದು ಅಲ್ಲದೆ ವರದಿ ಫಲಶ್ರುತಿ ಕಂಡಿರುವುದು ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ವಿಶೇಷ ಲೇಖನದ ಮೂಲಕ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದು ಜನರ ಸಮಸ್ಯೆಗಳಿಗೆ ಪತ್ರಿಕೆ ಮೂಲಕ ಸ್ಪಂದಿಸಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಇವರು, ಸದ್ಯ ಕನ್ನಡಪ್ರಭ ದಿನಪತ್ರಿಕೆಯ ದೇವರಹಿಪ್ಪರಗಿ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ವರ್ಷ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದು ವಿಶೇಷವಾಗಿದೆ. ರಾಜ್ಯೋತ್ಸವ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಹಲವರು ಅಭಿನಂದಿಸಿದ್ದಾರೆ.