ಸಾರಾಂಶ
ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಮುಖಂಡರೊಂದಿಗೆ ರಾಮತೀರ್ಥ ದೇವಸ್ಥಾನ ಪೂಜೆ ಸಲ್ಲಿಸಿದ ಶಾಸಕ ನಂತರ ಪೊರಕೆ ಹಿಡಿದು ಹೊರಾಂಗಣ ಗುಡಿಸಿ ಸ್ವಚ್ಛಗೊಳಿಸಿದ್ದರು. ಶಾಸಕರಿಂದ ಪ್ರೇರಣೆಗೊಂಡ ನಾಗರಿಕರು ಮುಖಂಡರು ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ಕನ್ನಡಪ್ರಭ ವಾರ್ತೆ ಕಮಲಾಪುರ
ಅಯೋಧ್ಯೆದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದ ಹಿನ್ನೆಲೆಯಲ್ಲಿ ರಾಮತೀರ್ಥ ದೇವಸ್ಥಾನ ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿರುವ ಸಂದೇಶದ ಹಿನ್ನೆಲೆಯಲ್ಲಿ ಶಾಸಕ ಬಸವರಾಜ ಮತ್ತಿಮಡು ಭಾನುವಾರ ಪಟ್ಟಣದ 500 ವರ್ಷಗಳ ಹಿನ್ನೆಲೆ ಇರುವ ಕಮಲಾಪುರ ಪಟ್ಟಣದ ರಾಮತೀರ್ಥ ದೇವಸ್ಥಾನ ಸ್ವಚ್ಛಗೊಳಿಸಿದರು.ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಮುಖಂಡರೊಂದಿಗೆ ರಾಮತೀರ್ಥ ದೇವಸ್ಥಾನ ಪೂಜೆ ಸಲ್ಲಿಸಿದ ಶಾಸಕ ನಂತರ ಪೊರಕೆ ಹಿಡಿದು ಹೊರಾಂಗಣ ಗುಡಿಸಿ ಸ್ವಚ್ಛಗೊಳಿಸಿದ್ದರು. ಶಾಸಕರಿಂದ ಪ್ರೇರಣೆಗೊಂಡ ನಾಗರಿಕರು ಮುಖಂಡರು ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಶಾಸಕ ಬಸವರಾಜ ಮತ್ತಿಮೂಡು ಜ.22ರಂದು ನಡೆಯುತ್ತಿರುವ ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಭಕ್ತಿ ಸಂಭ್ರಮದಿಂದ ನೆರವೇರುತ್ತಿದೆ. ಇದರ ಅಂಗವಾಗಿ ಪಟ್ಟಣದಲ್ಲಿ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ, ದೇವಸ್ಥಾನ ಸ್ವಚ್ಛತೆ ಅಂತಹ ಹಲವಾರು ಕಾರ್ಯಕ್ರಮಗಳುನ್ನು ಮುಖಂಡರು ಪಕ್ಷದ ಕಾರ್ಯಕರ್ತರು ಕೈಗೊಂಡಿದ್ದಾರೆ ಎಂದರು.ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ್ ವಾಲಿ, ಅರುಣ್ ಬಿನ್ನಡಗಿ, ಮಲ್ಲಿಕಾರ್ಜುನ್ ಮರತೂರು, ಶರಣಬಸಪ್ಪ ಪಾಟೀಲ್ ಅಷ್ಟಗಿ, ಶ್ರೀಕಾಂತ್ ಪಾಟೀಲ್, ಸತೀಶ್ ಸರೋಡೆ, ಗುಂಡಪ್ಪ ಶಿರೋಡೋಣ, ಉದಯಕುಮಾರ್ ರಟ್ಗಲ್, ರಾಜು ಚೌಹಾನ್, ಶಿವಕುಮಾರ್ ದೋಶೆಟ್ಟಿ, ಚೆನ್ನವೀರ ಮುನ್ನಳ್ಳಿ, ರೇವಣಸಿದ್ಧ ಪಾಟೀಲ್ ಇದ್ದರು