ರಾಕೇಶ್‌ ಸಿದ್ದರಾಮಯ್ಯ ಪುಣ್ಯಸ್ಮರಣೆ

| Published : Aug 03 2025, 11:45 PM IST

ಸಾರಾಂಶ

ಅಂಗವಿಕಲರಾದ ರಾಜೇಶ್ ಮತ್ತು ಬಸವರಾಜ್ ಅವರಿಗೆ ಈ ವೇಳೆ ವ್ಹೀಲ್‌ಚೇರ್‌ ನೀಡಲಾಯಿತು. ವಾರ್ಡಿನ ಹಿರಿಯ ನಾಗರಿಕರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರುರಾಕೇಶ್ ಸಿದ್ದರಾಮಯ್ಯ ಅವರ ಪುಣ್ಯಸ್ಮರಣೆ ಅಂಗವಾಗಿ ವಾರ್ಡ್ ನಂ. 46ರ ಕನಕದಾಸನಗರ ದಟ್ಟಗಳ್ಳಿಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ರಾಕೇಶ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.ಅಂಗವಿಕಲರಾದ ರಾಜೇಶ್ ಮತ್ತು ಬಸವರಾಜ್ ಅವರಿಗೆ ಈ ವೇಳೆ ವ್ಹೀಲ್‌ಚೇರ್‌ ನೀಡಲಾಯಿತು. ವಾರ್ಡಿನ ಹಿರಿಯ ನಾಗರಿಕರನ್ನು ಗೌರವಿಸಲಾಯಿತು.ಈ ವೇಳೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಎಂಡಿಎ ಮಾಜಿ ಅಧ್ಯಕ್ಷ ಕೆ. ಮರಿಗೌಡ, ಜಿಪಂ ಮಾಜಿ ಸದಸ್ಯ ರಾಕೇಶ್ ಪಾಪಣ್ಣ, ನಗರ ಪಾಲಿಕೆ ಕಂದಾಯ ಅಧಿಕಾರಿ ಡಿ.ಸಿ. ಸೋಮಶೇಖರ್, ಹಿಂದುಳಿದ ವರ್ಗದ ಅಧ್ಯಕ್ಷ ಶಿವರಾಂ, ಕುರಿ ಮತ್ತು ಉಣ್ಣೆ ಅಧ್ಯಕ್ಷ ರಮೇಶ್, ಕೆಪಿಸಿಸಿ ಕಾರ್ಯದರ್ಶಿ ಶಿವ ನಾಗಪ್ಪ, ಕಾಂಗ್ರೆಸ್ ಮುಖಂಡರಾದ ಕೃಷ್ಣಕುಮಾರ್. ಸಿದ್ದರಾಮಣ್ಣ, ಗುರುಸ್ವಾಮಿ, ರಾಣಿಪ್ರಭ, ಸುಶೀಲಾ ನಂಜಪ್ಪ, ಸುಶೀಲಾ, ರವಿ ನಂದನ್, ಯೋಗೇಶ್ ಉಪ್ಪಾರ್, ಸುಶೀಲ ರಾವ್, ಸರೋಜಮ್ಮ, ಶಶಿಕಲಾ, ಆಯೋಜಕರಾದ ಕೆಪಿಸಿಸಿ ಒಬಿಸಿ ರಾಜ್ಯ ಕಾರ್ಯದರ್ಶಿ ಹರೀಶ್ ಮೊಗಣ್ಣ, ವಿಕ್ಕಿ ವಾಸ್, ಲಕ್ಷ್ಮಣರಾವ್, ಪ್ರಸನ್ನ ಅಪ್ಪಿ, ವಿಜಯ್ ಕುಮಾರ್, ನಾಗ, ಕಾರ್ತಿಕ್, ಪ್ರದೀಪ್, ಸಂತೋಷ, ರವೀಶ್, ನಂದನ್, ಮಧು ಮೊದಲಾದವರು ಇದ್ದರು.