ಸಾರಾಂಶ
ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಮೂರ್ತಿ ಅಲಂಕಾರಗೊಳಿಸಿರುವುದು. ಬೆಂಗಳೂರಿನ ಪಂಡಿತ ಗುರುರಾಜ ದಾಸರಿಂದ ರಾಯರ ವೈಭವ ಕುರಿತಾಗಿ ವಿಶೇಷ ಪ್ರವಚನ ನಡೆಯಿತು
ಸಿಂಧನೂರು/ತುರ್ವಿಹಾಳ:
ನಗರ ಹಾಗೂ ತಾಲೂಕಿನ ತುರ್ವಿಹಾಳದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ರಾಯರ 353ನೇ ಆರಾಧನಾ ಮಹೋತ್ಸವದ ನಿಮಿತ್ತ ಪೂರ್ವಾರಾಧನೆ ವಿಜೃಂಭಣೆಯಿಂದ ನಡೆಯಿತು.ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಗುರುರಾಯರ ಅಷ್ಟೋತ್ತರ, ರಾಯರಿಗೆ ವಿಶೇಷ ಅಲಂಕಾರ ಹಾಗೂ ಪೂಜೆಗಳು ವಿಧಿವತ್ತಾಗಿ ನಡೆದವು. ಸಿಂಧನೂರಿನ ರಾಯರ ಮಠದಲ್ಲಿ ಬೆಂಗಳೂರಿನ ಪಂಡಿತ ಗುರುರಾಜ ದಾಸರಿಂದ ಹರಿದಾಸರ ಸಂಕೀರ್ತನೆಗಳಲ್ಲಿ ರಾಯರ ವೈಭವ ಕುರಿತಾಗಿ ವಿಶೇಷ ಪ್ರವಚನ ನಡೆಯಿತು. ಪೂರ್ವಾರಾಧನೆಗೂ ಮುನ್ನ ದಿನ ಗೋಪೂಜೆ, ಲಕ್ಷ್ಮಿಪೂಜೆ, ದವಸ ಧಾನ್ಯಗಳ ಪೂಜೆಗಳು ನಡೆದವು.
ತುರ್ವಿಹಾಳ ರಾಯರ ಮಠದಲ್ಲಿ ಮಂಗಳವಾರ ಗುರುರಾಜ ದಾಸರಿಗೆ ಸನ್ಮಾನಿಸಲಾಯಿತು. ಗುರು ಸೇವಾ ಸಮಿತಿ ಅಧ್ಯಕ್ಷ ಗೋಕುಲ್ರಾವ್, ಮಾಜಿ ಅಧ್ಯಕ್ಷ ಶೇಷಗಿರಿರಾವ್ ಚನ್ನಳ್ಳಿ, ಕಾರ್ಯದರ್ಶಿ ರಾಘವೇಂದ್ರ ರಾವ್ ಕುಲಕರಣಿ, ದಡೇಸುಗೂರು, ಶ್ರೀಧರ್ ಕುಲಕರ್ಣಿ ವಕೀಲ ಉಪಸ್ಥಿತರಿದ್ದರು.ಸಿಂಧನೂರಿನ ಕಾರ್ಯಕ್ರಮದಲ್ಲಿ ಮಠದ ವ್ಯವಸ್ಥಾಪಕ ಶಾಮಾಚಾರ್, ವಿಚಾರಣಾಕರ್ತ ರಾಘವೇಂದ್ರರಾವ್ ಕುಲಕರ್ಣಿ, ಅರ್ಚಕ ನವೀನ್ ಆಚಾರ್, ಗುರುರಾಜ ಆಲ್ದಾಳ, ನರಸಿಂಹಾಚಾರ್ ಮಠಾಧಿಕಾರಿ, ಗೋಪಾಲ್ ಆಚಾರ್ ಜೋಶಿ, ಪ್ರಹ್ಲಾದಗುಡಿ, ನಾಗೇಂದ್ರ ಕುಮಾರ್ ಸಾಹುಕಾರ್, ಜಯತೀರ್ಥ ದಾಸ್ ಭಾಗವಹಿಸಿದ್ದರು.