ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ನಗರದ ನೇಕಾರ ಬೀದಿಯ ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ರಾಮ ನವಮಿ ಉತ್ಸವ ಭಾನುವಾರ ವೈಭವದಿಂದ ನಡೆಯಿತು.ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮ ದಿನದ ಪ್ರಯುಕ್ತ ಬೆಳಿಗ್ಗೆ ದೇವಾಲಯದಲ್ಲಿ ಸುಪ್ರಭಾತ ಸೇವೆ, ದೇವತಾ ಪ್ರಾರ್ಥನೆ, ಪುಣ್ಯಾಹ, ನಾಂದಿ, ಶ್ರೀ ಕೋದಂಡ ರಾಮಚಂದ್ರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಗಣಪತಿ ಹೋಮ, ನವಗ್ರಹ ಹೋಮ, ಆಂಜನೇಯ ಹೋಮ, ಶ್ರೀರಾಮ ತಾರಕ ಮೂಲ ಮಂತ್ರ ಹೋಮ, ಸರ್ವತೋ ಮಂಡಲ ಪೂಜೆ, ವಸಂತ ಸೇವೆ ನಡೆದವು.ಈ ವೇಳೆ ಭಕ್ತರಿಂದ ಭಜನೆ, ನಾಮ ಸಂಕೀರ್ತನೆ ನಡೆದವು. ಸಂಜೆ ಉತ್ಸವ ಮೂರ್ತಿಗಳ ರಾಜ ಬೀದಿ ಮೆರವಣಿಗೆ, ದೇವಾಲಯದಲ್ಲಿ ಉಯ್ಯಾಲೆ ಸೇವೆ, ಮಹಾಮಂಗಳಾರತಿ, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.ಪ್ರಧಾನ ಅರ್ಚಕ ಕೆ.ವಿ. ಸತ್ಯ ಪ್ರಸನ್ನ ಮತ್ತು ಅರ್ಚಕ ವೆಂಕಟೇಶ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಬೆಳಗಿನಿಂದ ರಾತ್ರಿವರೆಗೆ ನಡೆದ ಕಾರ್ಯಕ್ರಮಗಳಲ್ಲಿ ನೇಕಾರ ಬೀದಿ ಸೇರಿದಂತೆ ನೂರಾರು ಭಕ್ತರು ಸಡಗರ, ಸಂಭ್ರಮ ದಿಂದ ಪಾಲ್ಗೊಂಡಿದ್ದರು. ಹಬ್ಬದ ಅಂಗವಾಗಿ ಶ್ರೀ ಸೀತೆ, ಲಕ್ಷ್ಮಣ, ಆಂಜನೇಯ, ಶ್ರೀ ಕೋದಂಡರಾಮಚಂದ್ರ ಸ್ವಾಮಿ ವಿಗ್ರಹ ಗಳನ್ನು ರಜತಾ ಭರಣಗಳಿಂದ ಅಲಂಕರಿಸಲಾಗಿತ್ತು. 6 ಕೆಸಿಕೆಎಂ 1ಚಿಕ್ಕಮಗಳೂರು ನಗರದ ನೇಕಾರ ಬೀದಿಯ ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ಭಾನುವಾರ ರಾಮ ನವಮಿ ಉತ್ಸವ ವೈಭವದಿಂದ ನಡೆಯಿತು.