ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ರಕ್ಷಾಬಂಧನ

| Published : Aug 21 2024, 12:34 AM IST / Updated: Aug 21 2024, 12:35 AM IST

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ರಕ್ಷಾಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

‘ರಕ್ಷಾಬಂಧನ’ದ ಆಧ್ಯಾತ್ಮಿಕ ಹಿನ್ನೆಲೆ ಹಾಗೂ ಈಶ್ವರೀಯ ಸಂದೇಶದ ಬಗ್ಗೆ ಅಪಾರ್ಟ್ಮೆಂಟ್‌ನ ನಿವಾಸಿಗಳಿಗೆ ಬಿ.ಕೆ. ಸೌರಭ ತಿಳಿಸಿದರು. ಶಾಖೆಯ ಮತ್ತೊಬ್ಬ ಶಿಕ್ಷಕಿ ಬಿ.ಕೆ. ಸುಜಾತಾ, ಸೇವಾ ಕೇಂದ್ರದಲ್ಲಿ ಕಲಿಸಿಕೊಡುವ ರಾಜಯೋಗ ಧ್ಯಾನದ ಬಗ್ಗೆ ಸಹ ಪ್ರಾಕ್ಟಿಕಲ್ ಆಗಿ ಸಭಿಕರಿಗೆ ಅನುಭವ ಮಾಡಿಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯ ಅರ್ಚನಾ ಸವರಿನ್ ಅಪಾರ್ಟ್ಮೆಂಟ್‌ನ ಟೆರೇಸ್ ಹಾಲ್‌ನಲ್ಲಿ ಆ.18ರ ಸಂಜೆ ಆಯೋಜಿಸಲಾದ ‘ರಕ್ಷಾ ಬಂಧನ’ ಕಾರ್ಯಕ್ರಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಣಿಪಾಲ್ ಶಾಖೆಯ ಸಂಚಾಲಕಿ ಬಿ.ಕೆ. ಸೌರಭ ನಡೆಸಿಕೊಟ್ಟರು.

‘ರಕ್ಷಾಬಂಧನ’ದ ಆಧ್ಯಾತ್ಮಿಕ ಹಿನ್ನೆಲೆ ಹಾಗೂ ಈಶ್ವರೀಯ ಸಂದೇಶದ ಬಗ್ಗೆ ಅಪಾರ್ಟ್ಮೆಂಟ್‌ನ ನಿವಾಸಿಗಳಿಗೆ ಬಿ.ಕೆ. ಸೌರಭ ತಿಳಿಸಿದರು. ಶಾಖೆಯ ಮತ್ತೊಬ್ಬ ಶಿಕ್ಷಕಿ ಬಿ.ಕೆ. ಸುಜಾತಾ, ಸೇವಾ ಕೇಂದ್ರದಲ್ಲಿ ಕಲಿಸಿಕೊಡುವ ರಾಜಯೋಗ ಧ್ಯಾನದ ಬಗ್ಗೆ ಸಹ ಪ್ರಾಕ್ಟಿಕಲ್ ಆಗಿ ಸಭಿಕರಿಗೆ ಅನುಭವ ಮಾಡಿಸಿಕೊಟ್ಟರು.

ನಂತರ ಎಲ್ಲರಿಗೂ ರಾಖಿಯನ್ನು ಕಟ್ಟಿ, ಸಿಹಿಯನ್ನು ಹಂಚುವ ಜೊತೆಗೆ ಕನ್ನಡದಲ್ಲಿ ಮುದ್ರಿಸಿದ ಸುಂದರವಾದ ಈಶ್ವರೀಯ ವರದಾನದ ಕಾರ್ಡ್‌ಗಳನ್ನು ನೀಡಿದರು. ಯಾರಿಗೂ ಬೇಡವಾದ ಪ್ರತಿಯೊಬ್ಬರಲ್ಲಿಯೂ ಬೇರೂರಿರುವ ದುರ್ಗುಣಗಳಲ್ಲಿ ಯಾವುದಾದರೊಂದನ್ನಾದರೂ ಸಹ ‘ಅವಗುಣ ಪೆಟ್ಟಿಗೆ’ಯಲ್ಲಿ ಹಾಕಲು ಹೇಳಿದಂತೆ, ಅನೇಕರು ತಮಗೆ ಬೇಡದ ಒಂದಾದರೂ ಅವಗುಣವನ್ನು ಚೀಟಿಯಲ್ಲಿ ಬರೆದು ಪೆಟ್ಟಿಗೆಯಲ್ಲಿ ಹಾಕಿ ಸುಟ್ಟಿದ್ದನ್ನು ನೋಡಿ ಸಂಭ್ರಮಿಸಿದರು.

ಸೇವಾ ಕೇಂದ್ರದಲ್ಲಿ ಪ್ರತಿ ಸೋಮವಾರದಿಂದ ಪ್ರಾರಂಭವಾಗುವ ಏಳು ದಿನಗಳ ಉಚಿತ ಬೇಸಿಕ್ ಕೋರ್ಸ್ ಮೂಲಕ ಜೀವನದಲ್ಲಿ ಬೇಕಾದ ಸುಖ- ಶಾಂತಿ ಮುಂತಾದವನ್ನು ಪಡೆಯಲು ಸಭಿಕರಿಗೆ ಕರೆ ಕೊಡಲಾಯಿತು.