ಸಾರಾಂಶ
ಬೆಳ್ತಂಗಡಿ ತಾಲೂಕಿನ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆ, ಧಾರ್ಮಿಕ ಉಪನ್ಯಾಸ, ಸಾರ್ವಜನಿಕ ಅನ್ನ ಸಂತರ್ಪಣೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠೆ ಅಂಗವಾಗಿ ತಾಲೂಕಿನಲ್ಲಿ ಸಂಭ್ರಮದೊಂದಿಗೆ ಹಲವು ಕಾರ್ಯಕ್ರಮಗಳು ಜರುಗಿದವು.
ಶ್ರೀ ಕ್ಷೇತ್ರ ಧರ್ಮಸ್ಥಳ, ಕನ್ಯಾಡಿ ಶ್ರೀರಾಮ ಕ್ಷೇತ್ರ, ಉಜಿರೆ ಶ್ರೀ ಜನಾರ್ದನ ದೇವಸ್ಥಾನ, ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನ, ನಿಡಿಗಲ್ ಶ್ರೀಲೋಕನಾಥೇಶ್ವರ ದೇವಸ್ಥಾನ, ನಾವೂರು ಶ್ರೀಗೋಪಾಲಕೃಷ್ಣ ದೇವಸ್ಥಾನ, ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬೆಳಾಲು ಶ್ರೀಮಾಯಾಮಹದೇವ ದೇವಸ್ಥಾನ, ಉಜಿರೆ ಹಳೆಪೇಟೆ ಶ್ರೀರಾಮ ಮಂದಿರ, ಪೆರಿಯಡ್ಕ ಚಿಬಿದ್ರೆ, ಸೋಮನಾಥೇಶ್ವರ ದೇವಸ್ಥಾನ ತೋಟತ್ತಾಡಿ, ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನ,ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮೋಂಟೆತ್ತಡ್ಕ, ಶಿಬಾಜೆ, ಉಮಾಪಂಚಲಿಂಗೇಶ್ವರ ದೇವಸ್ಥಾನ ಅಪ್ಪೆಲ ನೆರಿಯ,ಶ್ರೀ ಉಮಾಮಹೇಶ್ವರ ದೇವಸ್ಥಾನ ಕಾಯರ್ತಡ್ಕ,ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ,ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ಮಿಯ್ಯಾರು ಪುದುವೆಟ್ಟು,ನಾಗವೇಣಿ ಅಮ್ಮ ಸಭಾ ಭವನ ಕಲ್ಕುಡ ಗುಡ್ಡೆ ಬರೆಂಗಾಯ ನಿಡ್ಲೆ ಸೇರಿದಂತೆ ತಾಲೂಕಿನ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆ, ಧಾರ್ಮಿಕ ಉಪನ್ಯಾಸ, ಸಾರ್ವಜನಿಕ ಅನ್ನ ಸಂತರ್ಪಣೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಹಲವು ಭಜನಾ ಮಂದಿರ, ಕಲ್ಯಾಣ ಮಂಟಪಗಳಲ್ಲೂ ವಿಶೇಷ ಕಾರ್ಯಕ್ರಮಗಳು ಜರುಗಿದವು. ಹೆಚ್ಚಿನ ಕಡೆ ಗ್ರಾಮದ ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ಪರದೆಯ ಮೂಲಕ ಪ್ರಾಣ ಪ್ರತಿಷ್ಠೆಯ ಕ್ಷಣಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಕರಸೇವೆಯಲ್ಲಿ ಪಾಲ್ಗೊಂಡ ಹಿರಿಯರನ್ನು ಗೌರವಿಸಲಾಯಿತು. ಮನೆ, ಅಂಗಡಿ, ವಾಹನಗಳಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ಜನರು ಕೇಸರಿ ಶಾಲು, ವಸ್ತ್ರಗಳನ್ನು ಧರಿಸಿ ಆನಂದಿಸಿದರು. ಈ ಮೂಲಕ ಬಹುಕಾಲದ ಬಯಕೆ ಎಂದು ಈಡೇರಿದ ಸಂತಸವನ್ನು ಜನರು ಆಚರಿಸಿದರು.* ಬೈಕ್ ರ್‍ಯಾಲಿಉಜಿರೆ ಪರಿಸರದ ಮಂದಿ ಬೈಕ್ ರ್‍ಯಾಲಿ ನಡೆಸಿದರು. ಶ್ರೀ ಜನಾರ್ದನ ದೇವಸ್ಥಾನದ ಮುಂಭಾಗದಿಂದ ಆರಂಭವಾದ ರ್‍ಯಾಲಿಗೆ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿದರು. ಸಮಾಜ ಸೇವಕ ರಾಮಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಿಂದ ಆರಂಭವಾದ ಬೈಕ್ ರ್‍ಯಾಲಿ ಚಂದ್ಕೂರು, ನಾವೂರು, ಕೊಲ್ಲಿ ದೇಗುಲಗಳಿಗೆ ತೆರಳಿ ಉಜಿರೆಯಲ್ಲಿ ಸಂಪನ್ನಗೊಂಡಿತು.