ಕರ್ಮ ಮತ್ತು ಧ್ಯಾನದ ನಡುವಣ ಮಹಾಕವಿ ರತ್ನಾಕರವರ್ಣಿಯ ಲೌಕಿಕ ಮತ್ತು ಅಲೌಕಿಕ ವಿಚಾರಧಾರೆ, ಆತ್ಮಸಂಯಮದ ಬಗ್ಗೆ ರತ್ನಾಕರರ ಅನಿಸಿಕೆ ಹಾಗೂ ನಡತೆಯ ಮೂಲಕ ಜೀವನ ಮೌಲ್ಯಗಳ ಉತ್ಕೃಷ್ಟತೆಯ ಕುರಿತಾಗಿ ಮಹಾಕವಿಗೆ ಇದ್ದ ಸ್ಪಷ್ಟ ನಿಲುವಿನ ಬಗ್ಗೆ ಹಾಗೂ ಭರತೇಶ ವೈಭವ ಸಂಗ್ರಹದ ಮುನ್ನುಡಿಯಲ್ಲಿ ಕುವೆಂಪು ಅವರು ಭರತೇಶ ವೈಭವದಂಥ ಕಾವ್ಯ ಬೇರೊಂದು ಇಲ್ಲ ಎಂದು ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ಟಿ.ಎನ್. ಖಂಡಿಗೆ ನುಡಿದರು.
ಮೂಡುಬಿದಿರೆ: ಕರ್ಮ ಮತ್ತು ಧ್ಯಾನದ ನಡುವಣ ಮಹಾಕವಿ ರತ್ನಾಕರವರ್ಣಿಯ ಲೌಕಿಕ ಮತ್ತು ಅಲೌಕಿಕ ವಿಚಾರಧಾರೆ, ಆತ್ಮಸಂಯಮದ ಬಗ್ಗೆ ರತ್ನಾಕರರ ಅನಿಸಿಕೆ ಹಾಗೂ ನಡತೆಯ ಮೂಲಕ ಜೀವನ ಮೌಲ್ಯಗಳ ಉತ್ಕೃಷ್ಟತೆಯ ಕುರಿತಾಗಿ ಮಹಾಕವಿಗೆ ಇದ್ದ ಸ್ಪಷ್ಟ ನಿಲುವಿನ ಬಗ್ಗೆ ಹಾಗೂ ಭರತೇಶ ವೈಭವ ಸಂಗ್ರಹದ ಮುನ್ನುಡಿಯಲ್ಲಿ ಕುವೆಂಪು ಅವರು ‘ಭರತೇಶ ವೈಭವದಂಥ ಕಾವ್ಯ ಬೇರೊಂದು ಇಲ್ಲ’. ಮೂಡುಬಿದಿರೆಯ ಚಾರಿತ್ರಿಕ ಸಂಪತ್ತಿಗೆ ಇನ್ನೊಂದು ಸಾಹಿತ್ಯಕ ಸಂಪತ್ತು ರತ್ತಾಕರ ವರ್ಣಿ ಎಂದು ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ಟಿ.ಎನ್.ಖಂಡಿಗೆ ನುಡಿದರು.
ಅವರು ಕನ್ನಡ ಭವನದದ ‘ಮಹಾಕವಿ ರತ್ನಾಕರ ವರ್ಣಿ’ ಸಭಾಂಗಣದಲ್ಲಿ ಮೂಡುಬಿದಿರೆ ಮಹೇಂದ್ರ ಕುಮಾರ್ ಜೈನ್ ಅಧ್ಯಕ್ಷತೆಯಲ್ಲಿ ಜರಗಿದ ಜೈನ್ ಮಿಲನ್‌ನ ಮಾಸಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.ಮೂಡುಬಿದಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ನಡೆಸಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಸದಸ್ಯರು ಪ್ರಯೋಜನ ಪಡೆದರು. ವೈದ್ಯಾಧಿಕಾರಿ ಡಾ.ಅಕ್ಷತಾ ನಾಯಕ್ ಗೌರವಿಸಲಾಯಿತು. ಶ್ರೀಪಾಲ್ ಎಸ್ ಇವರು ಜೈನ್‌ಪೇಟೆಯ ರತ್ನಾಕರವರ್ಣಿ ಸ್ಕೃತಿಮಂಟಪ ನಿರ್ವಹಣೆಗಾಗಿ ಒಂದು ಲಕ್ಷದ ರು. ಮೊತ್ತವನ್ನು ನಿರಖ ಠೇವಣಿಯಾಗಿ ಇರಿಸಿದ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಶಶಿಕಾಂತ್ ಎಳನೀರು ವರದಿ ವಾಚಿಸಿದರು. ಕೋಶಾಧಿಕಾರಿ ಶ್ರೇಯಾಂಸ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು. ಭಾರತೀಯ ಜೈನ್ ಮಿಲನ್ ವಲಯ 8 ರ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಆಯೋಜಿಸಬೇಕು ಎಂದು ತಿಳಿಸಿದರು. ವಲಯ ನಿರ್ದೇಶಕ ಜಯರಾಜ ಕಂಬಳಿ, ಶ್ವೇತಾ ಜೈನ್ ಉಪಸ್ಥಿತರಿದ್ದರು.ಎಂ ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಅನಂತವೀರ ಜೈನ್ ವಂದಿಸಿದರು. ಚೇತನಾ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.