ಗಂಗಾ ಕೋ ಆಪ್ ಸೊಸೈಟಿಗೆ ಅಧ್ಯಕ್ಷರಾಗಿ ರತ್ನಾಕರ ಆಯ್ಕೆ

| Published : May 16 2025, 02:01 AM IST

ಗಂಗಾ ಕೋ ಆಪ್ ಸೊಸೈಟಿಗೆ ಅಧ್ಯಕ್ಷರಾಗಿ ರತ್ನಾಕರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾ ಕೋ- ಆಪ್ ಸೊಸೈಟಿ ನೂತನ ಅಧ್ಯಕ್ಷ ರಾಗಿ ರತ್ನಾಕರ ಕುಂದಾಪುರ ಅವರು ಆಯ್ಕೆಯಾದರು.

ರಾಣಿಬೆನ್ನೂರು: ನಮ್ಮ ಸೊಸೈಟಿ ಪ್ರಾರಂಭವಾಗಿ 25 ವರ್ಷಗಳಾಗಿದ್ದು, ಇದೀಗ ₹50 ಕೋಟಿ ವಾರ್ಷಿಕ ವಹಿವಾಟು ಮಾಡುತ್ತಿದೆ ಎಂದು ನಗರದ ಗಂಗಾ ಕೋ- ಆಪ್ ಸೊಸೈಟಿ ನೂತನ ಅಧ್ಯಕ್ಷ ರತ್ನಾಕರ ಕುಂದಾಪುರ ತಿಳಿಸಿದರು.

ನಗರದಲ್ಲಿ ಗುರುವಾರ ಗಂಗಾ ಕೋ- ಆಪ್ ಸೊಸೈಟಿ ಆಡಳಿತ ಮಂಡಳಿಗೆ ನಡೆದ ಚುನಾವಣೆ ನಂತರ ಮಾತನಾಡಿದರು. ನಮ್ಮಲ್ಲಿ ಎಲ್ಲ ಸಮಾಜದ ಜನರು ವ್ಯವಹಾರ ವಹಿವಾಟು ಮಾಡಿದ್ದಾರೆ. ನಮ್ಮ ಸೊಸೈಟಿ ಮೂಲಕ ಕೋವಿಡ್ ಸಮಯದಲ್ಲಿ ಆಕ್ಸಿಜನ್ ಸಿಲಿಂಡರ್ ಪೂರೈಕೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರದಂಥ ವಿವಿಧ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ನಮ್ಮ ಕಾರ್ಯವೈಖರಿಯಿಂದ ಸೊಸೈಟಿಗೆ ಅನೇಕ ಪ್ರಶಸ್ತಿಗಳು ಬಂದಿವೆ ಎಂದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೊಸೈಟಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಸೊಸೈಟಿ ಉಪಾಧ್ಯಕ್ಷರಾಗಿ ರಾಜೇಂದ್ರ ಅಂಬಿಗೇರ ಹಾಗೂ ಸದಸ್ಯರಾಗಿ ಲಕ್ಷ್ಮಣ ದಾಸರ, ಲಕ್ಷ್ಮಣ ಸುಣಗಾರ, ಪ್ರಕಾಶ ಬಾರ್ಕಿ, ಸುರೇಶ ಜಡಮಲಿ, ರತ್ಮಮ್ಮ ಭೋವಿ, ರೇಣುಕಾ ಅಬ್ಬಿಗೇರ, ರಾಮಪ್ಪ ಲಮಾಣಿ, ಶಿವಲಿಂಗಪ್ಪ ಮೇದಾರ, ಶಿವನಗೌಡ ಗ್ಯಾನಗೌಡ್ರ, ಕೃಷ್ಣಮೂರ್ತಿ ಸುಣಗಾರ ಅವಿರೋಧವಾಗಿ ಆಯ್ಕೆಯಾದರು.

ಸಹಕಾರ ಇಲಾಖೆಯ ಸುಧಾ ಕುಲಕರ್ಣಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಕೊಟ್ರೇಶಪ್ಪ ಎಮ್ಮಿ, ರಾಜು ಅಡಿವೆಪ್ಪನವರ, ಪ್ರಕಾಶ ಜೈನ್, ಕರಬಸಪ್ಪ ಮಾಕನೂರ, ಪ್ರಕಾಶ ಮಾಳಗಿ, ರತ್ನಾ ಪುನೀತ್, ಸೊಸೈಟಿ ವ್ಯವಸ್ಥಾಪಕಿ ಅನ್ನಪೂರ್ಣ ಬಾರ್ಕಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಅಂಗನವಾಡಿ ಕಾರ್ಯಕರ್ತೆಯರ ಹಣ ದುರುಪಯೋಗ: ಆರೋಪ

ಹಾವೇರಿ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹಣವನ್ನು ದೇವಾನಾಂ ಪ್ರಿಯದರ್ಶಿ ಅಶೋಕ ಚಕ್ರವರ್ತಿ ಟ್ರಸ್ಟ್‌ನಲ್ಲಿ ತೊಡಗಿಸಿ ಎಐಟಿಯುಸಿ ರಾಜ್ಯ ನಾಯಕರು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಕುರಿತು ದಾಖಲೆಗಳ ಸಹಿತ ಬಹಿರಂಗ ಚರ್ಚೆಗೆ ಸಿದ್ಧವಾಗಿದ್ದೇನೆ ಎಂದು ಕಾರ್ಮಿಕ ಮುಖಂಡ ಹೊನ್ನಪ್ಪ ಮರೆಮ್ಮನವರ ಎಐಟಿಯುಸಿ ಸಂಘಟನೆಗೆ ಸವಾಲು ಹಾಕಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಬಿಸಿಯೂಟದ ಸಿಬ್ಬಂದಿ ಹಾಗೂ ಕಟ್ಟಡ ಕಾರ್ಮಿಕರ ಸಮಸ್ಯೆಗಳ ನಿವಾರಣೆಯ ಉದ್ದೇಶದಿಂದ ಆರಂಭಗೊಂಡ ಎಐಟಿಯುಸಿ ಸಂಘಟನೆಯಲ್ಲಿ ಕಳೆದ 35 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. 2024ರ ಜ. 21ರಂದು ಜಿಲ್ಲಾಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಸಮಾಲೋಚನೆ ಸಭೆ ನಡೆದಿದ್ದು, ಅದರಲ್ಲಿ ರಾಜ್ಯ ನಾಯಕರಾದ ವಿಜಯಭಾಸ್ಕರ್, ಎಂ. ಜಯಮ್ಮ ಮತ್ತು ಅಮ್ಜದ್ ಆಗಮಿಸಿದ್ದರು. ಈ ವೇಳೆ ಜಿಲ್ಲೆಯ ಲೆಕ್ಕಪತ್ರ ಪರಿಶೀಲಿಸಿ ಸಂಘಟನೆಗೆ ₹4 ಲಕ್ಷಗಳನ್ನು ಹೆಚ್ಚುವರಿಯಾಗಿ ಹೊನ್ನಪ್ಪ ಅವರು ವೆಚ್ಚ ಮಾಡಿದ್ದು, ಎಐಟಿಯುಸಿಯಿಂದ ಭರಿಸುವ ಭರವಸೆ ನೀಡಿದ್ದರು ಎಂದು ಮಾಹಿತಿ ನೀಡಿದರು.2024ರಲ್ಲಿ ನನ್ನ ಬಗ್ಗೆ ಭರವಸೆಯ ಮಾತನ್ನಾಡಿದ್ದ ರಾಜ್ಯ ನಾಯಕರು ಈಗ ಏಕಾಏಕಿ ನನ್ನನ್ನು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಿಂದ ಉಚ್ಚಾಟಿಸಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ನನ್ನ ಉಚ್ಚಾಟನೆಗೆ ಲೆಕ್ಕಪತ್ರಗಳು ಕಾರಣವಲ್ಲ, ಬದಲಿಗೆ ಇತ್ತೀಚಿನ ದಿನಗಳಲ್ಲಿ ಈ ಸಂಘಟನೆಯ ರಾಜ್ಯ ನಾಯಕರು ಮೂಲ ಧ್ಯೇಯಗಳನ್ನೇ ಮರೆತು ವ್ಯಾಪಾರಿ ಮನೋಭಾವಕ್ಕೆ ಈಡಾಗಿದ್ದಾರೆ. ಇದೇ ಉದ್ದೇಶದಿಂದ ದೇವಾನಾಂ ಪ್ರಿಯದರ್ಶಿ ಅಶೋಕ ಚಕ್ರವರ್ತಿ ಟ್ರಸ್ಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ಹೆಚ್ಚಿನ ವೇತನದ ಆಸೆ ತೋರಿಸಿ ರಾಜ್ಯಾದ್ಯಂತ ಸುಮಾರು ₹5 ಕೋಟಿ ಹಣವನ್ನು ಸಂಗ್ರಹಿಸಿದ್ದಾರೆ. ಇದನ್ನು ನಾನು ಸೇರಿದಂತೆ ಕೆಲವರು ವಿರೋಧಿಸಿದ್ದರಿಂದ ನಮ್ಮನ್ನು ಸಂಘಟನೆಯಿಂದಲೇ ಹೊರಹಾಕಿದ್ದಾರೆ ಎಂದರು.ವಿನಾಯಕ ಕುರುಬರ, ಬಸವರಾಜ ಶೀಲವಂತರ, ವಾಸು ಆವರಗೆರೆ, ವಿಶಾಲಾಕ್ಷಮ್ಮ, ಶಾರದಮ್ಮ, ಕಾಳಮ್ಮ ಸಿ.ಬಿ., ರೇಖಮ್ಮ ಧನ್ನೂರ, ಮಂಜುಳಾ ಕಳಸೂರ, ಮಹಾದೇವಕ್ಕ ಹಿರೇಮಠ, ಜಿ.ಡಿ. ಪೂಜಾರ ಇತರರು ಇದ್ದರು.