ರಂಗೇರಿದ ವಿಧಾನ ಪರಿಷತ್‌ ಚುನಾವಣೆ ಕಣ

| Published : May 27 2024, 01:06 AM IST / Updated: May 27 2024, 01:07 AM IST

ಸಾರಾಂಶ

ಡಾ.ಧನಂಜಯ್‌ ಸರ್ಜಿ ಪ್ರಚಾರಕ್ಕೆ ಪತ್ನಿ ನಮಿತಾ ಸರ್ಜಿ ಸಾಥ್‌ ನೀಡಿದ್ದು, ಹಲವೆಡೆ ಪ್ರಚಾರ ನಡೆಸಿದರು. ಶಿವಮೊಗ್ಗ ನಗರದ 8ನೇ ವಾರ್ಡಿನಲ್ಲಿ ಪದವೀಧರರನ್ನು ಭೇಟಿಯಾಗಿ ಮತಯಾಚನೆ ನಡೆಸಿದ ಅವರು ಪತಿ ಧನಂಜಯ್‌ ಸರ್ಜಿರನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಈ ವೇಳೆ ಮತದಾರರ ಯೋಗಕ್ಷೇಮ ವಿಚಾರಿಸಿದ್ದು ವಿಶೇಷವಾಗಿತ್ತು.

* ಬಿಜೆಪಿ ಅಭ್ಯರ್ಥಿ ಧನಂಜಯ್‌ ಸರ್ಜಿ ಪರ ಪತ್ನಿ ಮತಯಾಚನೆ । ಪ್ರಚಾರ ವೇಳೆ ಮತದಾರರ ಯೋಗಕ್ಷೇಮ ವಿಚಾರಣೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪ್ರಚಾರ ರಂಗೇರುತ್ತಿದೆ. ಡಾ.ಧನಂಜಯ್‌ ಸರ್ಜಿ ಪ್ರಚಾರಕ್ಕೆ ಪತ್ನಿ ನಮಿತಾ ಸರ್ಜಿ ಸಾಥ್‌ ನೀಡಿದ್ದು, ಹಲವೆಡೆ ಪ್ರಚಾರ ನಡೆಸಿದರು. ಶಿವಮೊಗ್ಗ ನಗರದ 8ನೇ ವಾರ್ಡಿನಲ್ಲಿ ಪದವೀಧರರನ್ನು ಭೇಟಿಯಾಗಿ ಮತಯಾಚನೆ ನಡೆಸಿದ ಅವರು ಪತಿ ಧನಂಜಯ್‌ ಸರ್ಜಿರನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಈ ವೇಳೆ ಮತದಾರರ ಯೋಗಕ್ಷೇಮ ವಿಚಾರಿಸಿದ್ದು ವಿಶೇಷವಾಗಿತ್ತು. ಈ ವೇಳೆ ಬಿಜೆಪಿ ನಗರ ಕಾರ್ಯದರ್ಶಿ ಪರಮೇಶ್ವರ ನಾಯ್ಕ,ನಗರ ಸಮಿತಿ ಸದಸ್ಯ ಮಲ್ಲಿಕಾರ್ಜುನ್ ಸ್ವಾಮಿ, ಮಹಿಳಾ ಪ್ರಮುಖರಾದ ತ್ರಿವೇಣಿ ಶ್ರೀಕಾಂತ್ ಹಾಗೂ ಬೂತ್ ಅಧ್ಯಕ್ಷೆ ಸರಳ, ಕಾರ್ಯದರ್ಶಿ ಮಂಜುಳಾ ಸೇರಿ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.

ವೈದ್ಯರಿಂದ ಪ್ರಚಾರ:

ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ ಧನಂಜಯ್‌ ಸರ್ಜಿ ಪರ ವೈದ್ಯರು ಕೂಡ ಪ್ರಚಾರ ನಡೆಸುತ್ತಿದ್ದಾರೆ. ಶಿಕ್ಷಕರು, ಉಪನಾಸ್ಯಕರು, ವಕೀಲರನ್ನು ಹೀಗೆ ಪದವೀಧರ ಮತದಾರ ಕ್ಷೇತ್ರದಲ್ಲಿ ಮತದಾರರ ಭೇಟಿಯಾಗಿ ಧನಂಜಯ್‌ ಸರ್ಜಿ ಪರ ಮತಯಾಚನೆ ನಡೆಸಿದರು.

ತರೀಕೆರೆ, ಕಡೂರಿನಲ್ಲಿ ಡಾ.ಧನಂಜಯ್‌ ಸರ್ಜಿ ಮತಯಾಚನೆ

ವಿಧಾನ ಪರಿಷತ್ ನೈಋತ್ಯ ಪದವಿಧರ ಮತ್ತು ನೈಋತ್ಯ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು ತಾಲೂಕಿನ ಮಂಡಲಗಳ ವತಿಯಿಂದ ಬಿಜೆಪಿ ಕಾರ್ಯಕರ್ತರ ಮತ್ತು ಚುನಾವಣಾ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಇಲ್ಲಿನ ಅರಮನೆ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತರೀಕೆರೆ ಮಂಡಲದ ಬಿಜೆಪಿ ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಮಹಾಶಕ್ತಿ ಕೇಂದ್ರದ ಪ್ರಮುಖರಿಗೆ ಚುನಾವಣೆಯ ರೂಪುರೇಷೆಗಳ ತಿಳಿಸಿ ತಮ್ಮ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳಲ್ಲಿ ಪದವೀಧರ ಮತದಾರರ ತಲುಪಿ ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರ ಪರವಾಗಿ ಮತಯಾಚಿಸಿ, ಗೆಲ್ಲಿಸುವಂತೆ ಮನವಿ ಮಾಡಲಾಯಿತು. ಹಾಗೆಯೇ ಕಡೂರು ಮಂಡಲದ ಬಿಜೆಪಿ ಕಾರ್ಯಕರ್ತರ ಮತ್ತು ಚುನಾವಣಾ ಪೂರ್ವಭಾವಿ ಸಭೆ ಸುರುಚಿ ಹೋಟೆಲ್ ಸಭಾಂಗಣದಲ್ಲಿ ಮತದಾರರ ಮತ್ತು ಪಕ್ಷದ ಪ್ರಮುಖರ ಸಭೆ ಆಯೋಜಿಸಲಾಗಿತ್ತು .ಮಹಾಶಕ್ತಿ ಕೇಂದ್ರದ ಪ್ರಮುಖರಿಗೆ ಮತದಾರರನ್ನು ಭೇಟಿಯಾಗಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭೋಜೇಗೌಡರ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಮನವಿ ಮಾಡಿದರು.ಈ ವೇಳೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್ ದತ್ತಾತ್ರಿ , ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ರಾಜ್ಯ ರೈತ ಮೋರ್ಚಾದ ಮಾದಪ್ಪ, ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್, ತರೀಕೆರೆ ಮಂಡಲ ಅಧ್ಯಕ್ಷ ಪ್ರತಾಪ್ , ಮಾಜಿ ಶಾಸಕ ಎಸ್. ಎಂ. ನಾಗರಾಜ್, ಜೆಡಿಎಸ್ ತಾಲೂಕು ಅಧ್ಯಕ್ಷ ನರೇಂದ್ರ, ಬಿಜೆಪಿ ಮುಖಂಡರಾದ ಧ್ರುವಕುಮಾರ್, ಕೆ.ಆನಂದಪ್ಪ, ಎ. ಸಿ. ಚಂದ್ರಪ್ಪ, ಮಂಜುನಾಥ್, ಜೆಡಿಎಸ್ ಮುಖಂಡರಾದ ಶಿವಾನಂದ, ಪದವೀಧರ ಕ್ಷೇತ್ರದ ತಾಲೂಕು ಸಂಚಾಲಕ ಶಶಿಕುಮಾರ್, ಶಿಕ್ಷಕರ ಕ್ಷೇತ್ರದ ತಾಲೂಕು ಸಂಚಾಲಕ ಸೋಮಶೇಖರ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಆನಂದಪ್ಪ ಸೇರಿ ಹಲವರಿದ್ದರು.----------------------------ಪೊಟೋ: 26ಎಸ್‌ಎಂಜಿಕೆಪಿ03ಕಡೂರಿನ ಕಡೂರು ತಾಲೂಕಿನ ಸುರುಚಿ ಹೋಟೆಲ್ ಸಭಾಂಗಣದಲ್ಲಿ ಮತದಾರರ ಮತ್ತು ಪಕ್ಷದ ಪ್ರಮುಖರ ಸಭೆ ನಡೆಯಿತು.