ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಾಮಾನ್ಯ ವ್ಯಕ್ತಿಯೂ ಕಾರು ಹೊಂದಿರಬೇಕೆಂಬ ಕನಸು ಹೊತ್ತು ಒಂದು ಲಕ್ಷಕ್ಕೆ ಕಾರು ತಯಾರಿಸಿದ ರತನ್ ಟಾಟಾ ದೂರದೃಷ್ಟಿಯುಳ್ಳ ಉದ್ಯಮಿ, ಲೋಕೋಪಕಾರಿ ರತನ್ ಟಾಟಾರವರು ದೇಶದ ಯುವಕರಿಗೆ ಆದರ್ಶ ನಾಯಕನಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ತಿಳಿಸಿದರು.ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಖ್ಯಾತ ಉದ್ಯಮಿ ರತನ್ ಟಾಟರವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ,
ಕೊರೋನಾ ವೇಳೆ ನೆರವುರತನ್ ಟಾಟರವರಲ್ಲಿದ್ದ ಸರಳ ಸಾಮಾನ್ಯ ವ್ಯಕ್ತಿತ್ವವೇ ಅವರನ್ನು ಅಷ್ಟೊಂದು ದೊಡ್ಡ ಉದ್ಯಮಿಯಾಗಿಸಿತು. ದೇಶದ ಸಣ್ಣ ಪುಟ್ಟ ಉದ್ಯಮಿಗಳಿಗೆ ಅವರೆ ರೋಲ್ ಮಾಡಲ್ ಆಗಿದ್ದಾರೆ. ಅವರು ಕೊರೋನಾ ಮಹಾಮ್ಮಾರಿ ದೇಶವನ್ನು ಆವರಿಸಿದ ಸಂದರ್ಭದಲ್ಲಿ ಲಕ್ಷಾಂತರ ಕೊಟ್ಯತರ ಜನರಿಗೆ ಊಟ, ಸ್ಯಾನಿಟೈಸರ್ ಮೆಡಿಸಿನ್ ನೀಡಿದ ಮಹಾನ್ ವ್ಯಕ್ತಿ ಟಾಟಾ ಎಂದರು.
ದಾನಕ್ಕೆ ಹೆಸರಾದ ಟಾಟಾರತನ್ ಟಾಟಾ ಅವರು ಕೈಗಾರಿಕೋದ್ಯಮ, ವ್ಯಾಪಾರ ಸಾಮ್ರಾಜ್ಯದಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ಗಳಿಸಿದ್ದವರು. ವ್ಯಾಪಾರದಲ್ಲಿ ಮಾತ್ರವಲ್ಲದೆ ಸಮಾಜ ಸೇವೆ, ಪರೋಪಕಾರಿಯಲ್ಲೂ ರತನ್ ಟಾಟಾ ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ದಾನ ಧರ್ಮ ಉದಾರಗಳ ರತನ್ ಟಾಟಾ ನಿಜಕ್ಕೂ ಉದಾತ್ತ ವ್ಯಕ್ತಿಯಾಗಿದ್ದರು. ಸರಳ ವ್ಯಕ್ತಿತ್ವ ಹೊಂದಿದ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದರು. ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ಜಿ.ಪಂ. ಮಾಜಿ ಸದಸ್ಯ ಕೆ.ಸಿ. ರಾಜಾಕಾಂತ್, ಕಸಾಪದ ಕೆ.ಎಂ ರೆಡ್ಡಪ್ಪ,ಸರ್ದಾರ್ ಚಾಂದ್ ಪಾಶ,ಅಣ್ಣೆಮ್ಮ,ಚಿಕ್ಕರೆಡ್ಡಪ್ಪ, ಚಂದ್ರಶೇಖರ್ ಇದ್ದರು