ಉಡುಪಿ ಲಕ್ಷ್ಮೀವೆಂಕಟೇಶ ದೇವಳದಲ್ಲಿ ರಾಮನಾಮಜಪ ಅಭಿಯಾನಕ್ಕೆ ಚಾಲನೆ

| Published : May 12 2024, 01:16 AM IST

ಸಾರಾಂಶ

ಸಾಮೂಹಿಕ ಪ್ರಾರ್ಥನೆ, ಶ್ರೀ ರಾಮದೇವರ ಭಾವಚಿತ್ರ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅ.18ರ ವರೆಗೆ ನಡೆಯುವ ಈ ಅಭಿಯಾನದ ಪ್ರಥಮ ದಿನದ ಮೊದಲನೆಯ ಪಾಳಿಗೆ ನೂರಕ್ಕೂ ಅಧಿಕ ಭಕ್ತರು ಉತ್ಸಾಹದಿಂದ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಆಚರಣೆ ಮತ್ತು ಸಮಾಜದ ಕಲ್ಯಾಣಕ್ಕಾಗಿ ಹಮ್ಮಿಕೊಂಡ, ಮಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ ಅವರಿಂದ ಉಪದೇಶಿಸಲ್ಪಟ್ಟ ಶ್ರೀರಾಮನಾಮಜಪ ಅಭಿಯಾನವು ಶುಕ್ರವಾರ ಅಕ್ಷಯ ತೃತೀಯದಂದು ಆರಂಭವಾಯಿತು.

ಸಾಮೂಹಿಕ ಪ್ರಾರ್ಥನೆ, ಶ್ರೀ ರಾಮದೇವರ ಭಾವಚಿತ್ರ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅ.18ರ ವರೆಗೆ ನಡೆಯುವ ಈ ಅಭಿಯಾನದ ಪ್ರಥಮ ದಿನದ ಮೊದಲನೆಯ ಪಾಳಿಗೆ ನೂರಕ್ಕೂ ಅಧಿಕ ಭಕ್ತರು ಉತ್ಸಾಹದಿಂದ ಪಾಲ್ಗೊಂಡರು.

ಶ್ರೀದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ಅರ್ಚಕರಾದ ದಯಾಘನ್ ಭಟ್ ಮತ್ತು ದೀಪಕ್ ಭಟ್ ಸಹಕರಿಸಿದರು. ಆಡಳಿತ ಮಂಡಳಿಯ ಸದಸ್ಯರು, ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಜಪ ಕಮಿಟಿಯ ಸದಸ್ಯರು, ಯುವಕ ಮಂಡಳಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಶ್ರೀರಾಮ ನಾಮಜಪ ಅಭಿಯಾನಕ್ಕೆ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನವನ್ನು ಕೇಂದ್ರವನ್ನಾಗಿ ಮಾಡಿ ಕೇಂದ್ರಕ್ಕೆ ‘ಶ್ರೀ ರಘುನಾಯಕಃ’ ಎಂದು ನಾಮಕರಿಸಿ ಉಡುಪಿಯ ಎಲ್ಲ ಭಜಕರಿಗೆ ಶ್ರೀ ಗುರುಗಳು ವಿಶೇಷ ಅನುಗ್ರಹ ಸಂದೇಶ ನೀಡಿ ಹರಿಸಿದ್ದಾರೆ.

ಈ ರಾಮನಾಮ ಜಪ ಅಭಿಯಾನದಲ್ಲಿ ಉಡುಪಿಯ ಸಮಾಜ ಬಾಂಧವರು ಮಾತ್ರವಲ್ಲದೆ ಸುತ್ತಮುತ್ತಲಿನ ಕಟಪಾಡಿ, ಉದ್ಯಾವರ, ಮುಲ್ಕಿ, ಕಾಪು, ಪಡುಬಿದ್ರೆ, ಮಲ್ಪೆ, ಹಿರಿಯಡ್ಕ, ಹರಿಕಂಡಿಗೆ, ಮಣಿಪಾಲ, ಕಲ್ಯಾಣಪುರ ಕಡೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಲು ಅವಕಾಶವಿದೆ.

ಮೇ 10ರಿಂದ 18ರ ವರೆಗೆ ಪ್ರತಿದಿನ ಸಂಜೆ 4ರಿಂದ 5.30, ಮೇ 19ರಿಂದ ಸಂಜೆ 5.45ರಿಂದ 7 ರ ವರೆಗೆ, ಪ್ರತಿ ಆದಿತ್ಯವಾರ ವಿಶೇಷ ಪಾಳಿ ಬೆಳಗ್ಗೆ 9.30ರಿಂದ 11ರ ವರೆಗೆ ಶ್ರೀದೇವಳದಲ್ಲಿ ಅಭಿಯಾನ ನಡೆಯಲಿದೆ.