ಸಂಘಟನಾ ಶಕ್ತಿ ಸೃಷ್ಟಿಗೆ ರಾಜ್ಯೋತ್ಸವ ಕಾರಣ

| Published : Nov 19 2025, 01:00 AM IST

ಸಾರಾಂಶ

ಸಾರ್ವಜನಿಕ ಸಂಘಟನಾ ಶಕ್ತಿಯು ಸುತ್ತಲಿನ ಪ್ರದೇಶ, ರಾಜ್ಯ ಹಾಗೂ ದೇಶದ ಸದೃಢತೆಗೆ ಪ್ರಗತಿಗೆ ಸಹಕಾರಿಯಾಗಿದೆ. ಸಂಘಟನೆಯಲ್ಲಿ ರಚನಾತ್ಮಕವಾಗಿ ಭಾಗವಹಿಸಿ ನಿರಂತರ ಶಿಸ್ತು ರೂಪಿಸಿಕೊಂಡು ಬಂದಲ್ಲಿ ವ್ಯಕ್ತಿತ್ವ ಬದಲಾವಣೆಯೊಂದಿಗೆ ದೇಶದ ಅಭಿವೃದ್ಧಿಗೆ ಪೂರಕವಾಗಿ ಸಹಾಯ ಮಾಡಲಿದೆ.

ಧಾರವಾಡ:

ಕನ್ನಡ ರಾಜ್ಯೋತ್ಸವ ಆಚರಣೆ ನಾಡು-ನುಡಿಗೆ ನಮನ ಸಲ್ಲಿಸುವುದಲ್ಲದೆ ಸಂಘಟನಾತ್ಮಕ ಶಕ್ತಿ ಸೃಷ್ಟಿಗೆ ಕಾರಣವಾಗಿದೆ ಎಂದು ಟಾಟಾ ಹಿಟಾಚಿ ಕನ್ಸ್ಟ್ರಕ್ಷನ್ ಉಪಾಧ್ಯಕ್ಷ ಗೋವಿಂದರಾಜ್ ಕುಲಕರ್ಣಿ ಹೇಳಿದರು.

ಇಲ್ಲಿಯ ಗುರುಕೃಪ ನಾಗರಿಕರ ಅಭಿವೃದ್ಧಿ ಸಂಘವು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸಂಘಟನಾ ಶಕ್ತಿಯು ಸುತ್ತಲಿನ ಪ್ರದೇಶ, ರಾಜ್ಯ ಹಾಗೂ ದೇಶದ ಸದೃಢತೆಗೆ ಪ್ರಗತಿಗೆ ಸಹಕಾರಿಯಾಗಿದೆ. ಸಂಘಟನೆಯಲ್ಲಿ ರಚನಾತ್ಮಕವಾಗಿ ಭಾಗವಹಿಸಿ ನಿರಂತರ ಶಿಸ್ತು ರೂಪಿಸಿಕೊಂಡು ಬಂದಲ್ಲಿ ವ್ಯಕ್ತಿತ್ವ ಬದಲಾವಣೆಯೊಂದಿಗೆ ದೇಶದ ಅಭಿವೃದ್ಧಿಗೆ ಪೂರಕವಾಗಿ ಸಹಾಯ ಮಾಡಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿದರು. ಉದ್ಘಾಟಕರಾಗಿ ಪ್ರವೀಣ ಗುರಿಕಾರ, ಅತಿಥಿಗಳಾಗಿ ನಟಿ ಚಿರಸುಮಾ ಎಂ.ಡಿ, ಪತ್ರಕರ್ತ ನಿಖೀಲ ಬಿರಾದಾರ ಮತ್ತು ಕವಿವಿ ಸಂಗೀತ ಉಪನ್ಯಾಸಕ ಡಾ. ಪರಶುರಾಮ ಕಟ್ಟಿಸಂಗಾವಿ ಭಾಗವಹಿಸಿದ್ದರು. ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಂಜಯ ಖಥಗಲ್ಲಿ, ಶಶಿಕಾಂತ್ ಹೊಂಬಾಳ, ವಿನೋದ ಜಾಂಬೋಟಕ, ಅರುಣ ಸಿದ್ದಣ್ಣವರ, ಮಹೇಶ ಹಿರೇಮಠ, ಪ್ರವೀಣ ಪಾಟೀಲ, ಅಬ್ದುಲಸಾಬ್ ಭಾಗವಾನ, ಮೈತ್ರಾದೇವಿ ವಸ್ತ್ರದ, ಕರುಣಾ ಜಾಂಬೋಟಕ, ಗುರುಪ್ರಸಾದ ದೇಸಾಯಿ, ಮಲ್ಲಿಕಾರ್ಜುನ ಹುಕ್ಕೇರಿ, ಸೋಮಲಿಂಗ ಹಲಗತ್ತಿ, ಸುರೇಶ ಚಿಂಚಲಿ, ಮಂಜುಳಾ ಸೂಸಿಮಠ, ಶಿವಕುಮಾರ ದೊಡಮನಿ ಇದ್ದರು.