ಹಿಂದೂ ಧರ್ಮದಲ್ಲಿ ಮಹಾ ಶಿವರಾತ್ರಿ ಹಬ್ಬ ಅತ್ಯಂತ ಮಂಗಳಕರ

| Published : Mar 08 2024, 01:50 AM IST

ಸಾರಾಂಶ

ಮಹಾಶಿವರಾತ್ರಿಯ ದಿನದಂದು ಶಿವನ ದೇವಾಲಯಗಳಿಗೆ ಎಲ್ಲಡೆ ಭಕ್ತರ ದಂಡೇ ಹರಿದುಬರುತ್ತದೆ. ಈ ದಿನ ಮಹಾಶಿವನನ್ನು ವಿವಿಧ ರೀತಿಯಲ್ಲಿ ಆರಾಧಿಸಲಾಗುತ್ತದೆ. ಮನೆ-ದೇವಸ್ಥಾನ ಎಲ್ಲ ಕಡೆ ಶಿವ ಆರಾಧನೆಯೇ ನಮಗೆ ಕಾಣಿಸುತ್ತದೆ, ನಾವು ಶಿವರಾತ್ರಿಯಂದು ಕೆಲವೊಂದು ಕೆಲಸಗಳನ್ನ ಮಾಡುವುದರಿಂದ ಆರ್ಥಿಕವಾಗಿ ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು

ಕನ್ನಡಪ್ರಭ ವಾರ್ತೆ ಸರಗೂರು

ಹಿಂದೂ ಧರ್ಮದಲ್ಲಿ ಮಹಾ ಶಿವರಾತ್ರಿ ಹಬ್ಬವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ ಎಂದು ಶ್ರೀ ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ರವಿಶಾಸ್ರ್ತೀ ತಿಳಿಸಿದರು.

ಪಟ್ಟಣದಲ್ಲಿ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶುಕ್ರವಾರ ರಾತ್ರಿ ನಡೆಯುವ ಶಿವನ ಆರಾಧನೆ ಕುರಿತು ಮಾತನಾಡಿದ ಅವರು, ಶುಕ್ರವಾರ ರಾತ್ರಿಯಿಂದ ಮುಂಜಾನೆವರೆವಿಗೆ ವಿಷೇಶ ಪೂಜೆಯೋಂದಿಗೆ ಶಿವನದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ, ಶನಿವಾರ 11ರ ನಂತರ ಸೋಮೇಶ್ವರ ದೇವಾಸ್ಥಾನದ ಮುಂಭಾಗ ಕೋಂಡತ್ಸವ ನಡೆಯಲಿದೆ,

ಮಹಾಶಿವರಾತ್ರಿಯ ದಿನದಂದು ಶಿವನ ದೇವಾಲಯಗಳಿಗೆ ಎಲ್ಲಡೆ ಭಕ್ತರ ದಂಡೇ ಹರಿದುಬರುತ್ತದೆ. ಈ ದಿನ ಮಹಾಶಿವನನ್ನು ವಿವಿಧ ರೀತಿಯಲ್ಲಿ ಆರಾಧಿಸಲಾಗುತ್ತದೆ. ಮನೆ-ದೇವಸ್ಥಾನ ಎಲ್ಲ ಕಡೆ ಶಿವ ಆರಾಧನೆಯೇ ನಮಗೆ ಕಾಣಿಸುತ್ತದೆ, ನಾವು ಶಿವರಾತ್ರಿಯಂದು ಕೆಲವೊಂದು ಕೆಲಸಗಳನ್ನ ಮಾಡುವುದರಿಂದ ಆರ್ಥಿಕವಾಗಿ ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು ಶಿವರಾತ್ರಿಯ ದಿನ ತಪ್ಪದೇ, ಶಿವನಿಗೆ ಗಂಗೆ ಹಾಗೆ ಬಿಲ್ವದಳದ ಪೂಜೆಯೋಂದಿಗೆ ಶಿವನಿಗೆ ನೀರಿನ ಅಭಿಷೇಕ ಮಾಡುವುದರಿಂದ ಬಹಳ ಒಳ್ಳೆಯ ಫಲಗಳು ಸಿಗುತ್ತದೆ. ಶಿವನನ್ನ ಈ ರೀತಿ ಪೂಜಿಸುವುದು ಖಂಡಿತವಾಗಿಯೂ ಉತ್ತಮ ಫಲಿತಾಂಶವನ್ನು ಸಿಗಲಿದೆ, ಗಂಗೆ ಅಭಿಷೇಕ ಎಲ್ಲ ಸಮಸ್ಯೆಗಳಿಗೆ ಸಹ ಮುಕ್ತಿ ನೀಡುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಭಕ್ತರಿಗೆ ತಿಳಿಸಿದರು.