ಸಾರಾಂಶ
ಸ್ವಾಭಿಮಾನ-ನಾಡಭಕ್ತಿ, ದೇಶಭಕ್ತಿಗೆ ಮತ್ತೊಂದು ಹೆಸರೇ ರಾಣಿ ಚನ್ನಮ್ಮ ಎಂದು ತಹಸೀಲ್ದಾರ್ ಎಂ.ಎನ್.ಮಠದ ಬಣ್ಣಿಸಿದರು.
ಕನ್ನಡಪ್ರಭ ವಾರ್ತೆ ಯರಗಟ್ಟಿ
ಸ್ವಾಭಿಮಾನ-ನಾಡಭಕ್ತಿ, ದೇಶಭಕ್ತಿಗೆ ಮತ್ತೊಂದು ಹೆಸರೇ ರಾಣಿ ಚನ್ನಮ್ಮ ಎಂದು ತಹಸೀಲ್ದಾರ್ ಎಂ.ಎನ್.ಮಠದ ಬಣ್ಣಿಸಿದರು.ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಕಿತ್ತೂರು ವಿಜಯೋತ್ಸವದ ಜ್ಯೋತಿಗೆ ಸ್ವಾಗತಿಸಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇಲ್ಲಿಂದ ಹೊರಟ ಜ್ಯೋತಿ ಮುರಗೋಡ, ಬೈಲಹೊಂಗಲ, ಸಂಗೊಳ್ಳಿಗೆ ಹಾದು ಕಿತ್ತೂರು ತಲುಪಲಿದೆ. ಬ್ರಿಟಿಷರ ವಿರುದ್ಧ ನೇರ ಸವಾಲೊಡ್ಡಿದ ದಿಟ್ಟ ಮಹಿಳೆ. ಸಂಗೊಳ್ಳಿ ರಾಯಣ್ಣ ಕೂಡ ರಾಣಿ ಚನ್ನಮ್ಮ ಅವರ ಸೈನ್ಯದಲ್ಲಿದ್ದರು. ಬ್ರಿಟಿಷರಿಗೆ ತೆರಿಗೆ ಕೊಡಲು ವಿರೋಧಿಸಿ ವಿರೋಚಿತವಾಗಿ ಹೋರಾಡಿದ ದೇಶಪ್ರೇಮಿಗಳು ಇವರು ಎಂದರು.
ಸವದತ್ತಿ ಮಾಜಿ ತಾಪಂ ಅಧ್ಯಕ್ಷ ಶ್ರೀಮಂತ ವಿನಯಕುಮಾರ ದೇಸಾಯಿ ಮಾತನಾಡಿ, ಕಿತ್ತೂರ ವೀರರಾಣಿ ಚನ್ನಮಳ ಧೈರ್ಯ ಮತ್ತು ಸಾಹಸ ಇಂದಿನ ಮಹಿಳೆಯರಿಗೆ ಮತ್ತು ಯುವಕರಿಗೆ ಸ್ಫೂರ್ತಿಯಾಗಲಿ ಹಾಗೂ ಕಿತ್ತೂರಿನಲ್ಲಿ ಆಚರಿಸಲ್ಪಡುತ್ತಿರುವ ಕಿತ್ತೂರು ಉತ್ಸವಕ್ಕೆ ಮತ್ತು ಕಿತ್ತೂರಿನ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.ಈ ವೇಳೆ ಮಾಜಿ ಜಿಪಂ ಸದಸ್ಯ ಅಜೀತಕುಮಾರ ದೇಸಾಯಿ, ಪಪಂ ಮುಖ್ಯಾಧಿಕಾರಿ ಡಿ.ಎನ್.ತಹಸೀಲ್ದಾರ್, ಪಪಂ ನಾಮನಿರ್ದೇಶಿತ ಸದಸ್ಯ ನಿಖಿಲ ಪಾಟೀಲ, ಹನುಮಂತ ಹಾರುಗೊಪ್ಪ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ರಫೀಕ್ ಡಿ.ಕೆ, ಶಿವಾನಂದ ಕರಿಗೊಣ್ಣವರ, ಎಂ.ವಿ.ಇಂಗಳೆ, ಶಂಕರಗೌಡ ಪಾಟೀಲ, ಟಿ.ಎಂ.ಕಾಮಣ್ಣವರ, ಡಾ.ರಾಜಶೇಖರ ಬಿರಾದಾರ, ಈರಣ್ಣ ಹುಲ್ಲೂರ, ಶಿವಾನಂದ ಬಳಿಗಾರ, ರವಿಕುಮಾರ ಅಣ್ಣಿಗೇರಿ, ಮಹಾಂತೇಶ ಕತ್ತಿ, ಐ.ಆರ್.ಗಂಜಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.