ಸೆಪ್ಟೆಂಬರ್‌ 23ರಿಂದ ರಂಗಂಪೇಟೆ ನಾಡಹಬ್ಬ ಉತ್ಸವ: ಸೂಗೂರೇಶ ವಾರದ

| Published : Sep 20 2025, 01:00 AM IST

ಸೆಪ್ಟೆಂಬರ್‌ 23ರಿಂದ ರಂಗಂಪೇಟೆ ನಾಡಹಬ್ಬ ಉತ್ಸವ: ಸೂಗೂರೇಶ ವಾರದ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಸುರಪುರ ಸಮೀಪದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದಲ್ಲಿ 83ನೇ ನಾಡಹಬ್ಬ ಮಹೋತ್ಸವ ಸೆ.23ರಿಂದ ಸೆ.27 ರವರೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ಸಂಭ್ರಮದೊಂದಿಗೆ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸೂಗೂರೇಶ ವಾರದ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಸುರಪುರ ಸಮೀಪದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದಲ್ಲಿ 83ನೇ ನಾಡಹಬ್ಬ ಮಹೋತ್ಸವ ಸೆ.23ರಿಂದ ಸೆ.27 ರವರೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ಸಂಭ್ರಮದೊಂದಿಗೆ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸೂಗೂರೇಶ ವಾರದ ಹೇಳಿದರು.

ಇಲ್ಲಿಯ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.23 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಭುವನೇಶ್ವರಿಯ ಪೂಜೆ, ಪ್ರಸಾದ ವಿತರಣೆ. ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಚಾಲನೆ ನೀಡುವರು. ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸುವರು ಎಂದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:

ಡಾ.ವಿಜಯ ಬಂಗಾರಿ, ಸೋಮರಾಯ ಶಖಾಪೂರ, ಪ್ರಕಾಶ ಅಲಬನೂರ, ಖಮರುದ್ದೀನ ನಾರಾಯಣಪೇಟೆ, ಗೌಸುದ್ದೀನ ಕಿಣ್ಣಿ, ಮಲ್ಲೇಶಿ ಕೋನಾಳ, ಕೇದಾರನಾಥ ಶಾಸ್ತ್ರಿ, ನಂದಕುಮಾರ ಪಾಣಿಭಾತೆ, ಮಲ್ಲಿಕಾರ್ಜುನ ಸಜ್ಜನ, ಭೀಮರಾಯ ದೇವರಗೋನಾಲ, ವೆಂಕೋಬ ದರ್ಶನಕರ, ಡಾ. ಸುರ್ವಣಾ ನಾಯಕ, ಮಂದಾಕಿನಿ ರುದ್ರಸ್ವಾಮಿಮಠ, ಬಸಮ್ಮ ಕುಂಬಾರ, ಪಾರ್ವತಿ ದೇಸಾಯಿ, ನಾಗನಗೌಡ ಪಾಟೀಲ್, ಪ್ರಶಾಂತ ಕುಮಾರ, ಮಾರ್ಥಂಡ ಮಲ್ಲಯ್ಯ ಮುತ್ಯಾ, ಸುರೇಶ ಅಂಬುರೆ, ಗಿರೀಶ ಶಾಬಾದಿ, ಹೊನ್ನಪ್ಪ ತೇಲ್ಕರ, ವಾರೀಸ್ ಕುಂಡಾಲೆ, ತನ್ವಿರ ಅಹ್ಮದ್ ಬೋಡೆ, ರಾಕೇಶ ಚಿನ್ನಾಕರ, ಪ್ರಕಾಶ ಗುಳಗಿ ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ 83ನೇ ನಾಡಹಬ್ಬ ಮಹೋತ್ಸವದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.

ಸೆ.23ರಿಂದ ಸೆ.27ರವರೆಗೆ ಪ್ರತಿ ದಿನ ವಿವಿಧ ಸಾಂಸ್ಕೃತಿಕ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ಖ್ಯಾತ ಬರಹಗಾರರು, ಸಂಗೀತಕಾರರು, ಚಿಂತಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಾಂತಪ್ಪ ಬೂದಿಹಾಳ ಗೌರವ ಅಧ್ಯಕ್ಷತೆ, ಸೂಗೂರೇಶ ವಾರದ ಅಧ್ಯಕ್ಷತೆ. ರಾಜಶೇಖರಗೌಡ ವಜ್ಜಲ್, ವೆಂಕೋಬ ಮಂಗಳೂರು ಗೌರವ ಉಪಸ್ಥಿತಿ ಇರುವರು ಎಂದು ವಿವರಿಸಿದರು.

ಶರಣಗೌಡ ಜೈನಾಪೂರ, ಸೋಮರಾಯ ಶಖಾಪೂರ, ಯಂಕಣ್ಣ ಗದ್ವಾಲ, ಸಿದ್ದಯ್ಯಮಠ, ಪ್ರಕಾಶ ಅಲಬನೂರ, ಬಸವರಾಜ ಯರಸಂ, ಅರವಿಂದ ಬಿಲ್ಲವ್ ಇತರರು ಹಾಜರಿದ್ದರು.