ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆಂಪನಹಳ್ಳಿಯಲ್ಲಿ ಶನಿವಾರ ಈದ್ಗಾ ಮೈದಾನಕ್ಕೆ ಹೊಸ ಉಡುಗೆ ತೊಡುಗೆಗಳನ್ನು ಧರಿಸಿ ತಂಡೋಪ ತಂಡವಾಗಿ ಆಗಮಿಸಿದ ಮುಸ್ಲಿಂ ಸಮುದಾಯದ ಜನ ಅಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪವಿತ್ರ ರಂಜಾನ್ ಹಬ್ಬವನ್ನು ಜಿಲ್ಲಾದ್ಯಂತ ಮುಸಲ್ಮಾನ್ ಸಮುದಾಯದವರು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆಂಪನಹಳ್ಳಿಯಲ್ಲಿ ಶನಿವಾರ ಈದ್ಗಾ ಮೈದಾನಕ್ಕೆ ಹೊಸ ಉಡುಗೆ ತೊಡುಗೆಗಳನ್ನು ಧರಿಸಿ ತಂಡೋಪ ತಂಡವಾಗಿ ಆಗಮಿಸಿದ ಮುಸ್ಲಿಂ ಸಮುದಾಯದ ಜನ ಅಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಶಾಸಕ ಎಚ್.ಡಿ.ತಮ್ಮಯ್ಯ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಿ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಶುಭಾಶಯ ಕೋರಿದರು.

ಆತ್ಮಶುದ್ಧಿಯೇ ರಂಜಾನ್‌ ಉಪವಾಸದ ಸಂದೇಶ:

ಈ ವೇಳೆ ಮಾತನಾಡಿದ ಶಾಸಕ ಎಚ್‌.ಡಿ.ತಮ್ಮಯ್ಯ, ಸಮಾಜದಲ್ಲಿ ಜೀವಿಸುವಾಗ ಆಕಸ್ಮಿಕವಾಗಿ ನಡೆದು ಹೋಗುವ ತಪ್ಪುಗಳನ್ನು ದೇವರಲ್ಲಿ ಪ್ರಾರ್ಥಿಸಿ ಕ್ಷಮೆ ಕೇಳುವ ಮೂಲಕ ಆತ್ಮಶುದ್ಧಿ ಮಾಡಿಕೊಳ್ಳುವುದೇ ರಂಜಾನ್‌ ಉಪವಾಸದ ಸಂದೇಶವಾಗಿದೆ ಎಂದು ಅಭಿಪ್ರಾಯಪಟ್ಟರು.

ಇಸ್ಲಾಂ ಧರ್ಮದಲ್ಲಿ ರಂಜಾನ್‌ ಆಚರಣೆಗೆ ವಿಶೇಷ ಮಹತ್ವ ಇದೆ. ಒಂದು ತಿಂಗಳು ಉಪವಾಸ ಮಾಡುವ ಮೂಲಕ ಕಠಿಣ ವ್ರತವನ್ನು ಮುಸ್ಲಿಂ ಬಾಂಧವರುಆಚರಿಸುತ್ತಾರೆ. ಸರ್ವ ಧರ್ಮಗಳೂ ಶಾಂತಿಯನ್ನು ಬಯಸುವ ಸಂದೇಶವನ್ನು ಸಾರುತ್ತವೆ. ಈ ನಿಟ್ಟಿನಲ್ಲಿ ರಂಜಾನ್ ಹಬ್ಬದ ಪ್ರಾರ್ಥನೆ ಆಚರಣೆ ಎಲ್ಲಾ ಮುಸ್ಲಿಂ ಬಾಂಧವರಿಗೆ ಸುಖ, ಶಾಂತಿ, ಸಮೃದ್ಧಿ ತರಲಿ ಎಂದು ಶುಭ ಹಾರೈಸಿದರು.

ಹಿಂದೂ, ಮುಸ್ಲಿಂ, ಪಾರ್ಸಿ, ಕ್ರಿಶ್ಚಿಯನ್, ಜೈನ್, ಸಿಖ್ ಸೇರಿದಂತೆ ವಿವಿಧ ಧರ್ಮಗಳನ್ನು ಹೊಂದಿರುವ ಸೌಹಾರ್ಧಯುತ ಬದುಕಿಗೆ ಪ್ರಪಂಚದಲ್ಲೇ ಹೆಸರಾದಜಾತ್ಯಾತೀತ ರಾಷ್ಟ್ರ ಭಾರತವಾಗಿದೆ ಎಂದು ಹೇಳಿದರು.

ದೇವನೊಬ್ಬ ನಾಮ ಹಲವು ಒಂದೊಂದುಧರ್ಮದಲ್ಲೂ ವಿವಿಧರೀತಿಯ ಹೆಸರಿನಲ್ಲಿದೇವರನ್ನು ಪೂಜಿಸುವುದನ್ನುಕಾಣುತ್ತೇವೆ. ಇಸ್ಲಾಂಧರ್ಮದಲ್ಲಿಅಲ್ಲಾಹನನ್ನು ಪೂಜಿಸಿ ಹತ್ತಿರವಾಗುವುದೇರಂಜಾನ್ ಹಬ್ಬದ ವಿಶೇಷ ಎಂದು ತಿಳಿಸಿದರು.

ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮದ್ ಪೈಗಂಬರ್ ಹೇಳಿದಂತೆ ಸಮಾಜದಲ್ಲಿ ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಗೆದಾನ ಮಾಡುವ ಮುಖಾಂತರ ಬಡವನ ಹಸಿವು ನೀಗಿಸುವವರುದೇವರಿಗೆ ಹತ್ತಿರವಾಗುತ್ತಾರೆಂದು ಉಲ್ಲೇಖಿಸಿದ್ದಾರೆಂದು ಹೇಳಿದರು.

12ನೇ ಶತಮಾನದಲ್ಲಿಜಗಜ್ಯೋತಿ ಬಸವಣ್ಣನವರು ‘ಕಲಬೇಡ ಕೊಲಬೇಡ ಹುಸಿಯ ನುಡಿಯಲೂ ಬೇಡತನ್ನ ಬಣ್ಣಿಸಬೇಡಇತರರ ಅಳಿಯಲೂ ಬೇಡಇದೇಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ’ ಎಂದು ಹೇಳಿದ್ದಾರೆ. ಅದರಂತೆ ಸಮಾಜದಲ್ಲಿ ಸರ್ವರೂ ಶಾಂತಿ ಸಹಬಾಳ್ವೆಯಿಂದ ಜೀವಿಸಬೇಕೆಂದು ತಿಳಿಸಿದರು.

ಅಧ್ಯಕ್ಷತೆಯನ್ನು ಮುಜಾವರ್ ಪಾಷ ವಹಿಸಿದ್ದರು. ಈ ವೇಳೆ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್ ಮಹೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಆಧ್ಯಕ್ಷ ಎಚ್.ಪಿ ಮಂಜೇಗೌಡ, ಮಾಜಿ ಅಧ್ಯಕ್ಷ ನಯಾಜ್‌ಅಹಮದ್, ನಗರಸಭೆ ಸದಸ್ಯ ಶಾದಬ್‌ಅಲಂ ಖಾನ್, ಮುಖಂಡರಾದ ಸಿ.ಎನ್ ಅಕ್ಮಲ್, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಜಯಕುಮಾರ್, ಡಿವೈಎಸ್‌ಪಿ ನಾಗರಾಜ್, ಜಾಮಿಯಾ ಮಸೀದಿ ಅಧ್ಯಕ್ಷ ಮುದಾಸಿರ್ ಪಾಷಾ ಇದ್ದರು.