ಆಡಂಬರವಿಲ್ಲದೇ ಉಡುಪಿಗೆ ಬಂದಿದ್ದ ರತನ್ ಟಾಟಾ!

| Published : Oct 11 2024, 11:55 PM IST

ಆಡಂಬರವಿಲ್ಲದೇ ಉಡುಪಿಗೆ ಬಂದಿದ್ದ ರತನ್ ಟಾಟಾ!
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನ ಮೇರೆಗೆ ಆಗಮಿಸಿದ ಅವರು, ಪುತ್ತಿಗೆ ಮೂಲಮಠದ ನೂತನ ಸ್ವಾಗತ ಗೋಪುರ ಉದ್ಘಾಟಿಸಿದ್ದರು. ನಂತರ ಅಲ್ಲಿರುವ ವಿದ್ಯಾ ಪೀಠಕ್ಕೆ ಭೇಟಿ ಕೊಟ್ಟು ಶ್ರೀ ನರಸಿಂಹ ಹಾಗೂ ಗಣಪತಿ ದೇವರ ದರ್ಶನವನ್ನೂ ಪಡೆದಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಬುಧವಾರ ನಿಧನರಾದ ದೇಶದ ಶ್ರೇಷ್ಠ ಉದ್ಯಮಿ ರತನ್ ಟಾಟಾ 2014ರ ಫೆ.1ರಂದು ಉಡುಪಿಗೆ ಭೇಟಿ ನೀಡಿದ್ದರು. ಅವರು ಇಲ್ಲಿನ ಸುವರ್ಣ ನದಿ ಪಕ್ಕದ ಪುತ್ತಿಗೆ ಗ್ರಾಮದಲ್ಲಿ ಪುತ್ತಿಗೆ ಮಠದ ಮೂಲ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನ ಮೇರೆಗೆ ಆಗಮಿಸಿದ ಅವರು, ಪುತ್ತಿಗೆ ಮೂಲಮಠದ ನೂತನ ಸ್ವಾಗತ ಗೋಪುರ ಉದ್ಘಾಟಿಸಿದ್ದರು. ನಂತರ ಅಲ್ಲಿರುವ ವಿದ್ಯಾ ಪೀಠಕ್ಕೆ ಭೇಟಿ ಕೊಟ್ಟು ಶ್ರೀ ನರಸಿಂಹ ಹಾಗೂ ಗಣಪತಿ ದೇವರ ದರ್ಶನವನ್ನೂ ಪಡೆದಿದ್ದರು. ಈ ಸಂದರ್ಭ ಶ್ರೀಗಳು ಟಾಟಾ ಅವರನ್ನು ಸನ್ಮಾನಿಸಿ ಗೌರವಿಸಿದ್ದರು.ದೇಶದ ಶ್ರೇಷ್ಠ ಉದ್ಯಮಿಯಾಗಿದ್ದರೂ ಯಾವುದೇ ಪೂರ್ವಪ್ರಚಾರವಿಲ್ಲದೇ ಅತ್ಯಂತ ಸರಳವಾಗಿ ಆಗಮಿಸಿದ್ದ ಅವರು ಪುತ್ತಿಗೆ ಗ್ರಾಮೀಣ ಪರಿಸರದಲ್ಲಿ ಮಠದಲ್ಲಿ ಕೆಲ ಸಮಯ ಕಳೆದು ಸಂತಸ ವ್ಯಕ್ತಪಡಿಸಿದ್ದರು.

ರತನ್ ಟಾಟಾ ಅವರ ನಿಧನಕ್ಕೆ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶ ಮೊದಲು ಎಂಬ ತತ್ವ ರತನ್ ಟಾಟಾ ಅವರದ್ದಾಗಿತ್ತು, ಆದರ್ಶಮಯ ಜೀವನ ನಡೆಸಿದ ಅವರು ತಮ್ಮ ಮಠಕ್ಕೆ ಆಗಮಿಸಿದ್ದಾಗ, ಭಗವದ್ಗೀತೆ ಬಗ್ಗೆ ತಮಗಿರುವ ಗೌರವವನ್ನು ವ್ಯಕ್ತಪಡಿಸಿದ್ದರು. ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ಅವರ ಆತ್ಮಕ್ಕೆ ಸದ್ಗತಿ ಕೊಡಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.