ಸಾರಾಂಶ
The Thinker Shashidhar is a role model for the youth: Srishaila
-ಅಹಿಂದ ವರ್ಗದ ಮುಖಂಡ ಟಿ. ಶಶಿಧರ್ 4ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮ
-----ಕನ್ನಡಪ್ರಭ ವಾರ್ತೆ ಶಹಾಪುರ
ಚಿಂತಕ ಹಾಗೂ ಸಾಮಾಜಿಕ ಕಳಕಳಿಯ ದಿ. ಟಿ. ಶಶಿಧರ್ ಅವರು ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವ-ಸಿದ್ಧಾಂತ, ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದು ಯುವಕರಿಗೆ ಮಾದರಿಯಾಗಿದ್ದರು ಎಂದು ಯುವ ಬರಹಗಾರ ಶ್ರೀಶೈಲ್ ಹೊಸಮನಿ ನಾಗನಟಗಿ ಹೇಳಿದರು.ವೈಚಾರಿಕ ಚಿಂತಕರು ಹಾಗೂ ಅಹಿಂದ ವರ್ಗದ ಮುಖಂಡರಾದ ದಿ. ಟಿ. ಶಶಿಧರ್ ಅವರ 4ನೇ ವರ್ಷದ ಪುಣ್ಯರಾಧನೆ ಪ್ರಯುಕ್ತ ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಳಮಟ್ಟದ ಸಮುದಾಯದ ಪರವಾಗಿ ಹಲವಾರು ಹೋರಾಟ ಹಮ್ಮಿಕೊಳ್ಳುವ ಮೂಲಕ ಹೋರಾಟದ ಕಿಚ್ಚುಹಚ್ಚಿ ದೀನದಲಿತರ, ಬಡವರ ಏಳಿಗೆಗೆ ಶ್ರಮಿಸಿದ ಮಹಾನ್ ಹೋರಾಟಗಾರ ಅವರು ಯುವಕರಿಗೆ ಮಾದರಿಯಾಗಿದ್ದಾರೆ. ತಮ್ಮ ಸಿದ್ಧಾಂತದಲ್ಲಿ ಎಂದಿಗೂ ರಾಜೀ ಮಾಡಿಕೊಳ್ಳದ ಗಟ್ಟಿ ಧ್ವನಿಯಾಗಿದ್ದರು ಎಂದು ಹೇಳಿದರು.ಟಿ. ಶಶಿಧರ್ ಬೋಧಿಮಂಡಲ ಕಲಾ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಂಗನಾಥ ಬಾಗ್ಲಿ, ಯುವ ಮುಖಂಡರಾದ ಶಿಕ್ಷಕ ಮರೆಪ್ಪ ಇನಾಮದಾರ, ವೀರೇಶ ಕೊಂಕಲ್, ಮಾನಪ್ಪ ಜೇಗ್ರಿ, ಮಲ್ಲು ಆರಬೋಳ, ವಿಶ್ವ ನಾಟೇಕಾರ್, ಸಂತೋಷ್ ಮೇತ್ರೆ, ದಿನೇಶ್ ಇದ್ದರು. ಮಲ್ಲಿಕಾರ್ಜುನ ಶಹಾಪುರ ನಿರೂಪಿಸಿ, ವಂದಿಸಿದರು.
-----ಫೋಟೋ: 12ವೈಡಿಆರ್3:
ವಡಗೇರಾ ತಾಲೂಕಿನ ರಸ್ತಾಪುರ ಗ್ರಾಮದ ವೈಚಾರಿಕ ಚಿಂತಕರು ಹಾಗೂ ಅಹಿಂದ ವರ್ಗದ ಮುಖಂಡರಾದ ದಿ. ಟಿ. ಶಶಿಧರ್ ಅವರ 4ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮ ಜರುಗಿತು.