ಸಾರಾಂಶ
ನಗರದ ಪಾರ್ವತಿಪುರದ ಶ್ರೀ ಊರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶಿವನಾಪುರ ವಹ್ನಿಕುಲ ಮಠದ ಶ್ರೀ ಪ್ರಣವನಂದಪುರಿ ಸ್ವಾಮೀಜಿಯವರ ಸಾನಿಧ್ಯದಲ್ಲಿ ಶ್ರೀ ರಾಮಜನ್ಮ ಭೂಮಿ ಪವಿತ್ರ ಮಂತ್ರಾಕ್ಷತೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಿಂದ ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ಚಾಲನೆ ಕನ್ನಡಪ್ರಭ ವಾರ್ತೆ ಹೊಸಕೋಟೆ
ನಗರದ ಪಾರ್ವತಿಪುರದ ಶ್ರೀ ಊರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶಿವನಾಪುರ ವಹ್ನಿಕುಲ ಮಠದ ಶ್ರೀ ಪ್ರಣವನಂದಪುರಿ ಸ್ವಾಮೀಜಿಯವರ ಸಾನಿಧ್ಯದಲ್ಲಿ ಶ್ರೀ ರಾಮಜನ್ಮ ಭೂಮಿ ಪವಿತ್ರ ಮಂತ್ರಾಕ್ಷತೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ಮಾತನಾಡಿ, ರಾಮಮಂದಿರ ಮಂತ್ರಾಕ್ಷತೆ ಅಭಿಯಾನಕ್ಕೆ ಕೈಜೋಡಿಸುವುದು ಪ್ರತಿಯೊಬ್ಬ ದೇಶದ ನಾಗರಿಕನ ಕರ್ತವ್ಯವಾಗಿದೆ. ಈ ಮುಖಾಂತರ ಎಲ್ಲಾ ವಸತಿ ಪ್ರಮುಖರಿಗೆ ಪವಿತ್ರ ಮಂತ್ರಾಕ್ಷತೆಯ ನಗರದ ಎಲ್ಲಾ ಮನೆ ಮನೆಗೆ ತಲುಪಿಸಲು ಪವಿತ್ರ ಮಂತ್ರಾಕ್ಷತೆ, ನಿವೇದನ ಪತ್ರ ಹಾಗೂ ಫೋಟೋವನ್ನು ಒಳಗೊಂಡ ಕಿಟ್ ಕೊಡಲಾಗುತ್ತಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಜಿಲಾಧ್ಯಕ್ಷ ಸತೀಶ್ ಮಾತನಾಡಿ, ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಮಂತ್ರಾಕ್ಷತೆ ಪ್ರತಿ ಮನೆಗೂ ತಲುಪಿಸುವ ಅಭಿಯಾನ ದೇಶಾಧ್ಯಂತ ಹಮ್ಮಿಕೊಂಡಿದ್ದು, ಮಂತ್ರಾಕ್ಷತೆ ಪಡೆಯುವ ಪ್ರತಿಯೊಬ್ಬರೂ ಮಂದಿರ ಉದ್ಘಾಟನೆ ದಿನ ಮನೆಯಲ್ಲಿ ಪೂಜೆ ಸಲ್ಲಿಸುವ ಕಾರ್ಯ ಆಗಬೇಕು ಎಂದರು.ವಿಶೇಷವಾಗಿ ಸ್ವಾಮೀಜಿಯ ಮುಖಾಂತರ ಶ್ರೀ ಸಾಯಿ ವಸತಿಯ ಕೆಲವು ಮನೆಗಳಿಗೆ ಪವಿತ್ರ ಮಂತ್ರಾಕ್ಷತೆ, ನಿವೇದನ ಪತ್ರ ಹಾಗೂ ಫೋಟೋವನ್ನು ನೀಡುವ ಮೂಲಕ ಅಭಿಯಾನದ ಚಾಲನೆ ಮಾಡಲಾಯಿತು. ನಗರದ ಹಿರಿಯ ಮುಖಂಡರು, ಶ್ರೀ ರಾಮ ಭಕ್ತರು ಉಪಸ್ಥಿತರಿದ್ದರು.
----ಹೊಸಕೋಟೆ ನಗರದ ಊರಬಾಗಿಲು ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ರಾಮಮಂದಿರ ಪವಿತ್ರ ಮಂತ್ರಾಕ್ಷತೆ ಅಭಿಯಾನಕ್ಕೆ ಶಿವನಾಪುರದ ವಹ್ನಿಕುಲ ಮಠದ ಶ್ರೀ ಪ್ರಣವಾನಂದಪುರಿ ಸ್ವಾಮಿಜಿ ಚಾಲನೆ ನೀಢಿದರು.