ಪ್ರಧಾನಿಗೆ ಗಿಫ್ಟ್‌ ಕೊಟ್ಟ ರಕ್ಷಿತಾ ರಾಜು

| Published : Nov 03 2023, 12:30 AM IST

ಪ್ರಧಾನಿಗೆ ಗಿಫ್ಟ್‌ ಕೊಟ್ಟ ರಕ್ಷಿತಾ ರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿಗೆ ಗಿಫ್ಟ್‌ ಕೊಟ್ಟ ರಕ್ಷಿತಾ ರಾಜು
ಚಿಕ್ಕಮಗಳೂರು: ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುಡ್ನಳ್ಳಿ ಗ್ರಾಮ ಅಂಧ ಯುವತಿ ರಕ್ಷಿತಾ ರಾಜು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಟಿಟರ್‌ ಗಿಫ್ಟ್‌ ಆಗಿ ಕೊಟ್ಟಿದ್ದಾರೆ. ಚೀನಾದ ಹಾಂಗ್‌ಝೋನಲ್ಲಿ ನಡೆದ ಪ್ಯಾರಾ ಏಷ್ಯನ್‌ ಗೇಮ್‌ನಲ್ಲಿ ರಕ್ಷಿತಾ ರಾಜು ಅವರು 1500 ಮೀಟರ್‌ ಓಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದರು. ನವ ದೆಹಲಿಯಲ್ಲಿ ಪ್ರಧಾನಿಯವರು ಪ್ಯಾರಾ ಏಷ್ಯನ್ ಗೇಮ್‌ನಲ್ಲಿ ವಿಜೇತರಾದ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ರಕ್ಷಿತಾ ರಾಜು ಅವರು ಪ್ರಧಾನಮಂತ್ರಿಯವರಿಗೆ ತಾನು ಓಟದಲ್ಲಿ ಬಳಸಿದ ಟಿಟರ್‌ನ್ನು ಗಿಫ್ಟ್‌ ಆಗಿ ಕೊಟ್ಟರು. ಇದೇ ಟಿಟರ್‌ ಸಹಾಯದಿಂದಲೇ ರಕ್ಷಿತಾ ರಾಜು ಅವರು ಎರಡು ಬಾರಿ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದರು. ರಕ್ಷಿತಾರಿಂದ ಉಡುಗೊರೆ ಸ್ವೀಕರಿಸಿ ಸಂತಸಪಟ್ಟ ಪ್ರಧಾನಿ ನರೇಂದ್ರ ಮೋದಿ. ಮುಂದೆಯೂ ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನ ಗೆಲ್ಲುವಂತೆ ಹಾರೈಸಿದರು. ಪೋಟೋ ಫೈಲ್‌ ನೇಮ್‌ 2 ಕೆಸಿಕೆಎಂ 6 ಪ್ಯಾರಾ ಏಷ್ಯನ್‌ ಗೇಮ್‌ನಲ್ಲಿ ಬಳಸಿದ ಟಿಟರ್‌ವನ್ನು ರಕ್ಷಿತಾ ರಾಜು ಅವರು ಪ್ರಧಾನಿಯರಿಗೆ ಗಿಫ್ಟ್‌ ಆಗಿ ನೀಡಿದರು.