ಸಾರಾಂಶ
ಹರಗುರು ಚರಮೂರ್ತಿಗಳು, ರಾಜಕೀಯ ಧುರೀಣರು, ವಿವಿಧ ಸಮಾಜದ ಗಣ್ಯರು, ಕವಿ, ಕಲಾವಿದರು ಭಾಗವಹಿಸಲಿದ್ದಾರೆ.
ಬಳ್ಳಾರಿ: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಫೆ.1ರಂದು ಬಾಳೆಹೊನ್ನೂರು ರಂಭಾಪುರಿ ವೀರಸಿಂಹಾಸನಾಧೀಶ್ವರ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ 34ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ, ಅಡ್ಡಪಲ್ಲಕ್ಕಿ, ಜನಜಾಗೃತಿ ಧರ್ಮ ಸಮಾರಂಭ ಜರುಗಲಿದೆ.ರಂಭಾಪುರಿ ಶ್ರೀ ವೀರಸಿಂಹಸನಾ ಮಹಾಪೀಠವನ್ನು ಪೀಠಾರೋಹಣ ಮಾಡಿ 33 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೀಠಾರೋಹಣ ವರ್ಧಂತಿ ಮಹೋತ್ಸವ ಏರ್ಪಡಿಸಲಾಗಿದೆ.
ಅಪೂರ್ವ ಧರ್ಮ ಸಮಾರಂಭದಲ್ಲಿ ನಾಡಿನ ವಿವಿಧ ಮಠಗಳ ಮಠಾಧೀಶರು, ಹರಗುರು ಚರಮೂರ್ತಿಗಳು, ರಾಜಕೀಯ ಧುರೀಣರು, ವಿವಿಧ ಸಮಾಜದ ಗಣ್ಯರು, ಕವಿ, ಕಲಾವಿದರು ಭಾಗವಹಿಸಲಿದ್ದಾರೆ.ಸಮಾರಂಭ ಹಿನ್ನೆಲೆಯಲ್ಲಿ ಫೆ.1ರಂದು ಕೃಷಿ ಮೇಳ ಆಯೋಜಿಸಲಾಗಿದೆ. ಫೆ.3ರಂದು ಧರ್ಮ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಸಹ ನಡೆಯಲಿದೆ. ಖ್ಯಾತ ವಾಗ್ಮಿ ಹಾರಿಕಾ ಮಂಜುನಾಥ ಭಾಗವಹಿಸಲಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಹಾತಪಸ್ವಿ ಚತುರ್ಭಾಷಾ ವಿಶಾರದ ಲಿಂ.ವೀರರುದ್ರಮುನಿ ಜಗದ್ಗುರು ಅನುಗ್ರಹ ಶ್ರೀರಕ್ಷೆಗೆ ಪಾತ್ರರಾಗಿ ನಾಡಿನ ಶಿವಾಚಾರ್ಯ ಸಮ್ಮುಖದಲ್ಲಿ ಅಸಂಖ್ಯಾತ ಭಕ್ತರ ಸಂಗಮದಲ್ಲಿ 1992ರ ಫೆ.6ರಂದು ರಂಭಾಪುರಿ ವೀರಸಿಂಹಾಸನದ ವೀರಪೀಠದ ಒಡೆಯರಾಗಿ ಪೀಠಾರೋಹಣ ಮಾಡಿದ ರಂಭಾಪುರಿ ಶ್ರೀಗಳು 121ನೇ ಜಗದ್ಗುರುಗಳಾಗಿ ಆದಿ ರೇಣುಕಾಚಾರ್ಯರು ಅವತರಿಸಿದ ಮೂಲ ಸೋಮೇಶ್ವರ ಮಹಾಲಿಂಗದ ನಾಮಾಂಕಿತವನ್ನೇ ಹೊಂದಿ, ಸಾಹಿತ್ಯ, ಸಂಸ್ಕೃತಿ ಸಂರ್ವಧಿಸಲಿ ಶಾಂತಿ ಸಮೃದ್ಧಿ ಸರ್ವರಲ್ಲಾಗಲಿ ಎಂಬ ದಿವ್ಯ ಸಂದೇಶವನ್ನು ನಾಡಿಗೆ ನೀಡಿದ ಸತ್ಪುಷರಾಗಿದ್ದಾರೆ. ಶ್ರೀಗಳ 34ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ, ಅಡ್ಡಪಲ್ಲಕ್ಕಿ, ಜನಜಾಗೃತಿ ಧರ್ಮ ಸಮಾರಂಭಕ್ಕೆ ನಾಡಿನ ನಾನಾ ಭಾಗಗಳಿಂದ ಅಸಂಖ್ಯಾತ ಭಕ್ತರು ಭಾಗವಹಿಸಲಿದ್ದಾರೆ. ಧಾರ್ಮಿಕ ನೆಲೆಯ ನಾನಾ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))