ಅನ್ನಪೂರ್ಣೇಶ್ವರಿ ಇದ್ದಲ್ಲಿ ಅನ್ನದ ಕೊರತೆ ಇಲ್ಲ: ಶಾಸಕ ಸಿದ್ದು ಸವದಿ

| Published : Oct 13 2024, 01:04 AM IST

ಅನ್ನಪೂರ್ಣೇಶ್ವರಿ ಇದ್ದಲ್ಲಿ ಅನ್ನದ ಕೊರತೆ ಇಲ್ಲ: ಶಾಸಕ ಸಿದ್ದು ಸವದಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪ್ರತಿ ವರ್ಷ ವಿಜಯದಶಮಿ ಎಂದು ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾದರು

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿ ಬದುಕಲು ಆಹಾರ ಮುಖ್ಯ. ಎಲ್ಲಾ ಜೀವ ರಾಶಿಗಳಿಗೆ ಆಹಾರದ ಕೊರತೆಯುಂಟಾದಾಗ ಸಾಕ್ಷಾತ್‌ ಪಾರ್ವತಿಯೇ ಅನ್ನಪೂರ್ಣೇಶ್ವರಿ ರೂಪದಲ್ಲಿ ಅವತರಿಸಿ ಆಹಾರ ಕೊರತೆಯಾಗದಂತೆ ಕಾಪಾಡುತ್ತಾಳೆ ಎಂದು ತೇರದಾಳ ಮತಕ್ಷೇತ್ರ ಶಾಸಕ ಸಿದ್ದು ಸವದಿ ಹೇಳಿದರು.

ಅವರು ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಅನ್ನಪೂರ್ಣೇಶ್ವರಿ ದೇವಿ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಅತೀ ಹಳೆಯ ದೇವಸ್ಥಾನ ಹೊರನಾಡು ಬಿಟ್ಟರೆ, ಎರಡನೇ ದೇವಸ್ಥಾನ ಇಲ್ಲಿನ ಅನ್ನಪೂರ್ಣೇಶ್ವರಿ ದೇವಿದಾಗಿದೆ. ತಾಯಿ ಇರುವುದರಿಂದಲೇ ಈ ಭಾಗದ ಜನರಿಗೆ ಅನ್ನದ ಕೊರತೆಯಾಗದಂತೆ ಕಾಪಾಡುತ್ತಾಳೆ. ದೇವಿಯನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ ಅಂಥವರಿಗೆ ಕಷ್ಟಗಳಿಂದ ಪಾರು ಮಾಡುತ್ತಾಳೆ ಎಂದರು.

ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ ಮಾತನಾಡಿ, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪ್ರತಿ ವರ್ಷ ವಿಜಯದಶಮಿ ಎಂದು ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾದರು. ಭಾರತದಲ್ಲಿ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ನೆಲೆಸಿರುವ ಅನ್ನಪೂರ್ಣೇಶ್ವರಿ, ಕರ್ನಾಟಕದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ಬಿಟ್ಟರೆ ಇರುವ ಅತೀ ಹಳೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಇರುವುದು ಮಹಾಲಿಂಗಪುರದ ಪುಣ್ಯ ಮತ್ತು ಹೆಮ್ಮೆಯಾಗಿದ್ದು, 1872ರಲ್ಲಿ ನಿರ್ಮಿಸಿದ ದೇಶದ ಮೂರನೇ, ರಾಜ್ಯದ ಎರಡನೇ ದೇವಸ್ಥಾನವಾಗಿದೆ ಎಂದು ಹೇಳಿದರು.

ಅಭಿವೃದ್ಧಿಗೆ ನೆರವು:

ಸ್ಥಳೀಯರ ಬೇಡಿಕೆಗೆ ಸ್ಪಂದಿಸಿದ ಶಾಸಕ ಸಿದ್ದು ಸವದಿ, ಅನ್ನಪೂರ್ಣೇಶ್ವರಿ ದೇವಸ್ಥಾನ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯರು ಸಹಕರಿಸುತ್ತಿದ್ದು, ಇನ್ನು ಹೆಚ್ಚಿನ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.

ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ದೇವಿಗೆ ಪೂಜೆ ಸಲ್ಲಿಸಿ ಉಡಿ ತುಂಬುವ ಕಾರ್ಯಕ್ಕೆ ಹಾಗೂ ಅನ್ನ ಪ್ರಸಾದಕ್ಕೆ ಚಾಲನೆ ಕೊಟ್ಟರು.

ಹೋಳಿಗೆ ಊಟಕ್ಕೆ ಮನಸೋತ ಜನ:

ಈ ಬಾರಿ ಜಾತ್ರೆಯಲ್ಲಿ ಅಂದಾಜು 150 ಕೆಜಿ ಕಡಲೆ ಬೆಳೆ, 180 ಕೆಜಿ ಬೆಲ್ಲ 300 ಕೆಜಿ ಅಕ್ಕಿ, 35 ಕೆಜಿ ತೊಗರಿ ಬೆಳೆ, 25 ಕೆಜಿ ತುಪ್ಪ ಬಳಸಲಾಗಿದೆ. ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕೌಂಟರ್‌ ತೆರೆದು ಪ್ರಸಾದ ಪೂರೈಸಿದ್ದು ಮೆಚ್ಚುಗೆ ಗಳಿಸಿತು. ಈ ಬಾರಿ ನಿರೀಕ್ಷೆ ಮೀರಿ ಜನ ಆಗಮಿಸಿತ್ತು, ಸುಮಾರು ಎಂಟು ಸಾವಿರದಿಂದ ಹತ್ತು ಸಾವಿರ ಜನ ಭಾಗವಹಿಸಿ ದೇವಿ ಆಶೀರ್ವಾದ ಪಡೆದರು.

ಪುರಸಭೆ ಉಪಾಧ್ಯಕ್ಷರಾದ ಶೀಲಾ.ರಾ.ಭಾವಿಕಟ್ಟಿ, ಸದಸ್ಯರಾದ ಶೇಖರ ಅಂಗಡಿ, ರವಿ ಜವಳಗಿ, ಚನ್ನಬಸು ಯರಗಟ್ಟಿ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಮುಖಂಡರಾದ ಈರಪ್ಪ ದಿನ್ನಿಮನಿ, ಶಂಕರಗೌಡ ಪಾಟೀಲ್, ಶಿವಾನಂದ ಅಂಗಡಿ, ಶಿವಲಿಂಗ, ಜಿ.ಎಸ್.ಗೊಂಬಿ, ಶಂಭು ಬಡಿಗೇರ, ರವಿ ಬಿದರಿ, ವಿಷ್ಣುಗೌಡ ಪಾಟೀಲ, ಮಹಾಲಿಂಗ ತಟ್ಟಿಮನಿ, ಮಹಾದೇವ ಪುಕಾಳೆ, ಲಕ್ಕಪ್ಪ ಚಮಕೇರಿ, ಚಂದ್ರಶೇಖರ ನಿಂಬರಗಿ, ಮನೋಹರ್ ಶಿರೋಳ, ಶಿವಬಸು ಗೌಂಡಿ, ರಾಜೇಶ ಭಾವಿಕಟ್ಟಿ, ಪ್ರಭು ಬೆಳಗಲಿ, ರಮೇಶ್ ಭಾವಿಕಟ್ಟಿ, ರಮೇಶ ಹುಣಶ್ಯಾಳ, ಸುರೇಶ ಶೆಟ್ಟಿ, ಚನ್ನಪ್ಪ ಪಟ್ಟಣಶೆಟ್ಟಿ, ಚನ್ನಬಸು ಹುರಕಡ್ಲಿ, ಹಣಮಂತ ನಾವಿ, ಈರಪ್ಪ ಪಕೀರಪುರ, ಜಮೀರ ಯಕ್ಸಂಬಿ, ಶಿವಾನಂದ ಹುಣಶ್ಯಾಳ, ವಿಜಯ ಕುಳ್ಳೊಳ್ಳಿ, ಭಗವಂತ ವಡ್ಡರ ಚೇತನ ಹುನಶ್ಯಾಳ ವಿಜಯ ಸಬಕಾಳೆ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ವೇಳೆ ಗಣ್ಯರನ್ನು ಸನ್ಮಾನಿಸಲಾಯಿತು.