ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀ ರಾಮೋತ್ಸವ ಸಮಿತಿ ಮಂಗಳೂರು ವತಿಯಿಂದ ಕದ್ರಿ ಮೈದಾನದಲ್ಲಿ ನಡೆಯುತ್ತಿರುವ 25ನೇ ವರ್ಷದ ಶ್ರೀರಾಮೋತ್ಸವ ಕಾರ್ಯಕ್ರಮದ ಶುಕ್ರವಾರ ಧಾರ್ಮಿಕ ಸಭೆ
ಮಂಗಳೂರು: ಶ್ರೀರಾಮನು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಆದರ್ಶಪುರುಷ. ಅವರ ಜೀವನವು ಧರ್ಮ, ಸತ್ಯ ಮತ್ತು ನಿಷ್ಠೆಯ ಸಂಕೇತವಾಗಿದ್ದು, ಹಿಂದೂ ಧರ್ಮದ ರಕ್ಷಣೆಗೆ ರಾಮನ ಆದರ್ಶಗಳೇ ಮೂಲ ಎಂದು ಶ್ರೀ ಕ್ಷೇತ್ರ ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖಾನಂದ ಸ್ವಾಮೀಜಿ ಹೇಳಿದರು.ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀ ರಾಮೋತ್ಸವ ಸಮಿತಿ ಮಂಗಳೂರು ವತಿಯಿಂದ ಕದ್ರಿ ಮೈದಾನದಲ್ಲಿ ನಡೆಯುತ್ತಿರುವ 25ನೇ ವರ್ಷದ ಶ್ರೀರಾಮೋತ್ಸವ ಕಾರ್ಯಕ್ರಮದ ಶುಕ್ರವಾರ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ರಾಮನ ಆದರ್ಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜೀವನದಲ್ಲಿ ಶಾಂತಿ ಮತ್ತು ಸದುಪದೇಶವನ್ನು ತರುತ್ತದೆ. ಹಿಂದೂ ಧರ್ಮದ ರಕ್ಷಣೆಗೆ ರಾಮನ ಜೀವನಮೌಲ್ಯಗಳು ಅತ್ಯಂತ ಮುಖ್ಯ. ಸತ್ಯದ ಮಾರ್ಗದಲ್ಲಿ ನಡೆಯುವುದು, ಅನ್ಯಾಯದ ವಿರುದ್ಧ ಹೋರಾಡುವುದು ಮತ್ತು ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸುವುದು ರಾಮನಿಂದ ಕಲಿಯಬೇಕಾದ ಪ್ರಮುಖ ಗುಣಗಳು. ರಾಮರಾಜ್ಯವು ನ್ಯಾಯ, ಸಮಾನತೆ ಮತ್ತು ಧರ್ಮಾಧಿಷ್ಠಿತ ಆಡಳಿತದ ಪ್ರತೀಕವಾಗಿದೆ. ಇಂತಹ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಸದಾಚಾರ ನೆಲೆಸುತ್ತದೆ ಎಂದರು.ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಿದರು.ಶಾರದಾ ವಿದ್ಯಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ರಾಷ್ಟ್ರಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್, ಶಾಸಕ ವೇದವ್ಯಾಸ ಕಾಮತ್, ಪ್ರಮುಖಾದ ಶಿವಪ್ಪ ನಂತೂರು, ಜಗದೀಪ್ ಡಿ.ಸುವರ್ಣ, ದಿಲ್‌ರಾಜ್ ಆಳ್ವ, ಡಾ.ಅಪೂರ್ವ ಶ್ರೀ ಜಯದೇವ, ಅಕ್ಷಿತ್ ಸುವರ್ಣ, ದಿವಾಕರ ಪಾಂಡೇಶ್ವರ, ಶ್ರೀಧರ ಶೆಟ್ಟಿ ಪುಳಿಂಚ, ಲೋಕೇಶ್ ಬೋಳಾರ, ಗುರಪ್ರಸಾದ್, ವಿಹಿಂಪ ದ.ಕ. ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ರಾಮೋತ್ಸವ ಸಮಿತಿ ಅಧ್ಯಕ್ಷ ಸುನಿಲ್ ಆಚಾರ್, ಕಾರ್ಯಾಧ್ಯಕ್ಷ ಸುದರ್ಶನ ಮೂಡುಬಿದರೆ, ಗೌರವ ಸಲಹೆಗಾರ ಮೋನಪ್ಪ ಭಂಡಾರಿ, ಶಶಿರಾಜ್ ಕೊಟ್ಟಾರಿ ಮತ್ತಿತರರಿದ್ದರು.