ಸಾರಾಂಶ
ವಾಲ್ಮಿಕಿ ರಚಿಸಿದ ರಾಮಾಯಣ ಕೃತಿಯೂ ಸಮಾಜಕ್ಕೆ ಮಾದರಿಯಾಗಿದೆ. ಸಮಾಜದಲ್ಲಿ ರಾಜರು, ಸೈನಿಗರು, ಸಾಮಾನ್ಯ ಪ್ರಜೆಗಳು ಹೇಗಿರಬೇಕು, ಯಾವರೀತಿ ಜೀವನ ನಡೆಸಬೇಕು, ಗುರು-ಹಿರಿಯರು, ಪೋಷಕರನ್ನು ಹೇಗೆ ಗೌರವಿಸಬೇಕು ಎನ್ನುವ ಸಾಕಷ್ಟು ಸದ್ಗುಣಗಳ ಬಗ್ಗೆ ಅರಿವು ಮೂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಹರ್ಷಿ ವಾಲ್ಮೀಕಿ ಬರೆದಿರುವ ರಾಮಾಯಣ ಕೃತಿಯೂ ಆದರ್ಶಪ್ರಾಯ ಸಮಾಜದ ಪ್ರತಿಬಿಂಬವಾಗಿದೆ ಎಂದು ತಹಸೀಲ್ದಾರ್ ಬಸವರೆಡ್ಡಪ್ಪರೋಣದ ಹೇಳಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ಹಾಗೂ ಪುರಸಭೆ ಸಹಯೋಗದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿ, ಒಬ್ಬ ಬೇಡನಾಗಿದ್ದ ವಾಲ್ಮೀಕಿ ಅವರು ನಂತರ ಮನಪರಿವರ್ತನೆಗೊಂಡು ತಪಸ್ವಿಯಾಗಿ, ಕವಿಯಾದರು. ಅವರು ರಚಿಸಿದ ಕೃತಿಯಲ್ಲಿ ಅವರೇ ಪಾತ್ರದಾರಿಯಾದ ಮೊದಲ ಕವಿ ಎಂದರು.
ವಾಲ್ಮಿಕಿ ರಚಿಸಿದ ರಾಮಾಯಣ ಕೃತಿಯೂ ಸಮಾಜಕ್ಕೆ ಮಾದರಿಯಾಗಿದೆ. ಸಮಾಜದಲ್ಲಿ ರಾಜರು, ಸೈನಿಗರು, ಸಾಮಾನ್ಯ ಪ್ರಜೆಗಳು ಹೇಗಿರಬೇಕು, ಯಾವರೀತಿ ಜೀವನ ನಡೆಸಬೇಕು, ಗುರು-ಹಿರಿಯರು, ಪೋಷಕರನ್ನು ಹೇಗೆ ಗೌರವಿಸಬೇಕು ಎನ್ನುವ ಸಾಕಷ್ಟು ಸದ್ಗುಣಗಳ ಬಗ್ಗೆ ಅರಿವು ಮೂಡಿಸಿದ್ದಾರೆ ಎಂದರು.ಸಾಧನೆ ಹಾದಿಯಲ್ಲಿ ನಡೆಯುವ ಪ್ರತಿಯೊಬ್ಬರಿಗೂ ಇವರ ಕೃತಿ ಸ್ಫೂರ್ತಿದಾಯಕ. ಇವರ ಕೇವಲ ವಾಲ್ಮೀಕಿ ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತಿಯೊಬ್ಬರ ಆಸ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.
ತಾಪಂ ಇಒ ವೀಣಾ ಮಾತನಾಡಿ, ರಾಮಾಯಣ ಹಾಗೂ ಮಹಾಭಾರತ ಎರಡು ಕೃತಿಗಳು ಭಾರತ ದೇಶದ ಶ್ರೇಷ್ಠ ಕೃತಿಗಳಾಗಿವೆ. ರಾಮಾಯಣ ಕೃತಿ ಹಲವಾರು ಕೃತಿ, ಸಾಹಿತಿಗಳಿಗೆ ಸ್ಫೂರ್ತಿಯ ನೆಲೆಯಾಗಿದೆ ಎಂದರು.ಅಭಿನಂದನೆ ಸ್ವೀಕರಿಸಿದ ಪ್ರಧಾನ ಭಾಷಣಕಾರ, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ ಮಾತನಾಡಿ, ರಾಮಾಯಣ ಕೃತಿ ರಚಿಸಿ ಸಮಸಮಾಜ ನಿರ್ಮಾಣಕ್ಕೆ ಮುಂದಾದ ವಾಲ್ಮೀಕಿಯವರು ಹೆಸರು ಸೂರ್ಯಚಂದ್ರು ಇರುವ ತನಕ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.
ಸಮಾರಂಭದಲ್ಲಿ ಗ್ರೇಡ್ 2 ಸಂತೋಷ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಸತೀಶ್, ಸಿಡಿಪಿಒ ಪೂರ್ಣಿಮಾ, ಎಡಿಎಲ್ ಆರ್ ಮೂಡಲಗಿರೀಗೌಡ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕೋಮಲ, ಲೋಕೇಶ್, ಟಿಎಪಿಸಿಎಂಎಸ್ ನಿರ್ದೇಶಕರಾದ ಪಿ.ಎಲ್.ಆದರ್ಶ, ಟಿ.ಎಸ್.ಹಾಳಯ್ಯ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘ ಅಧ್ಯಕ್ಷ ಎಂ.ರಮೇಶ್, ಸಬ್ ಇನ್ಸ್ ಪೆಕ್ಟರ್ ಧರ್ಮಪಾಲ್, ಮುಖಂಡರಾದ ದೇವರಾಜು, ಅಂಕಯ್ಯ, ರಾಮಯ್ಯ, ಮರಿದೇವಯ್ಯ, ವಾಲ್ಮೀಕಿ ಸಂಘದ ಅಧ್ಯಕ್ಷ ದೇವಾನಂದ್, ಪ್ರಸನ್ನ, ಹಂಸವೇಣಿ, ಸೇರಿದಂತೆ ಹಲವರು ಇದ್ದರು.