ಗುಡ್ಡೆಹೊಸೂರಿನ ಶಾಲೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ

| Published : Nov 06 2025, 02:45 AM IST

ಸಾರಾಂಶ

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಗಣ್ಯರು ಧ್ವಜಾರೋಹಣ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು

ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗೇಂದ್ರ ಅವರು ಧ್ವಜಾರೋಹಣ ನಡೆಸಿದರು. ಈ ಸಂದರ್ಭ ಎಸ್.ಡಿ.ಎಂ.ಸಿ ಯ ಎಲ್ಲ ಸದಸ್ಯರು ಹಾಜರಿದ್ದರು. ಶಾಲಾ ಮಕ್ಕಳಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗೇಂದ್ರ ಆರ್‌ ಅವರು ವಹಿಸಿದ್ದರು. ದಿನದ ಮಹತ್ವವನ್ನು ಶಿಕ್ಷಕಿ ಎ.ವಿ ಮರಿಯಾ ಮಾತನಾಡಿದರು.

ಮುಖ್ಯ ಶಿಕ್ಷಕರಾದ ಸಣ್ಣಸ್ವಾಮಿ ಸ್ವಾಗತಿಸಿದರು. ಬಿ.ಎನ್.ಗೀತಾ ವಂದಿಸಿದರು. ಶಿಕ್ಷಕಿ ರುಕ್ಮೀಣಿ ಕಾರ್ಯಕ್ರಮ ನಿರೂಪಿಸಿದರು. ಪಿ.ಡಿ.ಯಶುಮತಿ ಅವರಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಂದ ಗುಡ್ಡೆಹೊಸೂರು ವೃತ್ತದಲ್ಲಿ ಕನ್ನಡ ಗೀತೆಗೆ ಮಕ್ಕಳಿಂದ ನೃತ್ಯ ನಡೆಸಲಾಯಿತು. ಇದು ಸಾರ್ವಜನಿಕರ ಗಮನ ಸೆಳೆಯಿತು.