ಹೋಳಿ ಹಿನ್ನಲೆ ಸಂಭ್ರಮದ ರಂಗಪಂಚಮಿ

| Published : Mar 18 2025, 12:33 AM IST

ಸಾರಾಂಶ

ಸೊರಬ: ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ವಿವಿಧ ಹಿಂದೂಪರ ಸಂಘಟನೆ ವತಿಯಿಂದ ಭಾನುವಾರ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ಹೋಳಿ ಹಬ್ಬದ ಅಂಗವಾಗಿ ರಂಗಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಸೊರಬ: ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ವಿವಿಧ ಹಿಂದೂಪರ ಸಂಘಟನೆ ವತಿಯಿಂದ ಭಾನುವಾರ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ಹೋಳಿ ಹಬ್ಬದ ಅಂಗವಾಗಿ ರಂಗಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಭ್ರಾತೃತದ ಕೊಂಡಿ ಬೆಸೆಯುವ ಹೋಳಿ ಹಬ್ಬದಲ್ಲಿ ಜನತೆ ಓಕುಳಿಯಲ್ಲಿ ತೇಲಿಸಿತು. ಡಿಜೆ ಸದ್ದಿಗೆ ಯುವಕರು, ಯುವತಿಯರು ಹಾಗೂ ಮಕ್ಕಳು ಕುಣಿದು ಕುಪ್ಪಳಿಸಿದರು. ಪುಟ್ಟ ಮಕ್ಕಳು ಸಹ ಪರಸ್ಪರ ಬಣ್ಣ ಎರಚುವ ಮೂಲಕ ಸಂಭ್ರಮಿಸಿದರು. ಯುವತಿಯರು, ಮಹಿಳೆಯರಿಗಾಗಿ ಸಂಘಟಕರು ನೃತ್ಯಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ವೈದ್ಯ ಡಾ.ಎಂ.ಕೆ.ಭಟ್, ಪುರಸಭೆ ಸದಸ್ಯ ಮಧುರಾಯ್ ಜಿ.ಶೇಟ್, ಸಮಾಜ ಸೇವಕ ಡಾ.ಎಚ್.ಇ. ಜ್ಞಾನೇಶ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕ ಅಧ್ಯಕ್ಷ ಸಿ.ಪಿ.ಈರೇಶ್ ಗೌಡ, ವಿಹಿಂಪ ಸಾಗರ ಜಿಲ್ಲಾ ಸಹ ಸಂಚಾಲಕ ರವಿ ಗುಡಿಗಾರ್, ನಾಗರಾಜ ಗುತ್ತಿ, ಜಾನಕಪ್ಪ ಒಡೆಯರ್ ಯಲಸಿ, ಜಿ. ಕೆರಿಯಪ್ಪ, ಸುರೇಶ್ ಭಂಡಾರಿ, ನಿರಂಜನ್, ಚಂದನ್, ಶಶಿಕುಮಾರ್, ಆನಂದ್, ರಾಘವೇಂದ್ರ, ಶರತ್ ಕುಮಾರ್, ರಂಗನಾಥ ಮೊಗವೀರ್, ರವಿ ಕೇಸರಿ, ಸತೀಶ್ ಬೈಂದೂರು, ಅನಿಲ್ ಮಾಳವಾದೆ, ಸಂತೋಷ್ ಗುಡಿಗಾರ್, ರಾಜೇಶ್ ಸನ್ನಿ, ಸಂತೋಷ ಸೊಪ್ಪಿನ ಕೇರಿ ಇತರರು ಇದ್ದರು.