ನನ್ನ ಬಳಿ ಆಕಾಂಕ್ಷ ಎಂಬ ಹಿಂದೂ ಹೆಸರನ್ನು ಹೇಳಿಕೊಂಡು ಜಿಮ್ ಟ್ರೈನರ್ ಪರಿಚಯಿಸಿಕೊಂಡಿದ್ದ. ಜಿಮ್‌ನಲ್ಲಿ ಹಿಂದೂ ದೇವರುಗಳ ಫೋಟೋ ಇದ್ದವು. ತಾವು ಜಿಮ್ ನಲ್ಲಿ ಬಟ್ಟೆ ಬದಲಿಸುವ ವೀಡಿಯೋ ಮಾಡಿಕೊಂಡು, ಬ್ಲ್ಯಾಕ್ ಮೇಲ್ ಮಾಡಿದ್ದ. ಈಚೆಗಷ್ಟೇ ಆತ ಹಿಂದೂ ಅಲ್ಲ, ಹಿಂದೂ ಹೆಸರು ಹೇಳಿಕೊಂಡ ಟ್ರೈನರ್ ಎಂ.ಇಸ್ಮಾಯಿಲ್ ಎಂದು ಹೇಳಿಕೊಂಡಿದ್ದ ಎಂದು ದಾವಣಗೆರೆಯ ಸಂತ್ರಸ್ತೆ ದೂರಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ನನ್ನ ಬಳಿ ಆಕಾಂಕ್ಷ ಎಂಬ ಹಿಂದೂ ಹೆಸರನ್ನು ಹೇಳಿಕೊಂಡು ಜಿಮ್ ಟ್ರೈನರ್ ಪರಿಚಯಿಸಿಕೊಂಡಿದ್ದ. ಜಿಮ್‌ನಲ್ಲಿ ಹಿಂದೂ ದೇವರುಗಳ ಫೋಟೋ ಇದ್ದವು. ತಾವು ಜಿಮ್ ನಲ್ಲಿ ಬಟ್ಟೆ ಬದಲಿಸುವ ವೀಡಿಯೋ ಮಾಡಿಕೊಂಡು, ಬ್ಲ್ಯಾಕ್ ಮೇಲ್ ಮಾಡಿದ್ದ. ಈಚೆಗಷ್ಟೇ ಆತ ಹಿಂದೂ ಅಲ್ಲ, ಹಿಂದೂ ಹೆಸರು ಹೇಳಿಕೊಂಡ ಟ್ರೈನರ್ ಎಂ.ಇಸ್ಮಾಯಿಲ್ ಎಂದು ಹೇಳಿಕೊಂಡಿದ್ದ ಎಂದು ದಾವಣಗೆರೆಯ ಸಂತ್ರಸ್ತೆ ದೂರಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದೂವರೆ ವರ್ಷದಿಂದ ಫಿಟ್‌ನೆಸ್ ಜಿಮ್‌ಗೆ ಹೋಗುತ್ತಿದ್ದೆ. ಈಚೆಗಷ್ಟೇ ಜಿಮ್‌ನಲ್ಲಿ ಡ್ರೆಸ್ ಚೇಂಜ್ ಮಾಡುವ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಅದನ್ನು ನನಗೆ ತೋರಿಸಿ, ನನ್ನ ಇಷ್ಟದಂತೆ ನೀನು ಇರಬೇಕು. ತಾನು ಕೇಳಿದಷ್ಟು ದುಡ್ಡು, ಬಂಗಾರ ನೀಡಬೇಕೆಂಬುದಾಗಿ ವೀಡಿಯೋ ತೋರಿಸಿ, ಬ್ಲ್ಯಾಕ್‌ಮೇಲ್ ಮಾಡಿದ್ದ ಎಂದರು.
ಜಿಮ್‌ನ ಸಿಸಿ ಕ್ಯಾಮೆರಾದ ಕೆಳಗೆ ನನ್ನ ಮೇಲೆ ಅತ್ಯಾಚಾರ ಮಾಡಿದ್ದು, ಆ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. 4 ಲಕ್ಷ ರು. ಹಣ ನೀಡುವಂತೆ, ಇಲ್ಲದಿದ್ದರೆ ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುವುದಾಗಿ ಬೆದರಿಸಿದ್ದ ಎಂದು ಆರೋಪಿಸಿದರು.ಇಸ್ಮಾಯಿಲ್‌ನ ತಾಯಿ ತನ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ್ದಾರೆ. ನನ್ನ ವೀಡಿಯೋವನ್ನು ನಾನೇ ಮಾಡಿಕೊಂಡು, ಹೇಗೆ ಬ್ಲ್ಯಾಕ್‌ಮೇಲ್ ಮಾಡುತ್ತೀನಿ? ನನ್ನದು ವಿದ್ಯಾವಂತರ, ಆರ್ಥಿಕ ಸ್ಥಿತಿವಂತವಾಗಿರುವ ಕುಟುಂಬ. ಜಿಮ್‌ನಲ್ಲಿ ಮೊಬೈಲ್‌ವೊಂದು ಕಳುವಾಗಿತ್ತಂತೆ. ಘಟನೆ ನಡೆದ ಮುನ್ನಾದಿನ, ಆ ದಿನ, ಮಾರನೆ ದಿನ ನಾನು ಮೂರೂ ದಿನ ಅಲ್ಲಿಗೆ ಹೋಗಿರಲಿಲ್ಲ. ನಾನು ಹೋದ ದಿನ ಖಾಲಿ ಪೇಪರ್ ಮೇಲೆ ಎಲ್ಲರೂ ಸಹಿ ಮಾಡಿದ್ದಾರೆ ಎಂದರು.
ಇಸ್ಮಾಯಿಲ್ ತಾಯಿ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ ಆಡಿಯೋ ನನ್ನದಲ್ಲ. ನನಗೆ 4.5 ಲಕ್ಷ ರು. ಕೊಟ್ಟಿದ್ದಾರೆಂಬ ಆರೋಪ ಮಾಡಿದ್ದಾರೆ. ಎಸ್ಸೆಸ್ ಹೈಟೆಕ್ ಆಸ್ಪತ್ರೆ ಬಳಿ ಹಣ ಕೊಟ್ಟಿದ್ದಾರೆಂಬ ಆರೋಪ ಮಾಡಿದ ಆತನ ತಾಯಿ ಸಾಕ್ಷ್ಯಗಳ ಸಮೇತ ಆರೋಪ ಮಾಡಲಿ. ಅವನ ತಾಯಿ ಜೊತೆಗೆ ನಾನು ಮಾತಾಡಿಯೇ ಇಲ್ಲ. ಬಹಳಷ್ಟು ಹೆಣ್ಣು ಮಕ್ಕಳಿಗೆ ಇಸ್ಮಾಯಿಲ್ ಇದೇ ರೀತಿ ಮಾಡಿದ್ದಾನೆ. ಹಲವಾರು ಹೆಣ್ಣು ಮಕ್ಕಳ ವೀಡಿಯೋ, ಫೋಟೋಗಳನ್ನು ಎಲ್ಲವೂ ಆತನ ಮೊಬೈಲ್‌ನಲ್ಲಿವೆ ಎಂದು ದೂರಿದರು.ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಆಲೂರು ರಾಜಶೇಖರ, ಶ್ರೀಧರ್, ಬಿ.ಸಾಗರ್, ವೆಂಕಟೇಶ ನಾಯ್ಕ, ರಘು ಇತರರು ಇದ್ದರು.
ರೇಪ್ ಕೇಸ್ ಬಗ್ಗೆ ಡಾ.ನಾಗಲಕ್ಷ್ಮಿ ಚಕಾರ ಎತ್ತಿಲ್ಲಜಿಮ್ ಟ್ರೈನರ್‌ನಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ಥ ಮಹಿಳೆ ದೂರು ನೀಡಿದ್ದರೂ ಎಲ್ಲಾ ಕಡೆಗೂ ಹೋಗುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧುರಿ ಈ ಬಗ್ಗೆ ಚಕಾರ ಎತ್ತದಿರುವುದನ್ನು ನೋಡಿದರೆ ಆಯೋಗದ ಅಧ್ಯಕ್ಷರು ಇದ್ದಾರೋ ಅಥವಾ ಕೋಮಾದಲ್ಲಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದರು.
ಜಿಮ್ ಟ್ರೈನರ್ ಇಸ್ಮಾಯಿಲ್ ವಿರುದ್ಧ ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ವೈದ್ಯಕೀಯ ತಪಾಸಣೆ ನಂತರ ನೇರವಾಗಿ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಇದೊಂದೇ ಅಲ್ಲ, ಇಂತಹ ಹಲವಾರು ಪ್ರಕರಣಗಳಿದ್ದು, ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಯವರ ಗಮನಕ್ಕೆ ಇದ್ಯಾವುದೂ ಬರುತ್ತಿಲ್ಲವೇ ಎಂದರು.ಮೊದಲ ಸಲ ಜಿಮ್ ಕಾಮುಕನ ವಿರುದ್ಧ 376 ಕೇಸ್ ದಾಖಲಾಗಿದೆ. ಸಂತ್ರಸ್ತೆ ಫೋಟೋ, ಹೆಸರು ಬಹಿರಂಗಪಡಿಸಿದವರ ವಿರುದ್ಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು. ಮಹಿಳಾ ಆಯೋಗಕ್ಕೂ ದೂರು ದಾಖಲಿಸಲಿದ್ದೇವೆ. ಪ್ರತಿ ಜಿಮ್, ಫಿಟ್ನೆಸ್ ಸೆಂಟರ್ ಮುಂದೆ ಪೊಲೀಸ್ ಇಲಾಖೆ ಸಹಾಯವಾಣಿ, ಶ್ರೀರಾಮ ಸೇನೆ ಸಹಾಯವಾಣಿ ಸಂಖ್ಯೆ ಸಮೇತ ಫಲಕವನ್ನು ಪಾಲಿಕೆ ಅನುಮತಿ ಪಡೆದೇ, ಕಾನೂನುಬದ್ಧವಾಗಿ ಹಾಕುತ್ತೇವೆ.
ಮಣಿ ಸರ್ಕಾರ ಜಿಲ್ಲಾಧ್ಯಕ್ಷ, ಶ್ರೀರಾಮ ಸೇನೆ