ಸಾರಾಂಶ
ಮುಸ್ಲಿಮರು ಪ್ರತಿ ವರ್ಷವೂ ಸಹಿತ ರಂಜಾನ್ ಹಬ್ಬದ ಅಂಗವಾಗಿ ಒಂದು ತಿಂಗಳು ಉಪವಾಸ ಮಾಡುವ ಮೂಲಕ ಧರ್ಮದ ಶ್ರೇಷ್ಟತೆ ಕಾಪಾಡಿಕೊಂಡು ಬರುತ್ತಿದ್ದಾರೆ
ಕುಷ್ಟಗಿ: ಮುಸಲ್ಮಾನರ ಪವಿತ್ರ ರಂಜಾನ್ ಹಬ್ಬವೂ ಸಾಮರಸ್ಯದ ಪ್ರತೀಕವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಗಜೇಂದ್ರಗಡ ರಸ್ತೆಯ ಸಂದೀಪ ನಗರದಲ್ಲಿನ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಂಧುಗಳು ಪ್ರಾರ್ಥನೆ ಸಲ್ಲಿಸಿದರು. ನಂತರ ಶುಭಾಷಯ ತಿಳಿಸಿ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮುಸ್ಲಿಮರು ಪ್ರತಿ ವರ್ಷವೂ ಸಹಿತ ರಂಜಾನ್ ಹಬ್ಬದ ಅಂಗವಾಗಿ ಒಂದು ತಿಂಗಳು ಉಪವಾಸ ಮಾಡುವ ಮೂಲಕ ಧರ್ಮದ ಶ್ರೇಷ್ಟತೆ ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ಮುಸಲ್ಮಾನ ಬಂಧುಗಳಿಗೆ ಈ ರಂಜಾನ್ ಹಬ್ಬವು ಪವಿತ್ರ ಹಬ್ಬವಾಗಿದ್ದು, ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದರು.
ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿದರು, ಈ ಸಂದರ್ಭ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಪುರಸಭೆ ಅಧ್ಯಕ್ಷ ಮಹಾಂತೇಶ ಕಲ್ಲಬಾವಿ, ಸೋಮಶೇಖರ ವೈಜಾಪೂರ, ಪರಶುರಾಮ ನಾಗರಾಳ, ಶೇಖರಗೌಡ ಮಾಲಿಪಾಟೀಲ,ನಹೀಮ್, ಜೀವನಸಾಬ ಬಿನ್ನಾಳ, ಖಾದರಸಾಬ ಅತ್ತಾರ, ರಹೀಂಸಾಬ, ಮುರ್ತುಜಾ ಪೇಂಟರ್, ಆಲಾಂಪಾಷಾ ಮೋದಿ, ಅಫ್ತಾಭ್, ನಬಿಸಾಬ ಕುಷ್ಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.