ಸಾರಾಂಶ
ಜವಹರ್ ಶಿಕ್ಷಣ ಸಂಸ್ಥೆಯಲ್ಲಿ 17 ವರ್ಷದೊಳಗಿನ ಎಚ್.ಎಸ್. ಮಹದೇವಪ್ರಸಾದ್ ಕಪ್ ರ್‍ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ನಗರದ ರಾಯಲ್ ಚೆಸ್ ಅಕಾಡೆಮಿಯ ವಿದ್ಯಾರ್ಥಿನಿ ಎಂ.ಎಚ್.ಯದ್ವಿನಿ ಚಾಂಪಿಯನ್ ಆಗಿದ್ದು, ಇತರೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಜವಹರ್ ಶಿಕ್ಷಣ ಸಂಸ್ಥೆಯಲ್ಲಿ 17 ವರ್ಷದೊಳಗಿನ ಎಚ್.ಎಸ್. ಮಹದೇವಪ್ರಸಾದ್ ಕಪ್ ರ್‍ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ನಗರದ ರಾಯಲ್ ಚೆಸ್ ಅಕಾಡೆಮಿಯ ವಿದ್ಯಾರ್ಥಿನಿ ಎಂ.ಎಚ್.ಯದ್ವಿನಿ ಚಾಂಪಿಯನ್ ಆಗಿದ್ದು, ಇತರೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಚಾಮರಾಜನಗರ ಜಿಲ್ಲಾ ಚದುರಂಗ ಸಂಸ್ಥೆ ಹಾಗೂ ಗುಂಡ್ಲುಪೇಟೆ ಚೆಸ್ ಕ್ಲಬ್‌ನಿಂದ ನಡೆದ ಪಂದ್ಯಾವಳಿಯಲ್ಲಿ ರಾಯಲ್ ಚೆಸ್ ಅಕಾಡೆಮಿ ವಿದ್ಯಾರ್ಥಿಗಳು ವಿವಿಧ ವಯಸ್ಸಿನ ವರ್ಗದಲ್ಲಿ ಹಲವು ಬಹುಮಾನ ಪಡೆದಿದ್ದಾರೆ.
13 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಎಂ.ಎಚ್.ಯದ್ವಿನಿ ಮೊದಲ ಸ್ಥಾನ ಪಡೆದು ಚಾಂಪಿಯನ್ ಆಗಿದ್ದು, ಎಂ.ಎಸ್.ಜನವಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. 11 ವರ್ಷದ ವಿಭಾಗದಲ್ಲಿ ಎಚ್.ಯು.ಉನ್ನತಿ ಪ್ರಥಮ, ಕವನ ದ್ವಿತೀಯ, 9 ವರ್ಷದ ವಿಭಾಗದಲ್ಲಿ ನಿಹಾರಿಕ ಪ್ರಥಮ ಸ್ಥಾನ ಪಡೆದಿದ್ದಾರೆ.ಬಾಲಕರ 11 ವರ್ಷದ ವಿಭಾಗದಲ್ಲಿ ಸಿ.ಚಿರಾಗ್ ದ್ವಿತೀಯ, 13 ವರ್ಷದೊಳಗಿನ ವಿಭಾಗದಲ್ಲಿ ಎ.ಬಲ್ವಿತ್ ಗೌಡ ದ್ವಿತೀಯ, ಜೀಷ್ಣು ನಾಲ್ಕನೇ, ಸಾಗರ್ 5ನೇ ಸ್ಥಾನ, 9 ವರ್ಷದ ವಿಭಾಗದಲ್ಲಿ ಎಂ.ಕವಿಲ್ 3ನೇ ಸ್ಥಾನ, 15 ವರ್ಷದೊಳಗಿನ ವಿಭಾಗದಲ್ಲಿ ಎಂ.ಬ್ರಿಜೇಶ್ 4ನೇ ಸ್ಥಾನ ಪಡೆದುಕೊಂಡರು.
ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಕ್ಕಳಿಗೆ ಬಹುಮಾನ ವಿತರಿಸಿದರು. ಮಂಡ್ಯ ರಾಯಲ್ ಚೆಸ್ ಅಕಾಡೆಮಿಗೆ ಉತ್ತಮ ಚೆಸ್ ಅಕಾಡೆಮಿ ಪ್ರಶಸ್ತಿ ಲಭಿಸಿತು ಎಂದು ಅಕಾಡೆಮಿ ಕಾರ್ಯದರ್ಶಿ ಎಂ.ಎಸ್ .ಚೇತನ್ ತಿಳಿಸಿದ್ದಾರೆ.