ಸಾರಾಂಶ
ಮೊದಲ ಬಾರಿ ಅವರು ನಾಯಕ ನಟನಾಗಿ, ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ. ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದು, ನಾಯಕಿಯಾಗಿ ಅಪೂರ್ವಾ ನಟಿಸಿದ್ದಾರೆ. 3 ಹಾಡುಗಳನ್ನು ಹೊಂದಿದ್ದು, 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಹುಬ್ಬಳ್ಳಿ: ರ್‍ಯಾಪರ್ ಚೆಂದನ್ ಶೆಟ್ಟಿ ಅಭಿನಯದ ಸೂತ್ರಧಾರಿ ಚಿತ್ರ ಮೇ 9ರಂದು ತೆರೆಕಾಣಲಿದೆ ಎಂದು ಚಿತ್ರದ ಕ್ರಿಯೇಟಿವ್ ಡೈರೆಕ್ಟರ್ ನವರಸನ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಚೆಂದನ್ ಶೆಟ್ಟಿ ರ್‍ಯಾಪ್ ಸಾಂಗ್ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ. ಮೊದಲ ಬಾರಿ ಅವರು ನಾಯಕ ನಟನಾಗಿ, ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ. ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದು, ನಾಯಕಿಯಾಗಿ ಅಪೂರ್ವಾ ನಟಿಸಿದ್ದಾರೆ. 3 ಹಾಡುಗಳನ್ನು ಹೊಂದಿದ್ದು, 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದರು.ನಾಯಕ ನಟ ಚೆಂದನ್ ಶೆಟ್ಟಿ ಮತ್ತು ನಾಯಕಿ ಅಪೂರ್ವಾ ಮಾತನಾಡಿ, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಇದಾಗಿದೆ. ಕನ್ನಡ ಚಿತ್ರರಸಿಕರು ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಈಗಲ್ ಮೀಡಿಯಾ ಕ್ರಿಯೇಷನ್ಸ್ ಸಿನಿಮಾ ನಿರ್ಮಿಸಿದ್ದು, ಕಿರಣಕುಮಾರ ನಿರ್ದೇಶನ ಮಾಡಿದ್ದಾರೆ. ತಬಲಾ ನಾಣಿ, ಸಂಜನಾ ಆನಂದ, ಪ್ರಶಾಂತ ಮತ್ತಿತರರು ನಟಿಸಿದ್ದಾರೆ.ಸೋನು ನಿಗಮ್‌ದು ಉದ್ಧಟತನ: ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದ್ದನ್ನು ಪಹಲ್ಗಾಂ ಭಯೋತ್ಪಾದನಾ ದಾಳಿಗೆ ತಳುಕು ಹಾಕಿದ ಗಾಯಕ ಸೋನು ನಿಗಮ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಚೆಂದನ್ ಶೆಟ್ಟಿ, ಅವರು ಬೆಂಗಳೂರಿನಲ್ಲೇ ಇದ್ದೇ ಉದ್ಧಟತನ ಮೆರೆದಿದ್ದಾರೆ. ಅವರ ವಿಷಯದಲ್ಲಿ ಚಿತ್ರರಂಗ ಒಟ್ಟಾಗಿ ನಿಂತಿದೆ. ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕಿತ್ತು. ಅವರಿಗೆ ಮಾನಸಿಕ ಸಮಸ್ಯೆ ಇರಬಹುದು. ಚಿಕಿತ್ಸೆ ಪಡೆಯಲು ಹೇಳುವುದು ಒಳ್ಳೆಯದು. ಈಗಾಗಲೇ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಕರವೇ ಕ್ರಮಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದರು.