ಕಟೀಲು ಕ್ಷೇತ್ರದ ರಥಬೀದಿಯಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 7ನೇ ಮೇಳದ ಉದ್ಘಾಟನೆ ಮತ್ತು ಈ ವರ್ಷದ ತಿರುಗಾಟದ ಆರಂಭೋತ್ಸವ ಸಂದರ್ಭ ‘ಪ್ರಸಂಗ ವಾಚಿಕ’ ಹಾಗೂ ‘ರಂಗನಡೆಗೊoದು ಕೈಪಿಡಿ’ ಕೃತಿ ಬಿಡುಗಡೆಗೊಂಡಿತು.

ಯಕ್ಷಗಾನ ಕೃತಿಗಳು ಕಲಾ ಲೋಕಕ್ಕೆ ದೊಡ್ಡ ಕೊಡುಗೆ: ಡಾ.ತಲ್ಲೂರು

ಉಡುಪಿ: ಯಕ್ಷಗಾನ ಹಾಸ್ಯಗಾರ ರವಿಶಂಕರ ವಳಕ್ಕುಂಜ ಅವರು ಯಕ್ಷಗಾನದ ಬಗ್ಗೆ 7 ಕೃತಿಗಳನ್ನು ಬರೆದು ಬಿಡುಗಡೆ ಮಾಡಿರುವುದು ಓರ್ವ ಕಲಾವಿದನಾಗಿ ಯಕ್ಷಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.

ಕಟೀಲು ಕ್ಷೇತ್ರದ ರಥಬೀದಿಯಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 7ನೇ ಮೇಳದ ಉದ್ಘಾಟನೆ ಮತ್ತು ಈ ವರ್ಷದ ತಿರುಗಾಟದ ಆರಂಭೋತ್ಸವಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರವಿಶಂಕರ ವಳಕ್ಕುಂಜ ಅವರು ಬರೆದ ‘ಪ್ರಸಂಗ ವಾಚಿಕ’ ಹಾಗೂ ‘ರಂಗನಡೆಗೊoದು ಕೈಪಿಡಿ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಯಕ್ಷಗಾನ ಕ್ಷೇತ್ರ ಕಲಾವಿದ ಮತ್ತು ವಿದ್ವಾಂಸರ ಪ್ರತಿಭೆಗಳ ಸಂಗಮ ಎಂಬುದಕ್ಕೆ ಹಾಸ್ಯಗಾರ ರವಿಶಂಕರ ವಳಕ್ಕುಂಜ ಅವರೇ ಸಾಕ್ಷಿ. ಯಕ್ಷಗಾನ ಕ್ಷೇತ್ರದಲ್ಲಿ ಎಂತೆಂತಹ ಸಾಹಿತಿಗಳು, ವಿದ್ವಾಂಸರು ಇರುವುದನ್ನು ನಾವು ಕಾಣುತ್ತಿದ್ದೇವೆ. ಈ ರಂಗದ ಶಕ್ತಿ. ಕಲಾರಾಧನೆ ಎಂದರೆ ಅದು ದೇವರ ಸೇವೆ ಎಂದ ಅವರು, ಕಟೀಲು ದೇವಿಯ ಸನ್ನಿಧಾನದಲ್ಲಿ ಇದೀಗ 7ನೇ ಮೇಳದ ಉದ್ಘಾಟನೆ ನಡೆದಿರುವುದು ಯಕ್ಷಗಾನ ಕ್ಷೇತ್ರಕ್ಕೆ ಭವ್ಯ ಭವಿಷ್ಯವಿದೆ ಎಂಬುದನ್ನು ಸಾರುತ್ತದೆ ಎಂದರು.ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ದುರ್ಗಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರು ಪ್ರಶಸ್ತಿ ಸ್ವೀಕರಿಸಿದರು.

ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವ ರಮಾನಾಥ ರೈ, ಹೈಕೋರ್ಟ್ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ್, ಕ್ಷೇತ್ರದ ವೇದವ್ಯಾಸ ತಂತ್ರಿ, ಎಂಜಿನಿಯರ್ ನಾಗೇಂದ್ರ ಪಿ., ಕ್ಷೇತ್ರದ ಆನುವಂಶಿಕ ಮೊತ್ತೇಸರ ಅರ್ಚಕ ವೇ.ಮೂ.ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮಿನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.ಆನುವಂಶಿಕ ಆರ್ಚಕ ಶ್ರೀಹರಿ ನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ, ವಾದಿರಾಜ ಕಲ್ಲೂರಾಯ, ಪದ್ಮನಾಭ ಮರಾಠೆ ನಿರೂಪಿಸಿದರು.