ಸಾರಾಂಶ
ಶೃಂಗೇರಿ: ಪುರಾಣಗಳಲ್ಲಿ ಉಲ್ಲೇಖಿಸಿರುವ ರಥಸಪ್ತಮಿ ಹಿಂದೂಗಳ ಪಾಲಿಗೆ ಶ್ರೇಷ್ಠ ಧಾರ್ಮಿಕ ಆಚರಣೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ನಾಗೇಶ್ ಕಾಮತ್ ಹೇಳಿದರು.ಶ್ರೀಮಠದ ಆವರಣದಲ್ಲಿ ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ಆಯೋಜಿಸಿದ್ದ ರಥಸಪ್ತಮಿ ದಿನಾಚರಣೆಯಲ್ಲಿ ಮಾತನಾಡಿದರು. ಚೈತ್ರಮಾಸದ ಶುಕ್ಲಪಕ್ಷದ ಭಾನುವಾರದಿನದಂದು ಈ ಬ್ರಹ್ಮಾಂಡ ಉಗಮವಾಯಿತು. ಆ ಸೃಷ್ಠಿ ಆದಿಯಲ್ಲಿ ಉಗಮವಾದ ಸೂರ್ಯನು ಆದಿದೇವ ಎಂದು ಕರೆಯಿಸಲ್ಪಟ್ಟ ಏಳು ಬಣ್ಣಗಳ ಕಿರಣಗಳನ್ನು ಜಗತ್ತಿಗೆ ಹೊರ ಸೂಸುತ್ತಾ ಏಕಚಕ್ರರಥದಲ್ಲಿ ಸದಾ ಸಂಚರಿಸುವ ಭಗವಾನ್ ಸೂರ್ಯಜನ್ಮ ತಳೆದ ದಿನ ರಥಸಪ್ತಮಿ ಎಂದು ಕರೆಯಲ್ಪಟ್ಟಿದೆ.ವೇದಪುರಾಣಗಳಲ್ಲಿಯೂ ಉಲ್ಲೇಖಿಸಿರುವ ಈ ದಿನ ಹಿಂದೂಗಳ ಪಾಲಿಗೆ ಪವಿತ್ರವಾದ ದಿನ. ಸಕಲ ಜೀವಿಗಳ ಜೀವನಾಧಾರವಾದ ಸೂರ್ಯ ರೋಗನಿವಾರಕನು ಆಗಿದ್ದಾನೆ. ತನ್ನ ಗುಣಲಕ್ಷಣಗಳಿಗೆ ಅನುಸಾರವಾಗಿ ಆದಿತ್ಯ ದಿನಕರ ದಿವಾಕರ, ಭಾನು, ರವಿ, ಪ್ರಭಾಕರ, ರಶ್ಮಿ, ಮಾತೆ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ನಾರಾಯಣ ಅಂಶಜನಾದ ಸೂರ್ಯ ಕಣ್ಣಿಗೆ ಕಾಣುವ ದೇವರು ಎಂದರು.ಈ ಸಂದರ್ಭದಲ್ಲಿ ಪುಪ್ಷಾ ಹೆಗ್ಡೆ, ಪದ್ಮಸುಬ್ರಮಣ್ಯ, ಸುಬ್ರಮಣ್ಯ ಹುಲಿಮನೆ, ಡಾ.ದಯಾನಂದ, ರವಿ, ಗುರುರಾಜ್, ಮಲ್ಲಿಕಾ, ಗಾಯಿತ್ರಿ ಮತ್ತಿತರರು ಇದ್ದರು.16 ಶ್ರೀ ಚಿತ್ರ 1ಃ
ಶ್ರೀಮಠದ ಆವರಣದಲ್ಲಿ ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ಆಯೋಜಿಸಿದ್ದ ರಥಸಪ್ತಮಿ ದಿನಾಚರಣೆಯಲ್ಲಿ 108 ಸೂರ್ಯ ನಮಸ್ಕಾರ ನಡೆಯಿತು. ಯೋಗ ಶಿಕ್ಷಣ ಸಮಿತಿ ಸಂಚಾಲಕ ನಾಗೇಶ್ ಕಾಮತ್ ಪುಪ್ಷಾ ಹೆಗ್ಡೆ, ಪದ್ಮಸುಬ್ರಮಣ್ಯ, ಸುಬ್ರಮಣ್ಯ ಹುಲಿಮನೆ, ಡಾ.ದಯಾನಂದ, ರವಿ, ಗುರುರಾಜ್, ಮಲ್ಲಿಕಾ, ಗಾಯಿತ್ರಿ ಮತ್ತಿತರರು ಇದ್ದರು.