ಬಗರ್‌ಹುಕುಂ ಸಮಿತಿಗೆ ರವಿಚಂದ್ರ ಅಯ್ಯಪ್ಪ ನೇಮಕ: ಶಾಸಕರಿಗೆ ಸನ್ಮಾನ

| Published : Dec 15 2023, 01:31 AM IST

ಬಗರ್‌ಹುಕುಂ ಸಮಿತಿಗೆ ರವಿಚಂದ್ರ ಅಯ್ಯಪ್ಪ ನೇಮಕ: ಶಾಸಕರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಬಗರ್‌ಹುಕುಂ ಸಮಿತಿಗೆ ರವಿಚಂದ್ರ ಅಯ್ಯಪ್ಪ ನೇಮಕ: ಶಾಸಕರಿಗೆ ಸನ್ಮಾನಸನ್ಮಾನ ಸ್ವೀಕರಿಸಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತು

ಸನ್ಮಾನ ಸ್ವೀಕರಿಸಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತು

ಕನ್ನಡಪ್ರಭ ವಾರ್ತೆ ಹುಣಸಗಿ

ಸುರಪುರ ವಿಧಾನಸಭಾ ಕ್ಷೇತ್ರದ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿರುವ ಪಟ್ಟಣದ ರವಿಚಂದ್ರ ಅಯ್ಯಪ್ಪ ಮಲಗಲದಿನ್ನಿ ಅವರು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ರಾಜಾ ವೆಂಕಟಪ್ಪ ನಾಯಕ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದರು.

ರವಿಚಂದ್ರ ಅಯ್ಯಪ್ಪ ಮಲಗಲದಿನ್ನಿ ಮಾತನಾಡಿ, ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಸಲಹೆ ಹಾಗೂ ಸೂಚನೆ ಮೆರೆಗೆ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪ್ರತಿಯೊಬ್ಬರ ವಿಶ್ವಾಸದೊಂದಿಗೆ ಮುನ್ನಡೆಯುತ್ತೇನೆ ಎಂದು ತಿಳಿಸಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷರಾಗಿ, ಕೋಳಿಹಾಳ ಗ್ರಾಮದ ಬಸಮ್ಮ ಜೋತೆಪ್ಪ, ಬೈಲಾಪುರ ಶ್ರೀನಿವಾಸಪುರ (ಮಹಿಳೆ), ಗ್ರಾಮದ ಸುರೇಶ ಮಾನಪ್ಪ (ಪಜಾ) ಹಾಗೂ ತಹಸೀಲ್ದಾರ್‌ ಅವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

ಮುಖಂಡ ನಾಗಣ್ಣ ಸಾಹುಕಾರ ದಂಡಿನ್, ಕೆಪಿಸಿಸಿ ರಾಜ್ಯ ಸದಸ್ಯ ಸಿದ್ದಣ್ಣ ಸಾಹು ಮಲಗಲದಿನ್ನಿ, ಬಾಪುಗೌಡ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್, ಚನ್ನಯ್ಯ ಸ್ವಾಮಿ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹಾಗೂ ಸಿದ್ರಾಮಪ್ಪ ಮುದಗಲ್, ಕರೀಂಸಾಬ ಮುನ್ಸಿ, ಬಾಬು ಹವಾಲ್ದಾರ ಸೇರಿದಂತೆ ಇತರರಿದ್ದರು.

- - -

14ವೈಡಿಆರ್7:

ಸುರಪುರ ಕ್ಷೇತ್ರದ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಸದಸ್ಯರನ್ನಾಗಿ ನೇಮಿಸಿದ ಹಿನ್ನೆಲೆ ರವಿಚಂದ್ರ ಮಲಗಲದಿನ್ನಿ ಅವರು ಹುಣಸಗಿ ಪಟ್ಟಣದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರನ್ನು ಸನ್ಮಾನಿಸಿದರು.

- - -