ರಂಗಭೂಮಿ ವಿಸ್ತರಿಸುವ ನಿಟ್ಟಿನಲ್ಲಿ ಆರಂಭಗೊಂಡ ರಂಗಾಯಣಗಳು ಅನೇಕ ಕಲಾವಿದರಿಗೆ ರಂಗ ತರಬೇತಿ ನೀಡಿ, ಹಲವಾರು ಕಾರ್ಯಕ್ರಮ ಆಯೋಜಿಸುತ್ತಿವೆ. ಆದರೆ, ಇಂದಿನ ಜಾಗತೀಕರಣ, ಪಾಶ್ಚಾತೀಕರಣದಿಂದಾಗಿ ನಾಟಕಗಳನ್ನು ನೋಡುವವರ ಸಂಖ್ಯೆ ಕ್ಷೀಣಿಸುತ್ತಿದೆ.

ಧಾರವಾಡ:

ಆಧುನಿಕತೆ ಭರಾಟೆಯಲ್ಲಿ ರಂಗಭೂಮಿಯು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಧಾರವಾಡ ರಂಗಾಯಣವು ಪೌರಾಣಿಕ, ಐತಿಹಾಸಿಕ, ಕೌಟುಂಬಿಕ, ಸ್ತ್ರೀಮೌಲ್ಯ ಹೊಂದಿದ ಸಾಮಾಜಿಕ ಕಳಿಕಳಿಯ ಭಿನ್ನ ನಾಟಕಗಳನ್ನು ಪ್ರದರ್ಶಿಸುವ ಮೂಲಕ ನೋಡುಗರಿಗೆ ಮಾಹಿತಿ ಜತೆಗೆ ಮನರಂಜನೆ ನೀಡುತ್ತಿದೆ ಎಂದು ಪ್ರಾಧ್ಯಾಪಕ ಡಾ. ಸಿ. ಹನುಮಗೌಡ ಹೇಳಿದರು.

ರಂಗಾಯಣವು ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ “ರಂಗಾಯಣ ನಾಟಕೋತ್ಸವ ಹಾಗೂ ಗಾಂಧಿಭಾರತ ಐತಿಹಾಸಿಕ ಭಾವಚಿತ್ರಗಳ ಪ್ರದರ್ಶನ ಸಮಾರೋಪದಲ್ಲಿ ಮಾತನಾಡಿದ ಅವರು, ರಂಗಭೂಮಿ ವಿಸ್ತರಿಸುವ ನಿಟ್ಟಿನಲ್ಲಿ ಆರಂಭಗೊಂಡ ರಂಗಾಯಣಗಳು ಅನೇಕ ಕಲಾವಿದರಿಗೆ ರಂಗ ತರಬೇತಿ ನೀಡಿ, ಹಲವಾರು ಕಾರ್ಯಕ್ರಮ ಆಯೋಜಿಸುತ್ತಿವೆ. ಆದರೆ, ಇಂದಿನ ಜಾಗತೀಕರಣ, ಪಾಶ್ಚಾತೀಕರಣದಿಂದಾಗಿ ನಾಟಕಗಳನ್ನು ನೋಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ನಾಟಕೋತ್ಸವದ ಆರು ದಿನ ಧಾರವಾಡ, ಕಾರ್ಕಳ ಹಾಗೂ ಕಲಬುರ್ಗಿ ರಂಗಾಯಣಗಳ ನಾಟಕಗಳಲ್ಲಿನ ಭಾಷೆ, ವೇಷಭೂಷಣ, ರಂಗಪರಿಕರಗಳನ್ನು ನಾಟಕಗಳಿಗೆ ಹೊಂದುವಂತೆ ಬಳಸಿಕೊಂಡು ದೃಶ್ಯವನ್ನು ನಿರ್ಮಿಸುವಲ್ಲಿ ಅತ್ಯಂತ ಶ್ರಮವಹಿಸಿರುವುದು ಶ್ಲಾಘನೀಯ ಎಂದರು.

ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಬಿ. ಮಾರುತಿ ಮಾತನಾಡಿ, ರಂಗಭೂಮಿ ಬೆಳೆಸುವಲ್ಲಿ ರಂಗಾಯಣಗಳು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಕಲಾವಿದರಿಗೂ ಉತ್ತೇಜನ ನೀಡುತ್ತಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ನಾಟಕೋತ್ಸವದಲ್ಲಿ ಕಾರ್ಕಳ ಹಾಗೂ ಕಲಬುರ್ಗಿ ರಂಗಾಯಣಗಳು ಪ್ರದರ್ಶಿಸಿದ ನಾಟಕಗಳು ರಂಗಾಸಕ್ತರನ್ನು ಸೆಳೆದವು ಹಾಗೂ ಪ್ರಾದೇಶಿಕ ಪತ್ರಗಾರ ಇಲಾಖೆ ವತಿಯಿಂದ ಆಯೋಜಿಸಿದ್ದ ಗಾಂಧೀಜಿ ಕುರಿತ ಹಾಗೂ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಕುರಿತ ವಸ್ತು ಪ್ರದರ್ಶನವು ವಿದ್ಯಾರ್ಥಿಗಳಿಗೆ, ಪ್ರೇಕ್ಷರಿಗೆ ಮಾಹಿತಿ ನೀಡಲಾಯಿತು ಎಂದರು.

ಆನಂತರ “ಕಾಲಚಕ್ರ” ನಾಟಕವನ್ನು ಕಲಬುರ್ಗಿ ರಂಗಾಯಣ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಿದರು. ಇಂದು ಡಿ ನಿರೂಪಿಸಿದರು.