ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ರಾಮನ ಜನ್ಮ ಸ್ಥಳ ಅಯೋಧ್ಯೆಯಲ್ಲಿ ಐತಿಹಾಸಿಕ ಮಂದಿರ ನಿರ್ಮಾಣದ ಶಂಕುಸ್ಥಾಪನೆ ಮಾಡಿ ಹಿಂದೂಗಳಿಗೆ ಪವಿತ್ರ ದಿನವಾದ ಸೋಮವಾರ ಜ.22 ರಂದು ಶ್ರೀ ಸೀತಾ ರಾಮರ ಪ್ರಾಣ ಪ್ರತಿಸ್ಠಾಪನೆ ನಡೆಯುತ್ತಿರುವುದು ಅತ್ಯಂತ ಹರುಷ ತಂದಿದೆ ಎಂದು ಶ್ರೀ ರಾಮಮಂದಿರದ ಶ್ರೀರಾಮ ಸೇವಾ ಪ್ರತಿಷ್ಠಾನ ಅಧ್ಯಕ್ಷ ಸಾಯಿಕುಮಾರ್ ಎ.ಎಸ್. ತಿಳಿಸಿದರು.ರೈಲ್ವೆ ನಿಲ್ದಾಣ ಬಳಿ ಇರುವ ಸುಮಾರು 90 ವರ್ಷಗಳ ಹಿಂದೆ ಕೀರ್ತಿಶೇಷರಾದ ರಾಮ ಭಕ್ತರಾಗಿದ್ದ ನಮ್ಮ ತಂದೆ ತಾಯಿ ಸೂರ್ಯನಾರಾಯಣ ರಾವ್ - ಸಾವಿತ್ರಮ್ಮ ಈ ಶ್ರೀ ರಾಮ ಮಂದಿರ ಸ್ಥಾಪಿಸಿ ಪೂಜಿಸುತ್ತಿದ್ದರು. ನಂತರದಲ್ಲಿ ಈ ಜವಾಬ್ದಾರಿ ಹೊತ್ತ ತಾವು 35 ವರ್ಷಗಳಿಂದ ಪೂಜೆ, ಪುನಸ್ಕಾರ, ಕಲ್ಯಾಣೋತ್ಸವ, ಸಂಗೀತೋತ್ಸವ ಹಾಗೂ ಶ್ರೀರಾಮನವಮಿಯನ್ನು ವಿಜೃಂಭಣೆಯಿಂದ ನಡೆಸ ಲಾಗುತ್ತಿದೆ ಎಂದರು.
ಜಗದ್ಗುರು ಬೇಲಗೂರು ಶ್ರೀ ಬಿಂದು ಮಾಧವಶರ್ಮ ಮಹಾರಾಜ್, ಸದ್ಗುರು ಶ್ರೀಕಾಂತಾನಂದ ಸರಸ್ವತಿ ಮಹಾರಾಜ್ ಮತ್ತು ಅವಧೂತರಾದ ಗೌರಿಗದ್ದೆ ದತ್ತಶ್ರಮದ ಶ್ರೀ ವಿನಯ್ ಗುರುಜಿ ಮುಂತಾದ ಸದ್ಗುರುಗಳು ಈ ರಾಮಮಂದಿರಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸದ್ಗರು ಹನುಮನಾಥನ ಸ್ವರೂಪರಾದ ಜಗದ್ಗುರು ಶ್ರೀಕಾಂತಾನಂದ ಸರಸ್ವತಿ ಮಹಾರಾಜ್ ದಿವ್ಯ ಆಶೀರ್ವಾದ ದೊಂದಿಗೆ ಈ ರಾಮಮಂದಿರದಲ್ಲಿ ಸುಮಾರು 38 ಕೋಟಿ ಶ್ರೀರಾಮನಾಮ ಜಪ, 1001 ಶ್ರೀಗುರುಚರಿತ್ರೆ ಪಾರಾಯಣ, ಕೋಟಿ ರಾಮನಾಮ ಜಪದ ಸಾಂಗತ ಹೋಮ ನಡೆದಿದೆ.
ಅಯೋಧ್ಯೆಗೆ ಹೋಗಿ ಶ್ರೀರಾಮ ಎಂದು ಮುದ್ರಿಸಿರುವ ಈಗ ನಿರ್ಮಾಣ ವಾಗುತ್ತಿರುವ ರಾಮ ಮಂದಿರದ ಇಟ್ಟಿಗೆ ಹಾಗೂ ರಾಮೇಶ್ವರಕ್ಕೆ ತೆರಳಿ ರಾಮಸೇತು ನಿರ್ಮಾಣದಲ್ಲಿ ಉಪಯೋಗಿಸಿದ್ದ ತೆಲುವ ಕಲ್ಲನ್ನು ತಂದು ಶ್ರೀರಾಮ ಮಂದಿರಲ್ಲಿ ಪೂಜಿಸಿ ಕೋಟಿ ರಾಮಾನಾಮ ಜಪ ಜಪಿಸಿ ಇದೇ ಇಟ್ಟಿಗೆಯನ್ನು ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ಶ್ರೀರಾಮ ಮಂದಿರಕ್ಕೆ ಕಳುಹಿಸುತ್ತಿರುವುದು ಜನ್ಮ ಜನ್ಮದ ಪುಣ್ಯವೇ ಸರಿ ಎಂದು ಹೇಳಿದರು.ಈ ಸಂಬಂಧ ಜ.22 ರಂದು ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಶ್ರೀ ಸೀತಾ ರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದ ಈ ಶ್ರೀರಾಮಮಂದಿರಲ್ಲಿ ಬೆಳಿಗ್ಗೆ ಗೋಪೂಜೆ, ಶ್ರೀರಾಮ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಅಲಂಕಾರ, ರಾಮ ತಾರಕ ಹೋಮ, ಮಂಗಳಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.14 ಕೆಟಿಆರ್.ಕೆ.08ಃ
ತರೀಕೆರೆ ಶ್ರೀರಾಮ ಮಂದಿರ