ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ ಸ್ವತಂತ್ರ ಮಹಿಳಾ ಸೈನ್ಯ ಕಟ್ಟಿ ಯುದ್ಧಭೂಮಿಯಲ್ಲಿ ಹೋರಾಡಿದ ಬೆಳವಡಿ ಸಾಮ್ರಾಜ್ಯದ ರಾಣಿ ಮಲ್ಲಮ್ಮಳ ಯಶೋಗಾಥೆ ಎಂದಿಗೂ ಅಜರಾಮರವಾಗಿರಲಿದೆ. ತನ್ನ ಪ್ರಜೆಗಳಿಗೆ ಸಂಕಷ್ಟ ಬಂದಾಗ ಪ್ರಾಣದ ಹಂಗು ತೊರೆದು ಹೋರಾಡಿದ ಬೆಳವಡಿ ಮಲ್ಲಮ್ಮಳಂಥ ಸಮರ ಸಿಂಹಿಣಿಯರು ಈ ನಾಡಿನಲ್ಲಿ ಹುಟ್ಟಿ ಬರಬೇಕು ಎಂದು ಬೆಳಗಾವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ ಹೇಳಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸ್ವತಂತ್ರ ಮಹಿಳಾ ಸೈನ್ಯ ಕಟ್ಟಿ ಯುದ್ಧಭೂಮಿಯಲ್ಲಿ ಹೋರಾಡಿದ ಬೆಳವಡಿ ಸಾಮ್ರಾಜ್ಯದ ರಾಣಿ ಮಲ್ಲಮ್ಮಳ ಯಶೋಗಾಥೆ ಎಂದಿಗೂ ಅಜರಾಮರವಾಗಿರಲಿದೆ. ತನ್ನ ಪ್ರಜೆಗಳಿಗೆ ಸಂಕಷ್ಟ ಬಂದಾಗ ಪ್ರಾಣದ ಹಂಗು ತೊರೆದು ಹೋರಾಡಿದ ಬೆಳವಡಿ ಮಲ್ಲಮ್ಮಳಂಥ ಸಮರ ಸಿಂಹಿಣಿಯರು ಈ ನಾಡಿನಲ್ಲಿ ಹುಟ್ಟಿ ಬರಬೇಕು ಎಂದು ಬೆಳಗಾವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ ಹೇಳಿದರು.ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ರಾಣಿ ಮಲ್ಲಮ್ಮಳ 365 ನೇ ವರ್ಧಂತಿ ಉತ್ಸವ ನಿಮಿತ್ತ ಈಶಪ್ರಭು ಶಿಕ್ಷಣ ಸಂಸ್ಥೆಯ ಅರಮನೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಉಪನ್ಯಾಸನ ನೀಡಿ ಮಾತನಾಡಿ, ಸರಕಾರ ರಾಣಿ ಮಲ್ಲಮ್ಮಳ ಹೆಸರಿನಲ್ಲಿ ಉತ್ಸವ, ಸಭೆ ಸಮಾರಂಭ, ಚಿಂತನ ಮಂಥನ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆಗೆ ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಬೇಕು ಅಂದಾಗ ಮಾತ್ರ ಮಲ್ಲಮ್ಮ ರಾಣಿಯ ದೇಶಪ್ರೇಮದ ಹೋರಾಟಕ್ಕೆ ಸಾರ್ಥಕತೆ ಬರುತ್ತದೆ ಎಂದರು.ಸಂಸ್ಥೆ ಅಧ್ಯಕ್ಷ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಸವದತ್ತಿ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದಂತೆ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ಆದೇಶ ಹೊರಡಿಸುವುದರ ಮೂಲಕ ರಾಣಿ ಮಲ್ಲಮ್ಮಳಿಗೆ ಗೌರವ ನೀಡಬೇಕು. ಸರಕಾರ ಈ ಬಗ್ಗೆ ಎಲ್ಲೂ ಪ್ರಸ್ತಾಪಿಸದ ಕಾರಣ ಶಿಘ್ರದದಲ್ಲೇ ಬೆಳವಡಿ ಹಾಗೂ ಸುತ್ತಲಿನ ಎಲ್ಲ ಗ್ರಾಮಗಳ ಪ್ರಮುಖರ ಸಭೆ ಕರೆದು ಪ್ರಾಧಿಕಾರ ರಚನೆಗಾಗಿ ಬೃಹತ್ ಹೋರಾಟ ನಡೆಸಲು ರೂಪುರೇಷೆ ಸಿದ್ಧಗೊಳಿಸುತ್ತಿದ್ದೇವೆ. ಎಲ್ಲರೂ ಅಭಿಮಾನದಿಂದ ಇದರಲ್ಲಿ ಪಾಲ್ಗೊಳ್ಳಬೇಕು ಎಂದರು.ಸಂಸ್ಥೆ ಕಾರ್ಯದರ್ಶಿ ಎಂ.ಎಂ. ಕಾಡೇಶನವರ ಪ್ರಸ್ತಾವಿಕವಾಗಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಕಾರಿಮನಿ, ಜಿಪಂ ಮಾಜಿ ಸದಸ್ಯ ವೀರಣ್ಣ ಕರೀಕಟ್ಟಿ, ಜಿವಿ ಕಲಾಬಳಗದ ಗದಗಯ್ಯ ಹಿರೇಮಠ, ಎನ್.ಎಮ್.ಕರೀಕಟ್ಟಿ, ಮಡಿವಾಳಯ್ಯ ರೊಟ್ಟಯ್ಯನವರ, ದೊಡವಾಡ ಠಾಣೆ ಪಿಎಸ್‌ಐ ಜಿ.ಜಿ.ಹಂಪನ್ನವರ, ಪ್ರಮುಖರಾದ ಎಸ್.ಸಿ ಗುಗ್ಗರಿ, ಶಂಕರ ಪರಮನಾಯಕರ, ಡಾ.ಎ.ಬಿ.ಪಾಟೀಲ, ಎ.ಆರ್.ಮರಿಹಾಳ, ಪ್ರವೀಣ ಹಿರೇಮಠ, ಅಶೋಕ ಕರೀಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಬೆಳವಡಿ ಗ್ರಾಮದ ಎಲ್ಲ ಶಾಲೆ ಕಾಲೇಜುಗಳ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಗ್ರಾಮಸ್ಥರು ಭಾಗವಹಿಸಿದ್ದರು. ಇದಕ್ಕೂ ಮೊದಲು ವರ್ಧಂತಿ ಉತ್ಸವ ನಿಮಿತ್ತ ಗ್ರಾಮದಲ್ಲಿ ಶಾಲಾ ಕಾಲೇಜು ಮಕ್ಕಳಿಗಾಗಿ ನಾನಾ ಸ್ಪರ್ಧಾತ್ಮ ಚಟುವಟಿಕೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳಿಂದ ಮೆರವಣಿಗೆ ಕಾರ್ಯಕ್ರಮ ನಡೆಯಿತು. ಅಲಂಕೃತ ಸಾರೋಟಿನಲ್ಲಿ ರಾಣಿ ಮಲ್ಲಮ್ಮ ಹಾಗೂ ರಾಜಾ ಈಶಪ್ರಭುವಿನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲಾಗಿತ್ತು. ಮಲ್ಲಮ್ಮ ವೃತ್ತದಲ್ಲಿನ ಮಲ್ಲಮ್ಮ ರಾಣಿ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪೂಜೆ ನೆರವೇರಿಸಲಾಯಿತು.ಪ್ರಾಚಾರ್ಯ ಎಂ.ಪಿ.ಉಪ್ಪಿನ ಸ್ವಾಗತಿಸಿದರು. ಶಿಕ್ಷಕರಾದ ವಿ.ಎಮ್.ಕಾಡೇಶನವರ ನಿರೂಪಿಸಿದರು. ಶಂಕರ ಕರೀಕಟ್ಟಿ ವಂದಿಸಿದರು.